ಕನ್ನಡದ ನಟ ದರ್ಶನ್‌ಗೆ (Darshan) ಫೆ.16ರಂದು ಹುಟ್ಟುಹಬ್ಬದ ಸಂಭ್ರಮವಾಗಿದ್ದು, ಅಭಿಮಾನಿಗಳು ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಇದರ ನಡುವೆ ನಟನ ಕಡೆಯಿಂದ ಹುಟ್ಟುಹಬ್ಬಕ್ಕೆ (Birthday) ಏನಾದರೂ ಸರ್ಪ್ರೈಸ್ ಕಾದಿದ್ಯಾ? ಎಂದು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

ದರ್ಶನ್ ಹುಟ್ಟುಹಬ್ಬಕ್ಕೆ 15 ದಿನಗಳು ಬಾಕಿಯಿದೆ. ಈ ಕುರಿತು ನಟನ ಫ್ಯಾನ್ಸ್ ಅಪ್‌ಡೇಟ್ ಹಂಚಿಕೊಂಡಿದ್ದು, ಅವರ ಹುಟ್ಟುಹಬ್ಬಕ್ಕೆ ತೆರೆಮರೆಯಲ್ಲಿ ತಯಾರಿ ನಡೆಯುತ್ತಿದೆ. ಪ್ರತಿ ವರ್ಷ ನಟನ ಹೆಸರಲ್ಲಿ ಅಭಿಮಾನಿಗಳು ದವಸ ದಾನ್ಯ ವಿತರಿಸೋದು, ಅನ್ನದಾನ, ರಕ್ತದಾನ ಹೀಗೆ ನಾನಾ ಕಾರ್ಯಗಳನ್ನು ಮಾಡುತ್ತಾರೆ. ಈ ವರ್ಷವೂ ಕೂಡ ದರ್ಶನ್ ಹೆಸರಲ್ಲಿ ಏನೆಲ್ಲಾ ತಯಾರಿ ಮಾಡುತ್ತಾರೆ ಫ್ಯಾನ್ಸ್ ಎಂದು ಕಾದುನೋಡಬೇಕಿದೆ.
https://youtu.be/3gYUPQBGmRw?si=lSIpYsVTRaJBYK5r
ಇನ್ನೂ ಈ ವರ್ಷ ದರ್ಶನ್ ಅವರು ಮೈಸೂರು ಅಥವಾ ಬೆಂಗಳೂರು ಇದರಲ್ಲಿ ಎಲ್ಲಿ ಬರ್ತ್‌ಡೇ ಆಚರಣೆ ಮಾಡುತ್ತಾರೆ. ಸದ್ಯ ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್ ಈ ಬಾರಿ ಅಭಿಮಾನಿಗಳನ್ನು ಭೇಟಿ ಮಾಡ್ತಾರಾ? ಎಂದು ಕಾದುನೋಡಬೇಕಿದೆ.
