ತಲಕಾವೇರಿಗೆ ವಿಶೇಷ ಪೂಜೆ ಸಲ್ಲಿಸಿದ ಅಭಿಷೇಕ್, ಅವಿವಾ ದಂಪತಿ

ಟ ಅಭಿಷೇಕ್-ಅವಿವಾ (Aviva) ಜೋಡಿ ತಲಕಾವೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕೊಡಗು ಜಿಲ್ಲೆಯ ತಲಕಾವೇರಿಗೆ ಅಭಿಷೇಕ್ ದಂಪತಿ ಭೇಟಿ ನೀಡಿದ್ದಾರೆ. ಈ ಕುರಿತು ನಟಿ, ಸಂಸದೆ ಸುಮಲತಾ (Sumalatha) ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಅಪ್‌ಡೇಟ್ ಹಂಚಿಕೊಂಡಿದ್ದಾರೆ.

ಕಾವೇರಿ ಉಗಮ ಸ್ಥಾನ ತಲಕಾವೇರಿ (Tala Cauvery) ಅಭಿಷೇಕ್-ಅವಿವಾ‌ ದಂಪತಿ ತಾಯಿ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿ, ಕಾವೇರಿ ನದಿ ಪಾತ್ರದಲ್ಲಿ ಮಳೆಯಾಗಿ ಕಾವೇರಿ ಬಗೆಹರಿಯಲೆಂದು ಪ್ರಾರ್ಥಿಸಿದರು ಎಂದು ಸುಮಲತಾ ಬರೆದುಕೊಂಡಿದ್ದಾರೆ. ಅಭಿಷೇಕ್ ದಂಪತಿ ವಿಶೇಷ ಪೂಜೆ ಸಲ್ಲಿಸಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ರೈತರಿಗೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ಅಭಿಷೇಕ್ ಹೆಗಲ ಮೇಲೆ ಹಸಿರು ಟಾವೆಲ್ ಹಾಕಿ ಪೂಜೆ ಸಲ್ಲಿಸಿದ್ದಾರೆ. ಅವಿವಾ ಕೆಂಪು ಬಣ್ಣ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಪೂಜೆಯಲ್ಲಿ ಅವಿವಾ ಭಾಗಿಯಾಗಿರುವ ರೀತಿ ನೋಡಿ ಅಂಬಿ ಕುಟುಂಬಕ್ಕೆ ಸರಿಯಾದ ಸೊಸೆ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ಸೂಚಿಸಿದ್ದಾರೆ. ಇದನ್ನೂ ಓದಿ:ದೊಡ್ಮನೆ ಆಟಕ್ಕೆ ಜೊತೆಯಾಗ್ತಾರಾ ಮೇಘಾ ಶೆಟ್ಟಿ? ಕೊನೆಗೂ ಸಿಕ್ತು ಉತ್ತರ

ಅಭಿಷೇಕ್ ಅಂಬರೀಶ್ (Abhishek Ambareesh) ನಟನೆಯ ‘ಬ್ಯಾಡ್ ಮ್ಯಾನರ್ಸ್’ (Bad Manners) ಸಿನಿಮಾ ರಿಲೀಸ್‌ಗೆ ರೆಡಿಯಿದೆ. ನಿರ್ದೇಶಕ ಮಹೇಶ್ ಕುಮಾರ್ ಜೊತೆಗಿನ ಹೊಸ ಚಿತ್ರಕ್ಕೆ ಸದ್ಯದಲ್ಲೇ ಚಾಲನೆ ಸಿಗಲಿದೆ. ಹೆಬ್ಬುಲಿ ಡೈರೆಕ್ಟರ್ ಜೊತೆಗಿನ ‘ಕಾಳಿ’ ಸಿನಿಮಾದಲ್ಲಿ ಕೂಡ ಅಭಿಷೇಕ್ ಕಾಣಿಸಿಕೊಳ್ಳಲಿದ್ದಾರೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]