ಅಲ್ಲು ಅರ್ಜುನ್ ಮನೆ ಮುಂಭಾಗ ದಾಂಧಲೆ ನಡೆಸಿದ್ದ 6 ಆರೋಪಿಗಳಿಗೆ ಜಾಮೀನು

ಪುಷ್ಪ-2 ಸ್ಟಾರ್ ಅಲ್ಲು ಅರ್ಜುನ್ (Allu Arjun) ಮನೆ ಮೇಲಿನ ದಾಳಿ ಪ್ರಕರಣದಲ್ಲಿ ಭಾರೀ ಹೈಡ್ರಾಮಾ ನಡೆದಿದೆ. ದಾಳಿ ಮಾಡಿದ್ದ 6 ಆರೋಪಿಗಳಿಗೆ ಹೈದರಾಬಾದ್ ನ್ಯಾಯಾಲಯ (Hyderabad court) ಜಾಮೀನು ಮಂಜೂರು ಮಾಡಿದೆ.

ನಿನ್ನೆ (ಡಿ.22) ಆರು ದಾಳಿಕೋರರನ್ನು ಬಂಧಿಸಿದ್ದ ಜ್ಯುಬ್ಲಿ ಹಿಲ್ಸ್ ಪೊಲೀಸರು ಇಂದು ಅವರನ್ನು ಕೋರ್ಟ್ ಮುಂದೆ ಹಾಜರುಪಡಿಸಿದ್ದು, 6 ಆರೋಪಿಗಳಿಗೆ ತಲಾ 10,000 ರೂ. ವೈಯಕ್ತಿಕ ಬಾಂಡ್‌ ಮೇಲೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ ಎಂದು ಹಿರಿಯ ವಕೀಲ ವಕೀಲ ರಾಮದಾಸ್ ತಿಳಿಸಿದ್ದಾರೆ. ಇದನ್ನೂ ಓದಿ: ಪೊಲೀಸರೇ ಜೈಲಿಗೆ ಹೋಗ್ಬೇಕಾಗುತ್ತೆ – ಸ್ಫೀಕರ್‌ ವಾರ್ನಿಂಗ್‌ ಬೆನ್ನಲ್ಲೇ ಕೋರ್ಟ್ ಅಂಗಳಕ್ಕೆ ಹೋಗುತ್ತಾ ಸಂವಿಧಾನಿಕ ಸಂಘರ್ಷ?’

ಇನ್ನೂ ಠಾಣೆಯಲ್ಲಿ ಆರೋಪಿಗಳೆಲ್ಲಾ ಬೆಂಚ್ ಮೇಲೆ ಕುಳಿತು ಮೊಬೈಲ್‌ನಲ್ಲಿ ಮುಳುಗಿದ್ದ ದೃಶ್ಯಗಳು ವೈರಲ್ ಆಗಿದ್ದು, ಪೊಲೀಸರ ಕಾರ್ಯವೈಖರಿ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟೀಕೆ ವ್ಯಕ್ತವಾಗ್ತಿದೆ. ಇದ್ರ ಮಧ್ಯೆ, ಆರೋಪಿಗಳು ನಿಮ್ಮವರೆಂದು ಕಾಂಗ್ರೆಸ್ ಮತ್ತು ಬಿಆರ್‌ಎಸ್ ಪಕ್ಷಗಳು ಪರಸ್ಪರ ಕೆಸರರೆಚಾಟದಲ್ಲಿ ತೊಡಗಿವೆ. ಇದನ್ನೂ ಓದಿ: ಖೇಲ್‌ ರತ್ನ ಪ್ರಶಸ್ತಿಗೆ ಶಿಫಾರಸ್ಸುಗೊಳ್ಳದ ಶೂಟರ್ ಮನು ಭಾಕರ್ ಹೆಸರು; ತಂದೆ ಆಕ್ಷೇಪ

ಆರೋಪಿಗಳಿಗೆ ಸಿಎಂ ಜೊತೆ ಇರುವ ಫೋಟೋಗಳನ್ನು ಬಿಆರ್‌ಎಸ್ ರಿಲೀಸ್ ಮಾಡಿದೆ. ಇಲ್ಲ ಇವರು ಬಿಆರ್‌ಎಸ್ ಬೆಂಬಲಿಗರು ಎಂದು ಕಾಂಗ್ರೆಸ್ ಪ್ರತ್ಯಾರೋಪ ಮಾಡಿದೆ. ಇನ್ನೂ ಪುಷ್ಪ ಶೋ ವೇಳೆ ಸಂಭವಿಸಿದ ಕಾಲ್ತುಳಿತ ಪ್ರಕರಣ ಸಂಬಂಧ ಶೀಘ್ರವೇ ಮುಖ್ಯಮಂತ್ರಿ ರೇವಂತ್ ರೆಡ್ಡಿಯನ್ನು ಭೇಟಿ ಮಾಡಲು ಟಾಲಿವುಡ್ ಗಣ್ಯರು ನಿರ್ಧರಿಸಿದ್ದಾರೆ. ಇದನ್ನೂ ಓದಿ: ಕ್ರಿಸ್‌ಮಸ್ ಹಬ್ಬ ಆಚರಣೆಯ ಇತಿಹಾಸ, ಮಹತ್ವ ನಿಮಗೆಷ್ಟು ಗೊತ್ತು?

ಈ ನಡುವೆ ಅಲ್ಲು ಅರ್ಜುನ್‌ ಮನೆ ಮೇಲೆ ದಾಳಿ ನಡೆಸಿದ್ದ ಕಿಡಿಗೇಡಿಗಳ ಪೈಕಿ ಒಬ್ಬರಾದ ಶ್ರೀನಿವಾಸ್ ರೆಡ್ಡಿ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಸಹಾಯಕ ಎಂದು ಬಿಆರ್‌ಎಸ್ ಮುಖಂಡರೊಬ್ಬರು ಆರೋಪಿಸಿದ್ದಾರೆ.