ಬೆಂಗಳೂರು: ಪ್ರಭಾವಿ ಶಾಸಕ ಹ್ಯಾರಿಸ್ ಗೂಂಡಾ ಪುತ್ರ ಮಹಮ್ಮದ್ ನಲಪಾಡ್ ನ ಗೂಂಡಾಗಿರಿ ಪ್ರಕರಣ ಸಂಬಂಧ ಕಳೆದ 36 ಗಂಟೆಗಳಿಂದ ತಲೆ ಮರೆಸಿಕೊಂಡಿದ್ದ ನಲಪಾಡ್‍ನನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ.
ಇಂದು ಬೆಳಗ್ಗೆ ಹ್ಯಾರಿಸ್‍ರ ಶಾಂತಿನಗರ ನಿವಾಸಕ್ಕೆ ಅಶೋಕನಗರ ಪೊಲೀಸರು ಭೇಟಿ ಹುಟುಕಾಟ ನಡೆಸಿದ್ರು. ಈ ವೇಳೆ ನನ್ನ ಮಗನಿಗೆ ಶರಣಾಗಲು ಹೇಳಿದ್ದೇನೆ ಅಂತ ಶಾಸಕರು ಹೇಳಿದ್ದರು. ಶಾಸಕರು ಮಾತನಾಡಿದ ಕೇವಲ 1 ಗಂಟೆಯಲ್ಲಿ ವಿವಿಐಪಿ ಗೂಂಡಾ ಮಗ ನಲಪಾಡ್‍ನನ್ನು ಕಬ್ಬನ್‍ಪಾರ್ಕ್ ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಆತನಿಗೆ ರಾಜ ಮರ್ಯಾದೆ ಕೊಟ್ಟು ಕರೆದುಕೊಂಡು ಬಂದಿದ್ದಾರೆ. ಬಳಿಕ ಠಾಣೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಎದುರೇ ಕುಳ್ಳಿರಿಸಿ ನೋಡಲು ಟಿವಿ, ಕುಡಿಯಲು ಜ್ಯೂಸ್ ವ್ಯವಸ್ಥೆ ಮಾಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಯುವಕನ ಮೇಲೆ ಹಲ್ಲೆ ನಡೆಸಿದ ಪ್ರಕರಣ: ಕೊನೆಗೂ ಪೊಲೀಸರಿಗೆ ಶರಣಾದ ಶಾಸಕ ಹ್ಯಾರಿಸ್ ಪುತ್ರ

ಹ್ಯಾರಿಸ್ ಮನೆಯಿಂದ ಹೊರಬಂದ ಕಾರಿನಲ್ಲೇ ನಲಪಾಡ್ ಠಾಣೆ ಕಡೆ ತೆರಳಿದ್ದ ಎನ್ನಲಾಗಿದೆ. ಹಾಗಾದ್ರೆ ಬೆಳಗ್ಗೆ ಪೊಲೀಸರು ಮನೆಯಲ್ಲಿ ಹುಡುಕಾಟ ನಡೆಸಿದ್ದು ಸುಳ್ಳಾ..? ಮಗ ಫೋನ್ ಸ್ವಿಚ್ ಆಫ್ ಆಗಿದೆ ಎಂದು ಬೆಳಗ್ಗೆ ಕಥೆ ಕಟ್ಟಿದ್ದ ಹ್ಯಾರಿಸ್ ಗುಟ್ಟಾಗಿ ಮಗನನ್ನು ಠಾಣೆಗೆ ಕಳಿಸಿ ಶರಣಾಗುವಂತೆ ಸೂಚಿಸಿದ್ರಾ..? ಎಂಬ ಅನುಮಾನ ಕಾಡ್ತಿದೆ. ಇದನ್ನೂ ಓದಿ: ಮಗನನ್ನು ನಾನೇ ಸರೆಂಡರ್ ಮಾಡಿಸ್ತೇನೆ- ಪೊಲೀಸರು ಬರ್ತಿದ್ದಂತೆ ಕಥೆ ಕಟ್ಟಿದ ಶಾಸಕ ಹ್ಯಾರಿಸ್

ಎಲ್ಲಿದ್ದ ನಲಪಾಡ್?: ಹ್ಯಾರಿಸ್ ಪುತ್ರನ ಗೂಂಡಾಗಿರಿ ಪ್ರಕರಣ ಸಂಬಂಧ ಕೇಸ್ ದಾಖಲಾಗುತ್ತಿದ್ದಂತೆ ನಲಪಾಡ್ ಎಸ್ಕೇಪ್ ಆಗಿದ್ದು, ಕಬ್ಬನ್‍ಪಾರ್ಕ್ ಠಾಣೆ ಕೂಗಳತೆಯಲ್ಲೇ ಅಡಗಿಕೊಂಡಿದ್ದನು. ಯುಬಿ ಸಿಟಿ ಪಕ್ಕದಲ್ಲಿರುವ ಐಷಾರಾಮಿ 7 ಸ್ಟಾರ್ ಹೋಟೆಲ್‍ನ ರೂಂ ನಂಬರ್ 882 ನಲ್ಲಿ ಯಾವುದೇ ಭಯವಿಲ್ಲದೇ ಪಾರ್ಟಿಯೊಂದಲ್ಲಿ ಪಾಲ್ಗೊಂಡಿದ್ದನು. ಇದೀಗ ಅಪ್ಪ ಮಾಧ್ಯಮದ ಮುಂದೆ ಮಾತನಾಡಿದ ಕೇವಲ ಒಂದು ಗಂಟೆಯಲ್ಲಿಯೇ ಕಬ್ಬನ್ ಪಾರ್ಕ್ ಪೊಲೀಸರಿಗೆ ಶರಣಾಗಿರೋ ನಲಪಾಡ್ ವಿರುದ್ಧ ಸೆಕ್ಷನ್ 307 ಅಡಿ (ಕೊಲೆ ಯತ್ನ) ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ. ಇಂದು ಆರೋಪಿ ನಲಪಾಡ್ ನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಹ್ಯಾರಿಸ್ ಪುತ್ರನಿಂದ ಯುವಕನ ಮೇಲೆ ಹಲ್ಲೆ ಪ್ರಕರಣ- ಆರೋಪಿಗಳನ್ನು ಬಂಧಿಸದಿದ್ದರೆ ಪೊಲೀಸರೇ ನೇರ ಹೊಣೆ: ರಾಮಲಿಂಗಾ ರೆಡ್ಡಿ

ಯುವಕನ ಮೇಲೆ ರೆಸ್ಟೊರೆಂಟ್ ನಲ್ಲಿ ಹಲ್ಲೆ ನಡೆಸಿದ ಬಳಿಕ ಹ್ಯಾರೀಸ್ ಪುತ್ರ ಮಹಮ್ಮದ್ ನಲಪಾಡ್ ತಲೆಮರೆಸಿಕೊಂಡಿದ್ದನು. ಈ ಕುರಿತು ಇಂದು ಬೆಳಗ್ಗೆ ಶಾಸಕ ಹ್ಯಾರಿಸ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ನನ್ನ ಮಗ ಫೋನ್ ಸ್ವಿಚ್ ಆಫ್ ಮಾಡ್ಕೊಂಡಿದ್ದನು. ನಿನ್ನೆ ರಾತ್ರಿ ಅವ್ನ ಅಮ್ಮನಿಗೆ ಫೋನ್ ಮಾಡಿದ್ದನು. ಆಗ ಸರೆಂಡರ್ ಆಗುವಂತೆ ನಾನೇ ಮಗನಿಗೆ ಹೇಳಿರುವುದಾಗಿ ತಿಳಿಸಿದ್ದರು.
https://www.youtube.com/watch?v=aQxY3U–B2g










Leave a Reply