ಬಿಎಸ್‍ವೈ ವಿರುದ್ಧ ಮತ್ತೆರಡು ಡಿನೋಟಿಫಿಕೇಷನ್ ಪ್ರಕರಣಗಳಲ್ಲಿ ಎಫ್‍ಐಆರ್‍ಗೆ ಸಿದ್ಧತೆ- ಎಸಿಬಿ ಬಳಿಯಿವೆ 18 ಅಸ್ತ್ರ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ಮತ್ತೆ ಎಫ್‍ಐಆರ್ ಸಂಕಷ್ಟ ಎದುರಾಗ್ತಿದೆ. ಇಂದು ಮತ್ತೆರಡು ಡಿನೋಟಿಫಿಕೇಶನ್ ಪ್ರಕರಣಗಳಲ್ಲಿ ಬಿಎಸ್‍ವೈ ವಿರುದ್ಧ ಎಸಿಬಿ ಎಫ್‍ಐಆರ್ ದಾಖಲಿಸೋ ಸಾಧ್ಯತೆ ಇದೆ.

ದೊಡ್ಡಬೆಟ್ಟಹಳ್ಳಿಯ 9.19 ಎಕರೆ ನೋಟಿಫಿಕೇಷನ್ ಪ್ರಕರಣ, ರಾಮಗೊಂಡನಹಳ್ಳಿಯ 48.34 ಎಕರೆ ಡಿನೋಟಿಫಿಕೇಷನ್ ಪ್ರಕರಣ ಸಂಬಂಧ ಎಫ್‍ಐಆರ್ ದಾಖಲಿಸಲು ಎಸಿಬಿ ಸಿದ್ಧತೆ ನಡೆಸಿದೆ. ಇಷ್ಟೇ ಅಲ್ಲ, ಇನ್ನೂ 18 ಡಿನೋಟಿಫಿಕೇಷನ್ ಪ್ರಕರಣಗಳಲ್ಲಿ ಯಡಿಯೂರಪ್ಪ ತಪ್ಪಿತಸ್ಥರು. ಭೂ ಮಾಲೀಕರಿಗೆ ಅಕ್ರಮವಾಗಿ ಲಾಭ ಮಾಡಿ ಸರ್ಕಾರಕ್ಕೆ ನಷ್ಟ ಮಾಡಿದ್ದಾರೆ ಅಂತ ಎಸಿಬಿಯ ಉಪ ಆಯುಕ್ತರು ನೀಡಿರೋ ವಿಚಾರಣಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಬಿಎಸ್‍ವೈಗೆ ಮತ್ತೆ ಸಂಕಷ್ಟ – 257 ಎಕರೆ ಅಕ್ರಮ ಡಿನೋಟಿಫಿಕೇಷನ್ ಆರೋಪ, ಎಸಿಬಿಗೆ ದೂರು ದಾಖಲು

40ಕ್ಕೂ ಹೆಚ್ಚು ಅಧಿಕಾರಿಗಳು ಈ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ. ಸದ್ಯ ವಿವಾದದಲ್ಲಿ ಸಿಲುಕಿರುವ ಕೆಎಎಸ್ ಅಧಿಕಾರಿ ಬಸವರಾಜೇಂದ್ರ ಒಬ್ಬರೇ 78 ಎಕರೆ ಡಿನೋಟಿಫೈ ಮಾಡಿದ್ದಾರೆ. ಈ ಕಡತಗಳಿಗೆಲ್ಲಾ ಬಿಎಸ್ ಅಂತಾ ಯಡಿಯೂರಪ್ಪ ಸಹಿ ಹಾಕಿದ್ದಾರೆ. ವಿಚಾರಣಾ ವರದಿಯ ಎಕ್ಸ್ ಕ್ಲೂಸೀವ್ ಪ್ರತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಈಗಾಗಲೇ ಎರಡು ಪ್ರಕರಣಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಎಫ್‍ಐಆರ್ ರದ್ಧತಿ ಕೋರಿ ಬಿಎಸ್‍ವೈ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಹೈಕೋರ್ಟ್‍ನಲ್ಲಿ ನಡೆಯಲಿದೆ. ಒಂದು ವೇಳೆ ಎಫ್‍ಐಆರ್‍ಗಳಿಗೆ ತಡೆಯಾಜ್ಞೆ ಸಿಕ್ಕಿದ್ರೂ ಸದ್ಯಕ್ಕೆ ಯಡಿಯೂರಪ್ಪಗೆ ಸಂಕಷ್ಟ ತಪ್ಪಿದ್ದಲ್ಲ.

ಇದನ್ನೂ ಓದಿ: ಬಿಎಸ್‍ವೈ ಡಿನೋಟಿಫಿಕೇಶನ್ ಕೇಸ್‍ಗೆ ಮತ್ತೆ ಟ್ವಿಸ್ಟ್- ಬಸವರಾಜೇಂದ್ರ ಆರೋಪ ಸತ್ಯಕ್ಕೆ ದೂರ ಅಂತು ಎಸಿಬಿ

Comments

Leave a Reply

Your email address will not be published. Required fields are marked *