ಕಾರವಾರ: ಬೈಕ್ ಮತ್ತು ಕಾರಿಗೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಸಹ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರಡೇಶ್ವರದ ಬಸ್ತಿಯಲ್ಲಿ ನಡೆದಿದೆ.
ಮರಡೇಶ್ವರದ ಉತ್ತರ ಕೊಪ್ಪ ನಿವಾಸಿ ದೇವು ಮರಾಠಿ(29) ಮೃತ ದುರ್ದೈವಿ. ಮತ್ತೋರ್ವ ಚಂದ್ರು ಮರಾಠಿ (28)ಗಂಭೀರ ಗಾಯಗೊಂಡಿದ್ದು, ಈತನನ್ನು ಸಮೀಪದ ಮುರಡೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಜಶೇಕರ್ ಎಂಬವರು ಧಾರವಾಡದಿಂದ ಮಣಿಪಾಲ್ ಗೆ ತಮ್ಮ ಕುಟುಂಬದೊಂದಿಗೆ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಬೈಕಿನಲ್ಲಿ ದೇವು ಮರಾಠಿ ಮತ್ತು ಚಂದ್ರು ಮರಾಠಿ ಬರುತ್ತಿದ್ದು, ತಾಲೂಕಿನ ಮುರಡೇಶ್ವರದ ಬಸ್ತಿ ಬಳಿ ಅತಿವೇಗದಿಂದ ಬಂದು ಕಾರಿಗೆ ಸವಾರ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ದೇವು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಈ ಘಟನೆ ಸಂಬಂಧ ಮುರಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೈಕ್ ಸವಾರನ ಅತೀ ವೇಗದ ಚಾಲನೆಯೇ ಈ ಘಟನೆಗೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply