ಮಹಿಳಾ ಎಸ್‍ಐ ಮುಂದೆಯೇ ಡ್ರ್ಯಾಗರ್ ಹಿಡಿದು ಅಟ್ಟಹಾಸ – ಪುಡಿ ರೌಡಿ ಅರೆಸ್ಟ್

ತುಮಕೂರು: ಮಹಿಳಾ ಎಸ್‍ಐ ಮುಂದೆಯೇ ಡ್ರ್ಯಾಗರ್ ಹಿಡಿದು ಆತಂಕ ಮೂಡಿಸಿದ್ದ ಪುಡಿ ರೌಡಿಯೊಬ್ಬನನ್ನು ತುಮಕೂರು (Tumakuru) ಪೊಲೀಸರು (Police) ಬಂಧಿಸಿದ್ದಾರೆ.

ಬಂಧಿತ ರೌಡಿಯನ್ನು ಮಧು ಅಲಿಯಾಸ್ ಮೋಜ ಎಂದು ಗುರುತಿಸಲಾಗಿದೆ. ಆರೋಪಿ ನಗರದ ಖಾಸಗಿ ಬಸ್ ನಿಲ್ದಾಣದ ಬಳಿ ಡ್ರ್ಯಾಗರ್ ಹಿಡಿದು ಸಾರ್ವಜನಿಕರಿಗೆ ಬೆದರಿಕೆ ಹಾಕಿ ಮೊಬೈಲ್ ಕಳ್ಳತನ ಮಾಡಿದ್ದಾನೆ. ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಆರೋಪಿ ಬಂಧನಕ್ಕೆ ಪೊಲೀಸರು ತೆರಳಿದ್ದಾರೆ. ಈ ವೇಳೆ ಮಹಿಳಾ ಎಸ್‍ಐ ಮಂಗಳಮ್ಮ ಅವರ ಮುಂದೆಯೂ ಆರೋಪಿ ಡ್ರ್ಯಾಗರ್ ಹಿಡಿದು ಪುಂಡಾಟ ಮಾಡಿದ್ದಾನೆ. ಇದನ್ನೂ ಓದಿ: ಮೆಡಿಕಲ್ ಸೀಟ್ ಕೊಡಿಸುವುದಾಗಿ 20 ಜನರಿಗೆ ಲಕ್ಷ ಲಕ್ಷ ವಂಚನೆ – ಆರೋಪಿ ಅಂದರ್

ಸುಮಾರು ಅರ್ಧ ಗಂಟೆಗಳ ಕಾಲ ಎಸ್‍ಐ ಮುಂದೆ ಆರೋಪಿ ಡ್ರ್ಯಾಗರ್ ಹಿಡಿದು ಹುಚ್ಚಾಟ ಮಾಡಿದ್ದಾನೆ. ಬಳಿಕ ಪೊಲೀಸರು ಹರಸಾಹಸಪಟ್ಟು ಆರೋಪಿಯನ್ನು ಹಿಡಿದಿದ್ದಾರೆ. ಅಲ್ಲದೇ ಆತನ ಜೊತೆಯಿದ್ದ ಮನೋಜ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಇತ್ತೀಚೆಗಷ್ಟೇ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ಮಧು, ಜಾಮೀನಿನ ಮೇಲೆ ಹೊರಗೆ ಬಂದಿದ್ದ. ಜೈಲಿನಿಂದ ಹೊರ ಬಂದ ಕೆಲವೇ ದಿನಗಳಲ್ಲಿ ಮತ್ತೆ ಜನರಿಗೆ ತೊಂದರೆ ಕೊಡುವುದನ್ನು ಮುಂದವರಿಸಿದ್ದ. ಈಗ ಮತ್ತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಜೈಲಿಗೆ ಅಟ್ಟಿದ್ದಾರೆ.

ಈ ಸಂಬಂಧ ಆರೋಪಿಗಳ ವಿರುದ್ಧ ತುಮಕೂರು ನಗರ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಇದನ್ನೂ ಓದಿ: ಪ್ರಪಾತಕ್ಕೆ ಉರುಳಿದ ಬಸ್- 38 ಮಂದಿಗೆ ಗಾಯ, 9 ಪೊಲೀಸರು ಗಂಭೀರ

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]