ಸಿನಿಮಾ ಸೆನ್ಸಾರ್ ಮಾಡಲು ಲಂಚ ಕೇಳಿದ ಆರೋಪ : ಸಾಕ್ಷಿ ನೀಡಿದ ನಟ ವಿಶಾಲ್

ಸಿನಿಮಾಗಳಿಗೆ ಪ್ರಮಾಣಪತ್ರ ನೀಡುವ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಷನ್ (ಸಿಬಿಎಫ್‍ಸಿ) (Censor Board) ಅಥವಾ ಸೆನ್ಸಾರ್ ಮಂಡಳಿಗಳ ಮೇಲೆ ಒಂದಿಲ್ಲೊಂದು ಆರೋಪಗಳು ಬರುತ್ತಲೇ ಇವೆ. ಇದೀಗ ತಮಿಳಿನ (Tamil) ಹೆಸರಾಂತ ನಟ ವಿಶಾಲ್ (Vishal) ಗುರುತರ ಆರೋಪವೊಂದನ್ನು ಮಾಡಿದ್ದಾರೆ. ತಮ್ಮ ತಮಿಳು ಚಿತ್ರದ ಹಿಂದಿ ಆವೃತ್ತಿಗೆ ಪ್ರಮಾಣ ಪತ್ರ ನೀಡಲು ಮುಂಬೈ ಸಿಬಿಎಫ್‍ಸಿ ಅಧಿಕಾರಿಗಳು ಲಂಚ ಕೇಳಿದ್ದರು ಎಂದು ಆರೋಪ ಮಾಡಿದ್ದಾರೆ.

ತಮಿಳು ನಟನೆಯ ಮಾರ್ಕ್ ಆಂಟೋನಿ (Mark Antony)ರಿಲೀಸ್ ಆಗಿ, ಪ್ರೇಕ್ಷಕರಿಂದಲೂ ಉತ್ತಮ ಪ್ರತಿಕ್ರಿಕೆ ಪಡೆದುಕೊಂಡಿದೆ. ಈ ಸಿನಿಮಾದ ಹಿಂದಿ ಆವೃತ್ತಿಗೆ ಪ್ರಮಾಣ ಪತ್ರ ಪಡೆಯಲು ಚಿತ್ರತಂಡ ಮುಂದಾಗಿದೆ. ಈ ಸಿನಿಮಾಗೆ ಪ್ರಮಾಣ ಪತ್ರ ನೀಡಲು ಅಧಿಕಾರಿಗಳು ಬರೋಬ್ಬರಿ 6.50 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದರು ಎಂದು ವಿಶಾಲ್ ಹೇಳಿದ್ದಾರೆ. ಈ ಕುರಿತು ಸಾಕ್ಷಿ ಸಮೇತ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಹಿಂದಿಯಲ್ಲಿ ಚಿತ್ರವನ್ನು ಡಬ್ ಮಾಡಿ ಬಿಡುಗಡೆ ಮಾಡಲು ನಿರ್ಧಾರ ಮಾಡಿದೆವು. ತಾಂತ್ರಿಕ ಕಾರಣಗಳಿಂದಾಗಿ ಹಿಂದಿಯಲ್ಲಿ ಚಿತ್ರವನ್ನು ರೆಡಿ ಮಾಡಲು ಕಷ್ಟವಾಯಿತು. ಬಿಡುಗಡೆ ದಿನಾಂಕ ತೀರಾ ಹತ್ತಿರವಿದ್ದ ಕಾರಣದಿಂದಾಗಿ ಬೇಗ ಪ್ರಮಾಣ ಪತ್ರ ನೀಡುವಂತೆ ವಿನಂತಿಸಿದೆವು. ಆದರೆ, ಅಧಿಕಾರಿಗಳು ಬೇಗ ಪ್ರಮಾಣ ಪತ್ರ ಬೇಕು ಅಂದರೆ ಲಂಚ ನೀಡಿ ಎಂದರು ಎಂದು ವಿಶಾಲ್ ಮಾತನಾಡಿದ್ದಾರೆ.

 

ಮತ್ತೊಂದು ಅಚ್ಚರಿಯ ಸಂಗತಿ ಅಂದರೆ, ಚಿತ್ರತಂಡವು ಅವರು ಕೇಳಿದ ಹಣವನ್ನು ಲಂಚದ ರೂಪದಲ್ಲಿ ನೀಡಿರುವುದಾಗಿಯೂ ವಿಶಾಲ್ ಹೇಳಿಕೊಂಡಿದ್ದಾರೆ. ತಾವು ಹಣ ಕಳುಹಿಸಿದ ಬ್ಯಾಂಕ್ ಖಾತೆಯ ವಿವರವನ್ನೂ ಅವರು ಹಂಚಿಕೊಂಡಿದ್ದಾರೆ. ನಿಮಗೆ ಯಾವುದೇ ದಾರಿ ಕಾಣದೇ ಹಣವನ್ನು ಕೊಡಬೇಕಾಯಿತು ಎಂದು ಅವರು ಹೇಳಿಕೊಂಡಿದ್ದಾರೆ.

ವಿಶಾಲ್ ಆಡಿದ ಮಾತುಗಳಿಗೆ ಅನೇಕರು ಪ್ರತಿಕ್ರಿಯಿಸಿದ್ದಾರೆ. ಲಂಚ ತೆಗೆದುಕೊಳ್ಳುವುದು ಎಷ್ಟು ಅಪರಾಧವೋ, ಕೊಡುವುದು ಕೂಡ ಅಷ್ಟೇ ಅಪರಾಧ. ಹಾಗಾಗಿ ಕೊಟ್ಟಿರುವ ಚಿತ್ರತಂಡಕ್ಕೆ ಮತ್ತು ತೆಗೆದುಕೊಂಡಿರುವ ಅಧಿಕಾರಿಗಳಿಗೆ ಯಾವ ರೀತಿಯಲ್ಲಿ ಶಿಕ್ಷೆ ಕಾದಿದೆ ನೋಡಬೇಕು ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]