ಸುಳ್ಳು ಸುದ್ದಿಗೆ ನಟ ಅಭಿಷೇಕ್ ಅಂಬರೀಶ್ ಬೇಸರ

ಮಂಡ್ಯ: ತಮ್ಮ ವಿರುದ್ಧದ ಸುದ್ದಿ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿರುವ ಬಗ್ಗೆ ನಟ ಅಭಿಷೇಕ್ ಅಂಬರೀಶ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಸುಳ್ಳು ಸುದ್ದಿ ಕುರಿತು ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದ ಅಭಿಷೇಕ್, ಉದ್ದೇಶಪೂರ್ವಕವಾಗಿ ಈ ರೀತಿ ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಸುಳ್ಳು ಸುದ್ದಿ ಹರಡುವ ಬಗ್ಗೆ ನಾವು ಮೊದಲೇ ಜನರಿಗೆ ತಿಳಿಸಿದ್ದೇವೆ. ಸೋಶಿಯಲ್ ಮೀಡಿಯಾದಲ್ಲಿ ಏನೇನೋ ಪ್ಲಾನ್ ಗಳು ನಡೆಯುತ್ತಲೇ ಇರುತ್ತವೆ. ಚುನಾವಣೆ ಮುಗಿದ ಮಾರನೇ ದಿನ(ಇಂದು) ಮಂಡ್ಯದ ಮಹಾವೀರ ಸರ್ಕಲ್‍ನಲ್ಲಿರುವ ಅಂಗಡಿಯಲ್ಲಿ ಟೀ ಕುಡಿಯುತ್ತಾ ಕುಳಿತಿರುತ್ತೇನೆ. ಯಾರೂ ಬೇಕಾದ್ರು ಬಂದು ನನ್ನನ್ನು ಭೇಟಿ ಮಾಡಬಹುದು. ಆಗ ಸಿಂಗಾಪುರದಲ್ಲಿದ್ದೀನಾ, ಯುಎಸ್‍ಎನಲ್ಲಿದ್ದೇನಾ ಅಥವಾ ಮಂಡ್ಯದಲ್ಲೇ ಇದ್ದೇನಾ ಎಂಬುದನ್ನು ಜನನೇ ನೋಡಲಿ ಎಂದು ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಟಿಕೆಟ್‍ನಲ್ಲಿ ನನ್ನ ಹೆಸರು ಕೂಡ ತಪ್ಪಿದೆ. ಒಟ್ಟಿನಲ್ಲಿ ಜನ ಯೋಚನೆ ಮಾಡಿ ಅವರಾಗಿಯೇ ತೀರ್ಮಾನ ಮಾಡಲಿ. ಜನರಲ್ಲಿ ಗೊಂದಲ ಮೂಡಿಸಲು ಇದನ್ನೆಲ್ಲಾ ಮಾಡುತ್ತಿದ್ದಾರೆ ಎಂದು ಅಭಿಷೇಕ್ ಆಕ್ರೋಶ ವ್ಯಕ್ತಪಡಿಸಿದರು.

ಸುಳ್ಳು ಸುದ್ದಿ ಏನು?
ಚುನಾವಣೆ ಮುಗಿದ ಬಳಿಕ ನಟ ಅಭಿಷೇಕ್ ಅಂಬರೀಶ್ ಮತ್ತು ಸುಮಲತಾ ಏ. 19(ಇಂದು) ಸಿಂಗಾಪುರಕ್ಕೆ ಹೋಗುತ್ತಾರೆ. ಸಿಂಗಾಪರಕ್ಕೆ ತೆರಳಲು ಈಗಾಗಲೇ ಟಿಕೆಟ್ ಕೂಡ ಬುಕ್ ಮಾಡಿದ್ದಾರೆ ಎನ್ನಲಾದ ನಕಲಿ ಟಿಕೆಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

Comments

Leave a Reply

Your email address will not be published. Required fields are marked *