‘ಹೌಸ್‌ಫುಲ್ 5’ ಚಿತ್ರತಂಡ ಸೇರಿಕೊಂಡ ಅಭಿಷೇಕ್ ಬಚ್ಚನ್

ಬಾಲಿವುಡ್ ನಟ ಅಭಿಷೇಕ್ ಬಚ್ಚನ್ (Abhishek Bachchan) ಅವರು ಇದೀಗ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ. ‘ಹೌಸ್‌ಫುಲ್’ (Housefull- 5) ಸೀಕ್ವೆಲ್‌ನಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಅಕ್ಷಯ್ ಕುಮಾರ್ ಜೊತೆ ಮತ್ತೆ ನಗಿಸಲು ಅಭಿಷೇಕ್ ಬಚ್ಚನ್ ರೆಡಿಯಾಗಿದ್ದಾರೆ.

ಅಕ್ಷಯ್ ಕುಮಾರ್ (Akshay Kumar) ಮತ್ತು ರಿತೇಶ್ ದೇಶ್‌ಮುಖ್ (Rithesh Deshmukh) ಮೊದಲಾದವರು ನಟಿಸಿರುವ ಈ ಚಿತ್ರವನ್ನು ಪಾರ್ಟ್ 5 ಮಾಡಲು ಸಿದ್ಧತೆ ಮಾಡಲಾಗುತ್ತಿದೆ. ಅಕ್ಷಯ್ ಜೊತೆ ಅನಿಲ್ ಕಪೂರ್, ನಾನಾ ಪಾಟೇಕರ್, ರಿತೇಶ್, ಚಂಕಿ ಪಾಂಡೆ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಹೌಸ್‌ಫುಲ್-5ರಲ್ಲಿ ಅಭಿಷೇಕ್ ಬಚ್ಚನ್ ಕೂಡ ಲೀಡ್ ರೋಲ್‌ನಲ್ಲಿ ನಟಿಸಲಿದ್ದಾರೆ. ಈ ಚಿತ್ರವನ್ನು ಚಿತ್ರವನ್ನು ಸಾಜಿದ್ ನಿರ್ಮಾಣ ಮಾಡಲಿದ್ದಾರೆ.

‘ಹೌಸ್‌ಫುಲ್’ ನನ್ನ ಫೇವರಿಟ್ ಕಾಮಿಡಿ ಫ್ರಾಂಚೈಸ್‌ಗಳಲ್ಲಿ ಒಂದು. ಇದರಲ್ಲಿ ನಟಿಸೋದು ಮನೆಗೆ ಮರಳಿದ ಭಾವನೆ ಕೊಡುತ್ತದೆ. ಸಾಜಿದ್ ಜೊತೆ ಕೆಲಸ ಮಾಡೋದು ಖುಷಿ ನೀಡುತ್ತದೆ. ಅಕ್ಷಯ್ ಹಾಗೂ ರಿತೇಶ್ ಜೊತೆ ಸೆಟ್‌ನಲ್ಲಿ ಫನ್ ಮಾಡಲು ಕಾದಿದ್ದೇನೆ ಎಂದು ಖುಷಿಯಿಂದ ಅಭಿಷೇಕ್ ಬಚ್ಚನ್ ಮಾತನಾಡಿದ್ದಾರೆ. ಇದನ್ನೂ ಓದಿ:‘ಕೊರಗಜ್ಜ’ ಚಿತ್ರಕ್ಕೆ ಅಭಯ ನೀಡಿದ ದೈವ ಕೊರಗಜ್ಜ

‘ಹೌಸ್‌ಫುಲ್’ ಸಿನಿಮಾ ಅಂದರೆ ಅಲ್ಲಿ ನಗುವಿಗೆ ಕೊರತೆ ಇರುವುದಿಲ್ಲ. ಈ ಸಿನಿಮಾದ ಸೀಕ್ವೆಲ್ ಬರುವ ಬಗ್ಗೆ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.