ಮಂಜಿನ ನಗರಿಯಲ್ಲಿ ಪವಾಡ ಸದೃಶ ಅಪಘಾತ

ಮಡಿಕೇರಿ: ಕಾರ್ ಬೈಕ್ ಮುಖಾಮುಖಿ ಡಿಕ್ಕಿಯಾಗಿ ಬೈಕಿನಲ್ಲಿದ್ದ ತಾಯಿ-ಮಗು ಜೊತೆಗೆ ಯುವತಿಯೊಬ್ಬಳು ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿರುವ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ಪಟ್ಟಣದಲ್ಲಿ ನಡೆದಿದೆ.

ಭಾನುವಾರ ಸಂಜೆ ಕುಶಾಲನಗರದ ಮಹಾರಾಜ ಹೋಟೆಲ್ ಮುಂಭಾಗ ಈ ಅಪಘಾತ ನಡೆದಿದ್ದು, ನಾಲ್ಕು ವರ್ಷದ ಧನ್ವಿತ್ ಗೌಡ, ತಾಯಿ ಅಶ್ವಿನಿ ಹಾಗೂ ಬೈಕ್ ಓಡಿಸುತ್ತಿದ್ದ ಯುವತಿ ಮಹಾಲಕ್ಷ್ಮಿ ಮೂವರು ಪವಾಡ ಸದೃಶದಲ್ಲಿ ಪಾರಾಗಿದ್ದಾರೆ.

ಕುಶಾಲನಗರದ ಮಹಾರಾಜ ಹೋಟೆಲ್ ಮುಂಭಾಗ ಬೈಕಿನಲ್ಲಿ ಮೂವರು ಹೋಗುತ್ತಿದ್ದರು. ಈ ವೇಳೆ ವಿರುದ್ಧ ದಿಕ್ಕಿನಿಂದ ಒಂದು ಕಾರ್ ವೇಗವಾಗಿ ಬಂದಿದೆ. ಬಳಿಕ ಬೈಕ್ ಹಾಗೂ ಕಾರ್ ಮುಖಾಮುಖಿ ಡಿಕ್ಕಿ ಹೊಡೆದಿದೆ. ಬೈಕ್ ಡಿಕ್ಕಿ ಹೊಡೆದ ರಭಸಕ್ಕೆ ಮಗು ಮತ್ತು ತಾಯಿ ಕಾರಿನ ಮೇಲೆ ಬಿದ್ದು ಬಳಿಕ ಕೆಳಗಡೆ ಬಿದ್ದಿದ್ದಾರೆ. ಈ ಎಲ್ಲ ದೃಶ್ಯಗಳು ಅಲ್ಲಿನ ಸಿಸಿಟಿಯಲ್ಲಿ ಸೆರೆಯಾಗಿದೆ.

ಅಪಘಾತ ನೋಡಿದ ಎಲ್ಲರ ಎದೆಯನ್ನ ಒಂದು ಕ್ಷಣ ಝಲ್ ಎನಿಸಿದೆ. ಕಾರು ಬೈಕ್ ನಡುವೆ ನಡೆದ ಅಪಘಾತ ನೋಡಿದ ಸಾರ್ವಜನಿಕರು ಅಬ್ಬಾ ಏನಾಯ್ತೋ ಅಂತಾ ಆತಂಕದಲ್ಲೇ ಕೆಳಗಡೆ ಬಿದ್ದಿದ್ದ ಮೂವರ ರಕ್ಷಣೆಗೆ ಧಾವಿಸಿದ್ದಾರೆ. ಸದ್ಯ ಮೂವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಅಪಘಾತವನ್ನ ಲೈವ್ ಆಗಿ ನೋಡಿದ ಪ್ರತ್ಯಕ್ಷದರ್ಶಿಗಳು ಇವರು ಪ್ರಾಣಪಾಯದಿಂದ ಪಾರಾದ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಕೇವಲ ಪ್ರತ್ಯಕ್ಷದರ್ಶಿಗಳು ಮಾತ್ರವಲ್ಲ ಅಪಫಾತಕ್ಕೀಡಾದವರು ಕೂಡ ದಿಗ್ಬ್ರಮೆ ವ್ಯಕ್ತಪಡಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Comments

Leave a Reply

Your email address will not be published. Required fields are marked *