ಅಪಘಾತ ಮಾಡಿದ್ದ ವ್ಯಕ್ತಿಗೆ 9 ವರ್ಷದ ಬಳಿಕ ಶಿಕ್ಷೆ!

ಬೆಂಗಳೂರು: ಕಂಠ ಪೂರ್ತಿ ಕುಡಿದು ಕಾರು ಚಾಲನೆ ಮಾಡಿ ಇಬ್ಬರು ಸ್ನೇಹಿತರ ಸಾವಿಗೆ ಕಾರಣವಾದ ವ್ಯಕ್ತಿಗೆ ಕೋರ್ಟ್ ಶಿಕ್ಷೆ ವಿಧಿಸಿದೆ.

ಭಾನುಕುಮಾರ್ ಅಪರಾಧಿ. ಉಪ್ಪು ತಿಂದವ ನೀರು ಕುಡಿಯಲೇ ಬೇಕು ಅನ್ನೋ ನಾಡು ನುಡಿಯಂತೆ ತಪ್ಪು ಮಾಡಿದವನು ಇಂದಲ್ಲ ನಾಳೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎನ್ನುವುದಕ್ಕೆ ಈ ಪ್ರಕರಣವೇ ಸಾಕ್ಷಿಯಾಗಿದೆ. ಬೆಂಗಳೂರು ಜಿಲ್ಲಾ ಏಳನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಈ ಆದೇಶ ಮಾಡಿದೆ. ಭಾನುಕುಮಾರ್‌ಗೆ ಆರು ವರ್ಷ ಆರು ತಿಂಗಳು ಶಿಕ್ಷೆ ಹಾಗೂ ಒಂದು ಲಕ್ಷ ನಾಲ್ಕು ಸಾವಿರ ದಂಡ ವಿಧಿಸಿದೆ.

ಭಾನುಕುಮಾರ್ ಅವರು 2013ರ ಮಾರ್ಚ್ 4ರಂದು ವಿಟ್ಟಸಂದ್ರ ಫ್ಲೈ ಓವರ್ ಬಳಿ ಆದ ಅಪಘಾತಕ್ಕೆ ಕಾರಣರಾಗಿದ್ದರು. ಭಾನುಕುಮಾರ್ ಎಲೆಕ್ಟ್ರಾನಿಕ್ ಸಿಟಿ ಕಡೆಯಿಂದ ಬನ್ನೇರುಘಟ್ಟ ರಸ್ತೆ ಕಡೆಗೆ ಹೊರಟ್ಟಿದ್ದಾಗ ಕುಡಿದು ಅಮಲಿನಲ್ಲಿ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿ ಅಪಘಾತವಾಗಿತ್ತು. ಅಪಘಾತದಲ್ಲಿ ಆತನ ಸ್ನೇಹಿತರಾದ ವಿಶ್ವನಾಥ್, ಸಂತೋಷ್ ಸ್ಥಳದಲ್ಲೇ ಮೃತಪಟ್ಟಿದ್ದರು. ಘಟನೆ ಸಂಬಂಧ ಎಲೆಕ್ಟ್ರಾನಿಕ್ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ:  ಕದ್ದು ಪರಾರಿಯಾಗುತ್ತಿದ್ದವನನ್ನು ಹಿಡಿದು ಥಳಿಸಿದ ಸ್ಥಳೀಯರು – ಕಳ್ಳ ಸಾವು

ಭಾನುಕುಮಾರ್ ಅವರ ಸ್ನೇಹಿತರಾದ ಸಂತೋಷ್, ವಿಶ್ವನಾಥ್, ನಿಖಿಲ್ ಕುಮಾರ್, ಮಣಿಕಂಠರೊಂದಿಗೆ ಜಾಲಿ ರೈಡ್ ಹೋಗಿರುವಾಗ ಕುಡಿದು ಕಾರು ಚಾಲನೆ ಮಾಡಿರುವುದು ಸಾಬೀತು ಮಾಡಲು ಪೆÇಲೀಸರು ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಜೀಪಿನಿಂದ ಡಿಕ್ಕಿ ಹೊಡಿಸಿ ಹೆತ್ತ ತಾಯಿಯನ್ನೇ ಹತ್ಯೆಗೈದ ಮಗ

Comments

Leave a Reply

Your email address will not be published. Required fields are marked *