ಸೀಮಂತ ಶಾಸ್ತ್ರದ ಸಂಭ್ರಮದಲ್ಲಿ ‘ನಾಗಿಣಿ’ ಸೀರಿಯಲ್ ನಟಿ ಶಿಲ್ಪಾ ರವಿ

ನಾಗಿಣಿ (Nagini), ಜೀವ ಹೂವಾಗಿದೆ (Jeeva Hoovagide) ಸೀರಿಯಲ್ ಮೂಲಕ ಪರಿಚಿತರಾದ ಶಿಲ್ಪಾ ರವಿ ಇದೀಗ ಸೀಮಂತ ಶಾಸ್ತ್ರದ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿದೆ. ಕಾರ್ಯಕ್ರಮದ ಸುಂದರ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ.

ಮೊದಲ ಮಗುವನ್ನು ಬರಮಾಡಿಕೊಳ್ಳುವ ನಿರೀಕ್ಷೆಯಲ್ಲಿರುವ ನಟಿಯ ಸೀಮಂತ ಕಾರ್ಯಕ್ರಮ ಗ್ರ್ಯಾಂಡ್ ಆಗಿ ಆಯೋಜಿಸಿದ್ದು, ಕ್ರೀಮ್ ಮತ್ತು ಪಿಂಕ್ ಕಾಂಬಿನೇಷನ್‌ ರೇಶ್ಮೆ ಸೀರೆಯಲ್ಲಿ ಶಿಲ್ಪಾ ರವಿ ಕಂಗೊಳಿಸಿದ್ದಾರೆ. ಪತಿ ದರ್ಶಕ್ (Actor Darshak) ಕೂಡ ಪಿಂಕ್ ಶರ್ಟ್ ಮತ್ತು ಬಿಳಿ ಬಣ್ಣ ಪಂಚೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಶಿಲ್ಪಾ ರವಿ ಸೀಮಂತ ಕಾರ್ಯಕ್ರಮಕ್ಕೆ ನಟಿ ದೀಪಿಕಾ ದಾಸ್ (Deepika Das) ಸೇರಿದಂತೆ ಅನೇಕರು ಭಾಗಿಯಾಗಿ ಶಿಲ್ಪಾ ಮತ್ತು ದರ್ಶಕ್ ದಂಪತಿಗೆ ಶುಭಹಾರೈಸಿದ್ದರು. ಇದನ್ನೂ ಓದಿ:ನಿರ್ದೇಶಕ ಸಂಗೀತ್ ಶಿವನ್ ನಿಧನ


ದರ್ಶಕ್ ಮತ್ತು ಶಿಲ್ಪಾ ಪ್ರೀತಿಸಿ ಮದುವೆಯಾದವರು. ಗುರುಹಿರಿಯರ ಸಮ್ಮತಿಯ ಮೇರೆಗೆ 2020ರಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಶಿಲ್ಪಾ ಈಗ ಬಣ್ಣದ ಬದುಕಿನಿಂದ ವಿರಾಮ ತೆಗೆದುಕೊಂಡಿದ್ದಾರೆ. ದರ್ಶಕ್ ಪರಭಾಷೆಯ ಸೀರಿಯಲ್‌ನಲ್ಲಿ ಬ್ಯುಸಿಯಾಗಿದ್ದಾರೆ.