ಕುಡಿದ ಮತ್ತಿನಲ್ಲಿ 3 ವರ್ಷಗಳ ಬಳಿಕ ಸ್ನೇಹಿತನ ಕೊಲೆ ರಹಸ್ಯ ಬಿಚ್ಚಿಟ್ಟ ಆರೋಪಿ!

ಬೆಂಗಳೂರು: ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಮೂರು ವರ್ಷಗಳ ಬಳಿಕ ತನ್ನ ಸ್ನೇಹಿತನ ಕೊಲೆಯ ರಹಸ್ಯವನ್ನು ಬಾಯ್ಬಿಟ್ಟಿದ್ದಾನೆ.

ದಿನೇಶ್ ಹಾಗು ಅಭಿಷೇಕ್ ಇಬ್ಬರೂ ಸ್ನೇಹಿತರಾಗಿದ್ದರು. 2016ರ ಮಾರ್ಚ್ 16ರಂದು ದಿನೇಶ್ ರೈಲ್ವೆ ಹಳಿ ಮೇಲೆ ಶವವಾಗಿ ಪತ್ತೆಯಾಗಿದ್ದ. ರೈಲು ಹಳಿ ದಾಟುವಾಗ ದಿನೇಶ್ ಸಾವನ್ನಪ್ಪಿದ ಎಂದು ಅಭಿಷೇಕ್ ಎಲ್ಲರನ್ನು ನಂಬಿಸಿದ್ದನು. ಇತ್ತೀಚೆಗೆ ದಿನೇಶ್ ತನ್ನ ಸ್ನೇಹಿತ ಅಭಿಷೇಕ್‍ಗೆ ಕನಸಿನಲ್ಲಿ ಬರಲಾರಂಭಿಸಿದ್ದನು. ಈ ವೇಳೆ ಅಭಿಷೇಕ್ ತನ್ನ ತಪ್ಪಿನ ಅರಿವಾಗಿ ದಿನೇಶ್ ಸಮಾಧಿಗೆ ಪೂಜೆ ಸಲ್ಲಿಸಿದ್ದನು. ಅಲ್ಲದೇ ದಿನೇಶ್ ಸಮಾಧಿ ಬಳಿ ನಿಂತು ಕ್ಷಮೆ ಕೋರಿದ್ದಾನೆ.

ಇದೇ 13ರಂದು ದಿನೇಶ್ ಕುಡಿದ ಮತ್ತಲ್ಲಿ ನಡೆದ ವಿಚಾರವನ್ನು ಸ್ನೇಹಿತರ ಬಳಿ ಬಾಯ್ಬಿಟ್ಟಿದ್ದಾನೆ. ನಿಮಗೆ ತಿಳಿಯದಂತೆ ನಾನು ದೊಡ್ಡ ತಪ್ಪು ಮಾಡಿದ್ದೇನೆ. ಅಂದು ಅಮೃತ ವೈನ್ಸ್ ನಲ್ಲಿ ಪಾರ್ಟಿ ಮುಗಿದ ಬಳಿಕ ನೀವು ಮನೆಗೆ ಹೋಗಿದ್ದೀರಿ. ನಾನು ಮತ್ತು ದಿನೇಶ್ ನಾಯಂಡಹಳ್ಳಿಯ ರೈಲ್ವೆ ಗೇಟ್ ಬಳಿ ಹೋಗಿದ್ದೇವು. ಆ ವೇಳೆ ಹಣಕಾಸಿನ ವಿಚಾರವಾಗಿ ನಮ್ಮಿಬ್ಬರ ನಡುವೆ ಜಗಳವಾಯಿತು. ಆಗ ರೈಲು ಬರುತ್ತಿದ್ದ ಸಮಯಕ್ಕೆ ದಿನೇಶನನ್ನು ರೈಲಿನ ಮುಂದೆ ನಾನೇ ತಳ್ಳಿ ಕೊಲೆ ಮಾಡಿದೆ ಎಂದು ಅಭಿಷೇಕ್ ಸ್ನೇಹಿತರ ಬಳಿ ಹೇಳಿಕೊಂಡಿದ್ದಾನೆ.

ಈ ವಿಚಾರವನ್ನು ಸ್ನೇಹಿತರು ದಿನೇಶ್ ತಂದೆಗೆ ತಿಳಿಸಿದ್ದಾರೆ. ಬಳಿಕ ಈ ವಿಷಯ ಪೊಲೀಸರಿಗೆ ತಿಳಿದು ಅಭಿಷೇಕ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯವನ್ನು ಬಾಯ್ಬಿಟ್ಟಿದ್ದಾನೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *