ಚಿಕ್ಕಣ್ಣ ಹೇರ್ ಸ್ಟೈಲ್ ಬದಲಾಯಿಸಿಕೊಂಡಿದ್ದಕ್ಕೆ ಕಾರಣ ಏನು?

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಸದ್ಯಕ್ಕೆ ಭಾರೀ ಬ್ಯುಸಿಯಾಗಿರೋ ಹಾಸ್ಯ ನಟ ಚಿಕ್ಕಣ್ಣ. ಆರಂಭದಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸುತ್ತಾ ಬಂದಿದ್ದ ಚಿಕ್ಕಣ್ಣ ಇದೀಗ ಏಕಕಾಲಕ್ಕೇ ಹಲವಾರು ಚಿತ್ರಗಳನ್ನು ಒಪ್ಪಿಕೊಳ್ಳುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಹೀಗೆ ಕೈತುಂಬಾ ಚಿತ್ರಗಳನ್ನು ಹೊಂದಿರುವ ಚಿಕ್ಕಣ್ಣ ಇದೀಗ ಸದ್ದು ಮಾಡುತ್ತಿರೋದು ತಮ್ಮ ಹೇರ್ ಸ್ಟೈಲು ಬದಲಾಗಿರುವ ಕಾರಣಕ್ಕೆ!

ಗಿಡ್ಡ ಕೂದಲನ್ನೇ ಒಂದಷ್ಟು ವಿನ್ಯಾಸಗಳಿಗೆ ಒಗ್ಗಿಸಿಕೊಳ್ಳುತ್ತಾ ಚಿತ್ರದಿಂದ ಚಿತ್ರಕ್ಕೆ ಬದಲಾವಣೆ ಮಾಡಿಕೊಂಡು ಬಂದಿದ್ದವರು ಚಿಕ್ಕಣ್ಣ. ಆದರೀಗ ಅವರ ಹೇರ್ ಸ್ಟೈಲು ಏಕಾಏಕಿ ಸಂಪೂರ್ಣವಾಗಿ ಬದಲಾಗಿದೆ, ಕರ್ಲಿ ಹೇರನ್ನು ಸ್ಟ್ರೈಟ್ ಮಾಡಿ ಅದಕ್ಕೆ ಕಲರಿಂಗ್ ಮಾಡಿಸಿಕೊಂಡಿದ್ದಾರೆ. ಈ ಗೆಟಪ್ಪಿನಲ್ಲಿ ಕಾಣಿಸಿಕೊಂಡೇಟಿಗೆ ಪ್ರೇಕ್ಷಕರೆಲ್ಲರಲ್ಲಿ ಚಿಕ್ಕಣ್ಣ ಹೀರೋ ಆಗಲು ರೆಡಿಯಾಗುತ್ತಿದ್ದಾರಾ ಎಂಬ ಪ್ರಶ್ನೆ ಮೂಡಿಕೊಂಡಿದ್ದು ಸುಳ್ಳಲ್ಲ.

ಆದರೆ, ಚಿಕ್ಕಣ್ಣ ಏಕಾಏಕಿ ಹೊಸಾ ಅವತಾರದಲ್ಲಿ ಕಾಣಿಸಿಕೊಂಡಿದ್ದರ ಹಿಂದೆ ಬೇರೊಂದು ವಿಚಾರವಿದೆ. ಇದಕ್ಕೆ ಕಾರಣ ಕೆ ಮಂಜು ಪುತ್ರ ಶ್ರೇಯಸ್ ನಟನೆಯ ಪಡ್ಡೆಹುಲಿ ಚಿತ್ರ. ಗುರುದೇಶಪಾಂಡೆ ನಿರ್ದೇಶನದ ಈ ಚಿತ್ರದಲ್ಲಿ ಚಿಕ್ಕಣ್ಣ ಮಜವಾದೊಂದು ಪಾತ್ರ ಮಾಡಿದ್ದಾರೆ. ಅದಕ್ಕೆಂದೇ ಶ್ರಮ ವಹಿಸಿ ಹೊಸಾ ಥರದ ಹೇರ್ ಸ್ಟೈಲಿಗೆ ಕೂದಲನ್ನು ಪಳಗಿಸಿಕೊಂಡಿದ್ದಾರೆ!

ಇದೆಲ್ಲ ಏನೇ ಇದ್ದರೂ ಈ ಹೊಸಾ ಅವತಾರ ಚಿಕ್ಕಣ್ಣನ ಅಭಿಮಾನಿಗಳಿಗೆಲ್ಲ ಇಷ್ಟವಾಗಿದೆಯಂತೆ!

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *