ನನ್ನನ್ನು ಕೊಲ್ಲಲು ನಟ ಅಕ್ಷಯ್ ಕುಮಾರ್ ಸುಪಾರಿ ಕೊಟ್ಟಿದ್ದಾರೆ: ಖಾನ್ ಟ್ವೀಟ್

ಬಾಲಿವುಡ್ (Bollywood)  ನ ಖ್ಯಾತ ನಟ ಅಕ್ಷಯ್ ಕುಮಾರ್ ಮೇಲೆ ಗುರುತರ ಆರೋಪ ಮಾಡಿದ್ದಾರೆ ನಟ, ನಿರ್ಮಾಪಕ ಹಾಗೂ ಸ್ವಯಂ ಘೋಷಿತ ವಿಮರ್ಶಕ ಕಮಲ್ ಆರ್ ಖಾನ್ (Kamal R Khan). ಈ ಕುರಿತು ಟ್ವೀಟ್ ಮಾಡಿರುವ ಅವರು ‘ನನ್ನನ್ನು ಜೈಲಿಗೆ (Jail) ಕಳುಹಿಸಿ ಸಾಯಿಸಲು ಅಕ್ಷಯ್ ಕುಮಾರ್ ಸುಪಾರಿ ಕೊಟ್ಟಿದ್ದಾರೆ’ ಎಂದು ಅವರು ಬರೆದುಕೊಂಡಿದ್ದಾರೆ.

ಬಾಲಿವುಡ್ ನಲ್ಲಿ ನನಗೆ ತುಂಬಾ ಜನ ಸ್ನೇಹಿತರು ಇದ್ದಾರೆ. ಅಕ್ಷಯ್ ಕುಮಾರ್ (Akshay Kumar) ಅವರನ್ನು ಹೊರತು ಪಡಿಸಿ ಎಲ್ಲರೂ ನನ್ನೊಂದಿಗೆ ಚೆನ್ನಾಗಿದ್ದಾರೆ. ಆದರೆ, ಅಕ್ಷಯ್ ಕುಮಾರ್ ನನ್ನ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ. ನನ್ನ ಸಾವು ಬಯಸುತ್ತಿದ್ದಾರೆ. ಜೈಲಿಗೆ ಕಳುಹಿಸಿ, ಅಲ್ಲಿಯೇ ಸಾಯಿಸಲು (Murder) ಅವರು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಮುಂಬೈನಿಂದ ಸ್ಯಾಂಡಲ್ ವುಡ್ ಗೆ ಬಂದ ಪ್ರಾಚಿ ಶರ್ಮಾ

ಅವರನ್ನು ನಾನು ಅಕ್ಷಯ್ ಕುಮಾರ್ ಎಂದು ಕರೆಯಲಾರೆ. ಅವರು ನಮ್ಮ ಭಾರತದವರು ಅಲ್ಲ. ಆತ ಕೆನಡಿಯನ್. ಕೆನಡಾದ ಪೌರತ್ವ ಹೊಂದಿದ್ದಾರೆ. ಹಾಗಾಗಿ ನಾನು ಅವರನ್ನು ಕೆನಡಿಯನ್ ಕುಮಾರ್ ಎಂದು ಕರೆಯುತ್ತಾನೆ. ಹಾಗೆ ಕರೆದರೆ ಅವರಿಗೆ ಸಿಟ್ಟು ಬರುತ್ತದೆ. ಇದೇ ಕಾರಣಕ್ಕಾಗಿ ಅವರು ನನ್ನ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ ಎಂದರು.

 

ಈ ರೀತಿಯಾಗಿ ಕಮಲ್ ಆರ್ ಖಾನ್ ಆರೋಪ ಮಾಡುತ್ತಿರುವುದು ಮೊದಲೇನೂ ಅಲ್ಲ. ಅನೇಕರ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದ್ದಾರೆ. ಈ ಕಾರಣಕ್ಕಾಗಿ ಅವರು ಜೈಲಿಗೂ ಹೋಗಿದ್ದಾರೆ. ಆದರೂ, ನಟ-ನಟಿಯರ ಮೇಲೆ, ನಿರ್ದೇಶಕರ ಮೇಲೆ, ನಿರ್ಮಾಪಕರ ಮೇಲೆ ಆರೋಪ ಮಾಡುವುದನ್ನು ಅವರು ಬಿಟ್ಟಿಲ್ಲ.