ಕೌರವನ ಮನೆಯಲ್ಲಿ ಶುರುವಾಯ್ತು ಮಗಳ ಮದುವೆ ಸಂಭ್ರಮ

ಬೆಂಗಳೂರು: ಸ್ಯಾಂಡಲ್‍ವುಡ್ ‘ಕೌರವ’ ಎಂದು ಖ್ಯಾತಿ ಪಡೆದಿರುವ ಬಿ.ಸಿ ಪಾಟೀಲ್ ಅವರ ಮನೆಯಲ್ಲಿ ತಮ್ಮ ಮಗಳ ಮದುವೆ ಸಂಭ್ರಮ ಶುರುವಾಗಿದೆ.

ಬಿ.ಸಿ ಪಾಟೀಲ್ ಹಾಗೂ ವನಜಾ ಪಾಟೀಲ್ ಅವರ ಪುತ್ರಿ ಸೃಷ್ಟಿ ಪಾಟೀಲ್ ಇತ್ತೀಚೆಗೆ ತಮ್ಮ ನಿಶ್ಚಿತಾರ್ಥವನ್ನು ಮಾಡಿಕೊಂಡರು. ಇಡೀ ಸ್ನೇಹಿತರ ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಸೃಷ್ಟಿ ಶಾಸ್ತ್ರೋಕ್ತವಾಗಿ ತಮ್ಮ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದಾರೆ.

ಸುಜಯ್ ಬೇಲೂರು ಉದ್ಯಮಿಯಾಗಿದ್ದು, ಸೃಷ್ಟಿ ಪಾಟೀಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಸುಜಯ್ ಮೂಲತಃ ಬೇಲೂರಿನವರಾಗಿದ್ದು, ಬೆಂಗಳೂರಿನಲ್ಲಿ ಸ್ವಂತ ಉದ್ಯಮವನ್ನು ಮಾಡಿಕೊಂಡಿದ್ದಾರೆ. ಸೃಷ್ಟಿ ಹಾಗೂ ಸುಜಯ್ ನಾಲ್ಕು ವರ್ಷದಿಂದ ಸ್ನೇಹಿತರಾಗಿದ್ದರು. ನಂತರ ಇವರಿಬ್ಬರ ಸ್ನೇಹ ಪ್ರೀತಿಗೆ ತಿರುಗಿತು. ಸದ್ಯ ಈಗ ಇಬ್ಬರ ಕುಟುಂಬದವರ ಒಪ್ಪಿಗೆ ಪಡೆದು ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಸದ್ಯ ಸುಜಯ್ ಹಾಗೂ ಸೃಷ್ಟಿ ನಿಶ್ಚಿತಾರ್ಥ ಸಂಭ್ರಮ ಅದ್ಧೂರಿಯಾಗಿ ನಡೆದಿದೆ. ಈ ಸಂಭ್ರಮದಲ್ಲಿ ಬಿ.ಸಿ ಪಾಟೀಲ್ ಅವರ ಕುಟುಂಬದ ಆಪ್ತ ಸ್ನೇಹಿತರು, ಉದ್ಯಮಿ ಹಾಗೂ ರಾಜಕೀಯ ಗಣ್ಯರು ಪಾಲ್ಗೊಂಡಿದ್ದರು. ಸುಜಯ್ ಹಾಗೂ ಸೃಷ್ಟಿ ಮುಂದಿನ ವರ್ಷ ಜನವರಿ ತಿಂಗಳಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಎಂಬುದು ತಿಳಿದು ಬಂದಿದೆ. ಸದ್ಯ ಇವರಿಬ್ಬರು ಯಾವ ಸ್ಥಳ ಹಾಗೂ ಯಾವ ದಿನಾಂಕದಂದು ಮದುವೆಯಾಗುತ್ತಿದ್ದಾರೆ ಎಂಬ ಮಾಹಿತಿಯನ್ನು ಅಧಿಕೃತವಾಗಿ ಬಿಟ್ಟುಕೊಟ್ಟಿಲ್ಲ.

ಸೃಷ್ಟಿ ಪಾಟೀಲ್ ‘ಹ್ಯಾಪಿ ನ್ಯೂ ಇಯರ್’ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟಿದ್ದರು. ಅದಾದ ಬಳಿಕ ಚುನಾವಣೆಯಲ್ಲಿ ತನ್ನ ತಂದೆಯ ಪರವಾಗಿ ಪ್ರಚಾರ ಮಾಡಿ ಅವರ ಗೆಲುವಿಗೆ ಕಾರಣರಾಗಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *