ನಟ ಅಕ್ಷಯ್​ ಕುಮಾರ್​ಗೆ ಮಾತೃವಿಯೋಗ

ಮುಂಬೈ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ತಾಯಿ ವಿಧಿವಶರಾಗಿದ್ದು, ಅವರನ್ನು ನೆನೆದು ಸೋಶಿಯಲ್ ಮೀಡಿಯಾದಲ್ಲಿ ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ.

ನಾನು ಇಂದು ನನ್ನ ಅಸ್ತಿತ್ವವನ್ನು ಕಳೆದುಕೊಂಡಿದ್ದೇನೆ. ನನ್ನ ಮೂಲವನ್ನು ಕಳೆದುಕೊಂಡಿರುವುದಕ್ಕೆ ನನಗೆ ತುಂಬಾ ನೋವಾಗುತ್ತಿದೆ. ನನ್ನ ಅಮ್ಮ ಅರುಣಾ ಭಾಟಿಯಾ ಇಂದು ನಮ್ಮನ್ನು ಅಗಲಿದ್ದಾರೆ. ಈ ಜಗತ್ತನ್ನು ತೊರೆದು ನನ್ನ ತಂದೆ ಜೊತೆ ಸೇರಿಕೊಂಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಈ ಹಿನ್ನೆಲೆ ಇವರ ಅಭಿಮಾನಿಗಳು ಮತ್ತು ಸಂಬಂಧಿಕರು ಸಂತಾಪವನ್ನು ಸೂಚಿಸಿದ್ದಾರೆ. ಇದನ್ನೂ ಓದಿ: ದಿ. ಕಲಾಕೇಸರಿ ಉದಯಕುಮಾರ್ ಪತ್ನಿ ಸುಶೀಲಾದೇವಿ ವಿಧಿವಶ

ಅಕ್ಷಯ್ ಅವರ ತಾಯಿ ಅರುಣಾ ಭಾಟಿಯಾ ತುಂಬಾ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ಹಿನ್ನೆಲೆ ಅವರನ್ನು ಮುಂಬೈನ ಹಿರಾನಂದನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅರುಣಾ ಭಾಟಿಯಾ ಸಾವನ್ನಪ್ಪಿದ್ದಾರೆ.

 

View this post on Instagram

 

A post shared by Akshay Kumar (@akshaykumar)

ಅಕ್ಷಯ್ ಯುಕೆಯಲ್ಲಿದ್ದು ತನ್ನ ತಾಯಿಯ ಆರೋಗ್ಯ ಸ್ಥಿತಿ ತಿಳಿದು ಮತ್ತೆ ಮುಂಬೈಗೆ ಮರಳಿದ್ದರು. ಒಂದು ವಾರದ ಹಿಂದೆ ಅಕ್ಷಯ್ ಇನ್‍ಸ್ಟಾಗ್ರಾಮ್‍ನಲ್ಲಿ, ನನ್ನ ತಾಯಿಯ ಮೇಲೆ ನಿಮಗಿರುವ ಕಾಳಜಿ ಕಂಡು ನನಗೆ ಖುಷಿಯಾಗಿದೆ. ಇದು ನನಗೆ ಮತ್ತು ನನ್ನ ಕುಟುಂಬಕ್ಕೆ ಬಹಳ ಕಷ್ಟದ ಸಮಯವಾಗಿದೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದ ನನ್ನ ತಾಯಿಗೆ ತುಂಬಾ ಮುಖ್ಯ ಎಂದು ಬರೆದು ಪೋಸ್ಟ್ ಮಾಡಿದ್ದರು. ಇದನ್ನೂ ಓದಿ: ಹಿಮಾಚಲ ಪ್ರದೇಶದಿಂದ ಬೆಂಗ್ಳೂರಿಗೆ ಬಂದು ಮಂಜನನ್ನು ಭೇಟಿಯಾದ ನಟಿ ನಿಧಿ

 

View this post on Instagram

 

A post shared by Akshay Kumar (@akshaykumar)

ಅಕ್ಷಯ್ ಅಮ್ಮಂದಿರ ದಿನಾಚರಣೆಯೆಂದು ತಮ್ಮ ತಾಯಿ ಫೋಟೋವನ್ನು ಇನ್‍ಸ್ಟಾಗ್ರಾಮ್ ನಲ್ಲಿ ಹಾಕಿ, ತಾಯಿಗಿಂತ ಬೇರೆ ಇಲ್ಲ ಎಂದು ಬರೆದು ಪೋಸ್ಟ್ ಮಾಡಿದ್ದರು.

Comments

Leave a Reply

Your email address will not be published. Required fields are marked *