ಮತ್ತೆ ಮುನ್ನೆಲೆಗೆ ಬಂತು ನಾಲ್ಕು ಡಿಸಿಎಂಗಳ ರಚನೆಯ ಚರ್ಚೆ..!

ಬೆಂಗಳೂರು: ರಾಜ್ಯದಲ್ಲಿ 4 ಉಪಮುಖ್ಯಮಂತ್ರಿಗಳ ರಚನೆಯ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. 4 ಸಮುದಾಯಗಳಿಗೆ, 4 ಪ್ರಾಂತ್ಯಗಳಿಂದ ಪಟ್ಟ ಕಟ್ಟಲು ವರಿಷ್ಠರಿಗೆ ಒತ್ತಡ ಹಾಕಲಾಗುತ್ತಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಬೊಮ್ಮಾಯಿಗೆ ನಾಲ್ವರು ಡಿಸಿಎಂಗಳು ಸಾಥ್ ಕೊಡಲು ಹೊಸ ಸೂತ್ರ ರೆಡಿಯಾಗುತ್ತಿದ್ದು, ಈ ಹೊಸ ಸೂತ್ರಕ್ಕೆ ಹೈಕಮಾಂಡ್ ಅಸ್ತು ಅನ್ನುತ್ತಾ ಎಂಬುದನ್ನು ಕಾದು ನೋಡಬೇಕಿದೆ. ಈ ಬಗೆಗಿನ ಎಕ್ಸ್ ಕ್ಲೂಸಿವ್ ಸ್ಟೋರಿ ಇಲ್ಲಿದೆ.  ಇದನ್ನೂ ಓದಿ: ‘ದೇವರ ಹೆಸರಿನಲ್ಲಿ… ಈ ಹತ್ಯಾಕಾಂಡವನ್ನು ನಿಲ್ಲಿಸಿ’: ಪೋಪ್ ಫ್ರಾನ್ಸಿಸ್ ಮನವಿ

ನಾಯಕತ್ವ ಎದುರಿಸುತ್ತಿರುವ ರಾಜ್ಯ ಬಿಜೆಪಿಯಲ್ಲಿ ಪರ್ಯಾಯ ವ್ಯವಸ್ಥೆಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಬೊಮ್ಮಾಯಿಗೆ ಮತ್ತಷ್ಟು ರಾಜಕೀಯ ಬಲ ಹೆಚ್ಚಿಸುವ ಬಗ್ಗೆ ಚರ್ಚೆ ಹಾಗೂ ನಾಯಕತ್ವದ ಕೊರತೆ ನೀಗಿಸಲು ಕೇಂದ್ರದ ವರಿಷ್ಠ ಮಂಡಳಿ ಬಳಿ ರಾಜ್ಯ ಮೂಲದ ಕೆಲವರಿಂದ ಡಿಸಿಎಂಗಳ ರಚನೆ ಪ್ರಸ್ತಾಪ ಮಾಡಲಾಗುತ್ತಿದೆ. 4 ಸಮುದಾಯಗಳಿಗೆ ಡಿಸಿಎಂ ಪಟ್ಟ ಕೊಡುವ ಬಗ್ಗೆ ಒತ್ತಡ ಹೇರಲಾಗುತ್ತಿದೆ. ಇದನ್ನೂ ಓದಿ: ‘ಪಂಚ’ ಫಲಿತಾಂಶದ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಸಂಚಲನ- ಬಿಜೆಪಿಯಲ್ಲೂ ‘ಹೈ’ ಆಪರೇಷನ್..!

ರಾಜ್ಯದ ನಾಲ್ಕು ಪ್ರಾಂತ್ಯಗಳಿಂದ ಪಟ್ಟ ಕಟ್ಟಲು ವರಿಷ್ಠರಿಗೆ ಒತ್ತಡ ಹಾಕಲಾಗುತ್ತಿದ್ದು, ಹಳೇ ಮೈಸೂರು ಭಾಗಕ್ಕೊಂದು, ಮಲೆನಾಡು-ಕರಾವಳಿ ಕರ್ನಾಟಕ ಭಾಗಕ್ಕೊಂದು, ಮುಂಬೈ ಕರ್ನಾಟಕ ಭಾಗಕ್ಕೊಂದು, ಹೈ-ಕಾ ಭಾಗಕ್ಕೊಂದು ಡಿಸಿಎಂ ಕೊಡಲು ಸಲಹೆ ನೀಡಲಾಗುತ್ತಿದೆ. ಅಲ್ಲದೆ ಲಿಂಗಾಯತ, ಒಕ್ಕಲಿಗ, ಹಿಂದುಳಿದ ವರ್ಗ ಮತ್ತು ಎಸ್ಸಿ-ಎಸ್ಟಿ ಸಮುದಾಯಗಳಿಗೆ ಸ್ಥಾನ ನೀಡಲು ಕೂಡ ಸಲಹೆ ನೀಡಲಾಗುತ್ತಿದೆ ಎಂಬ ಮಾಹಿತಿ ದೊರಕಿದೆ.

Comments

Leave a Reply

Your email address will not be published. Required fields are marked *