ಬೆಂಗಳೂರು: ಜನ ಎಷ್ಟೇ ಎಚ್ಚೆತ್ತುಕೊಂಡರು, ವಂಚಿಸುವವರು ಅಷ್ಟೇ ಹೊಸ ಪ್ಲಾನ್ ಮಾಡಿ ಬದಲಾಗುತ್ತಿದ್ದಾರೆ. ಅದೇ ರೀತಿ ಇಲ್ಲೊಬ್ಬ ವಂಚಕ, ವೃದ್ಧರಿಗೆ ಸಹಕರಿಸುವ ಮುಖವಾಡ ಹಾಕಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಎಟಿಎಂಗೆ (ATM) ಬರುತ್ತಿದ್ದ ವಯಸ್ಸಾದ ವ್ಯಕ್ತಿಗಳನ್ನು ಟಾರ್ಗೆಟ್ ಮಾಡಿ ವಂಚಿಸುತ್ತಿದ್ದ ಖತರ್ನಾಕ್ ಆಟೋ ಚಾಲಕನನ್ನು (Auto Driver) ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಶಶಿಕುಮಾರ್ ಎಟಿಎಂಗೆ ಬರುತ್ತಿದ್ದ ವೃದ್ಧರಿಗೆ ಸಹಾಯ ಮಾಡುವ ನೆಪದಲ್ಲಿ ಹೋಗುತ್ತಿದ್ದ. ಹಣ ಡ್ರಾ ಮಾಡಿಕೊಡುವುದಾಗಿ ಕಾರ್ಡ್ ಪಡೆಯುತ್ತಿದ್ದ. ಆತನನ್ನು ನಂಬಿ ಪಿನ್ ಕೊಡುತ್ತಿದ್ದ ವೃದ್ಧರಿಗೆ ಕಾರ್ಡ್ ಬದಲಿಸಿ ಬೇರೆ ಕಾರ್ಡ್ ಕೊಡುತ್ತಿದ್ದ. ನಂತರ ಹಣ ತೆಗೆಯುವ ರೀತಿ ನಟಿಸಿ ಎಟಿಎಂ ವರ್ಕ್ ಆಗ್ತಿಲ್ಲ ಎಂದು ಹೇಳಿ ಕಳಿಸುತ್ತಿದ್ದ. ಅಲ್ಲಿಂದ ವೃದ್ಧರು ಹೋದ ಮೇಲೆ ಹಣ ಡ್ರಾ ಮಾಡಿಕೊಂಡು ಹೋಗುತ್ತಿದ್ದ. ಇದನ್ನೂ ಓದಿ: ಸೋದರಳಿಯನ ಖಾಸಗಿ ಅಂಗಕ್ಕೆ ಗುಂಡು ಹಾರಿಸಿದ ಮಾವ
ಬಂದ ಹಣದಲ್ಲಿ ಮೋಜು ಮಸ್ತಿ ಮಾಡುತ್ತಿದ್ದ ಆರೋಪಿ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈತನ ವಿರುದ್ಧ ಈಶಾನ್ಯ ವಿಭಾಗದ ಸೈಬರ್ ಕ್ರೈಮ್ (Cyber Crime ) ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ನಟ ನವಾಜುದ್ದೀನ್ ಸಿದ್ದಿಕಿ ವಿರುದ್ಧ ರೇಪ್ ಕೇಸ್ ದಾಖಲಿಸಿದ ಪತ್ನಿ

Leave a Reply