ಸಿಐಡಿ ಕಚೇರಿಗೆ ಹೊಸಬಟ್ಟೆ ಸಮೇತ ಆಗಮಿಸಿದ ಆರೋಪಿ ಸದ್ದಾಂ ಫ್ಯಾಮಿಲಿ

ಕಲಬುರಗಿ: ನಾಳೆ ಮುಸ್ಲಿಂ ಸಮುದಾಯದ ಪವಿತ್ರ ರಂಜಾನ್ ಹಬ್ಬ. ಹೊಸ ಬಟ್ಟೆ ತೊಟ್ಟು ಸಂಭ್ರಮದಿಂದ ಆಚರಿಸುವ ರಂಜಾನ್ ಹಬ್ಬದ ಹಿನ್ನೆಲೆ ಪಿಎಸ್‍ಐ ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ಸಿಐಡಿ ಕಸ್ಟಡಿಯಲ್ಲಿರುವ ಆರೋಪಿ ಸದ್ದಾಂಗೆ ಕುಟುಂಬಸ್ಥರು ಹೊಸ ಬಟ್ಟೆ ತೆಗೆದುಗೊಂಡು ಸಿಐಡಿ ಕಚೇರಿಗೆ ಆಗಮಿಸಿದ್ದರು.

ದಿವ್ಯಾ ಹಾಗರಗಿಯ ಕಾರ್ ಚಾಲಕ ಸದ್ದಾಂ ಸದ್ಯ ಸಿಐಡಿ ಕಸ್ಟಡಿಯಲ್ಲಿದ್ದಾನೆ. ಈ ಕಾರಣ ಸಿಐಡಿ ಕಚೇರಿಗೆ ಕುಟುಂಬಸ್ಥರು ಹೊಸ ಬಟ್ಟೆ ತಂದಿದ್ದರು. ಸಿಐಡಿ ಅಧಿಕಾರಿಗಳ ಅನುಮತಿ ಪಡೆದು ಕುಟುಂಬಸ್ಥರು ಹೊಸ ಬಟ್ಟೆಯನ್ನು ಸದ್ದಾಂಗೆ ನೀಡಿದರು. ಅಕ್ರಮ ಪ್ರಕರಣ ಬೆಳಕಿಗೆ ಬಂದ ಕೂಡಲೇ ತೆಲೆ ಮರೆಸಿಕೊಂಡ ದಿವ್ಯಾ ಹಾಗರಗಿ ಜೊತೆಯಲ್ಲಿ ಕಾರ್ ಚಾಲಕ ಸದ್ದಾಂ ಇದ್ದನು. ದಿವ್ಯಾ ತೆರಳಿದ್ದ ಕಾರ್ ಚಾಲನೆ ಮಾಡಿಕೊಂಡು ಸದ್ದಾಂ ಸಹ ಹೋಗಿದ್ದ. ಈ ಹಿನ್ನೆಲೆ ದಿವ್ಯಾ ಬಂಧನದ ವೇಳೆ ಸಿಐಡಿ ಈತನನ್ನು ಬಂಧಿಸಿದೆ. ಇದನ್ನೂ ಓದಿ: ಪಿಎಸ್‍ಐ ಅಕ್ರಮ – ಕೈ ನಾಯಕರು ಗಾಳಿಯಲ್ಲಿ ಗುಂಡು ಹೊಡೆದಿದ್ದಾರೆ: ಅಶ್ವಥ್ ನಾರಾಯಣ

ಈ ಅಕ್ರಮದಲ್ಲಿ ನೇರ ಪಾತ್ರ ಇಲ್ಲದಿದ್ರೂ, ಆರೋಪಿಗಳು ತೆಲೆ ಮರೆಸಿಕೊಳ್ಳಲು ಸಹಕಾರ ನೀಡಿದ ಆರೋಪದ ಮೇಲೆ ಸದ್ದಾಂ ಬಂಧನವಾಗಿದೆ. ಮನೆಯಲ್ಲಿ ಸಂಭ್ರಮದಿಂದ ಆಚರಣೆ ಮಾಡಬೇಕಾದ ಹಬ್ಬವನ್ನು ಸದ್ದಾಂ ಸಿಐಡಿ ಕಚೇರಿಯ ಆರೋಪಿಗಳನ್ನಿಡುವ ಕೊಣೆಯಲ್ಲಿ ಆಚರಿಸುವಂತಾಗಿದೆ.

Comments

Leave a Reply

Your email address will not be published. Required fields are marked *