ಮುಂಬೈ: ತಂದೆ-ತಾಯಿ ಜೊತೆ ಈಗಲೂ ವಾಸಿಸುತ್ತಾನೆ ನೋಡಿ ಎಂದು ಟ್ರೋಲ್ ಮಾಡಿದ ಅಭಿಮಾನಿಯನ್ನು ಅಭಿಷೇಕ್ ಬಚ್ಚನ್ ಬೆವರಿಳಿಸಿದ್ದಾರೆ. ಅಭಿಷೇಕ್ ಅವರ ಪ್ರತಿಕ್ರಿಯೆ ನೋಡಿ ಜನರು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
“ನಿಮ್ಮ ಜೀವನದ ಬಗ್ಗೆ ಬೇಸರ ಮಾಡಿಕೊಳ್ಳಬೇಡಿ. ಅಭಿಷೇಕ್ ಬಚ್ಚನ್ ಈಗಲೂ ತಮ್ಮ ತಂದೆ-ತಾಯಿ ಜೊತೆ ವಾಸಿಸುತ್ತಾರೆ. ಎಲ್ಲರೂ ಹೀಗೆ ಕಲಿಯಿರಿ” ಎಂದು ವೈಬಿಎನ್ ಎಂಬ ಅಭಿಮಾನಿ ಟ್ವಿಟ್ಟರಿನಲ್ಲಿ ಟ್ರೋಲ್ ಮಾಡಿದ್ದನು.
https://twitter.com/stillyoungest/status/986300070709604352
Yes! And it’s the proudest moment for me to be able to be there for them, as they have for me. Try it sometime, you might feel better about yourself.
— Abhishek 𝐁𝐚𝐜𝐡𝐜𝐡𝐚𝐧 (@juniorbachchan) April 17, 2018
ಈ ಟ್ವೀಟ್‍ಗೆ ಪ್ರತಿಕ್ರಿಯಿಸಿದ ಅಭಿಷೇಕ್ ಬಚ್ಚನ್, “ನನ್ನ ತಂದೆ-ತಾಯಿ ಜೊತೆಯಿರುವುದು ನನಗೆ ಹೆಮ್ಮೆಯ ವಿಷಯ. ಅವರಿಗೂ ನನ್ನ ಜೊತೆ ಇರುವುದ್ದಕ್ಕೆ ಹೆಮ್ಮೆ ಪಡುತ್ತಾರೆ. ನೀವು ಇದೇ ರೀತಿಯಾಗಿ ಪೋಷಕರ ಜೊತೆ ಇರಿ. ನಿಮಗೂ ತೃಪ್ತಿ ಆಗುತ್ತದೆ” ಎಂದು ಟ್ವೀಟ್ ಮಾಡಿ ಜೂ. ಬಚ್ಚನ್ ಆ ಅಭಿಮಾನಿಯ ಬೆವರಿಳಿಸಿದ್ದಾರೆ.
ನಂತರ ಮತ್ತೊಬ್ಬ ಅಭಿಮಾನಿ ನೀವು ಏಕೆ ಎಲ್ಲ ಟ್ರೋಲ್‍ಗಳಿಗೆ ಪ್ರತಿಕ್ರಿಯಿಸುತ್ತಿರಿ ಎಂದು ಕೇಳಿದ್ದಕ್ಕೆ, ಕೆಲವು ಬಾರಿ ಜನರಿಗೆ ಅವರ ನಿಜವಾದ ಜಾಗ ತೋರಿಸಬೇಕಾಗುತ್ತದೆ ಎಂದು ಅಭಿಷೇಕ್ ಬಚ್ಚನ್ ಉತ್ತರಿಸಿದ್ದಾರೆ.
Why would you even reply mr bachchan?? That's what they need "attention"..
— आर्येन्द्र पाराशर (@ap_aryendra) April 17, 2018
Sometimes
they need to be put in place.— Abhishek 𝐁𝐚𝐜𝐡𝐜𝐡𝐚𝐧 (@juniorbachchan) April 17, 2018
ಟ್ರೋಲ್ ಮಾಡಿದವರಿಗೆ ಅಭಿಷೇಕ್ ಕೊಟ್ಟ ಪ್ರತಿಕ್ರಿಯೆಗೆ ಹಲವು ಮಂದಿ, “ನೀವು ಬೇರೆ ಮನೆ ಮಾಡದೇ ತಂದೆ-ತಾಯಿ ಜೊತೆ ವಾಸಿಸುತ್ತಿರುವುದರ ಬಗ್ಗೆ ನೀವು ಯಾರಿಗೂ ಏನೂ ಹೇಳಬೇಕಿಲ್ಲ. ವಯಸ್ಸಾದ ತಂದೆ-ತಾಯಿಯ ಜೊತೆ ಇದ್ದು, ಅವರನ್ನು ನೋಡಿಕೊಳ್ಳಬೇಕು” ಎಂದು ಟ್ವೀಟ್ ಮಾಡಿ ಅಭಿಷೇಕ್ ನಿರ್ಧಾರಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

ಈ ಹಿಂದೆ ಅಮೆರಿಕದ ಖಾಸಗಿ ವಾಹಿನಿಯಲ್ಲಿ ನಡೆದ ಕಾರ್ಯಕ್ರಮದ ಸಂದರ್ಶನದಲ್ಲಿ ನಿರೂಪಕಿ ಅಭಿಷೇಕ್ ಹಾಗೂ ಐಶ್ವರ್ಯರನ್ನು ನೀವು ಈಗಲೂ ತಂದೆ ತಾಯಿ ಜೊತೆ ವಾಸಿಸುತ್ತೀರ ಎಂದು ಪ್ರಶ್ನಿಸಿದ್ದರು. ಅದಕ್ಕೆ ಹೌದು ಎಂದು ಅಭಿಷೇಕ್ ಉತ್ತರಿಸಿದಾಗ ಅದು ನಿಮ್ಮಿಂದ ಹೇಗೆ ಸಾಧ್ಯ ಎಂದು ನಿರೂಪಕಿ ಮರು ಪ್ರಶ್ನೆ ಕೇಳಿದ್ದರು. ಆಗ ಅಭಿಷೇಕ್, ನೀವು ನಿಮ್ಮ ತಂದೆ ತಾಯಿ ಜೊತೆ ವಾಸಿಸುತ್ತೀರ ಎಂದು ನಿರೂಪಕಿಯನ್ನೇ ಪ್ರಶ್ನಿಸಿದ್ದರು. ಆಗ ಇಲ್ಲ ಎಂದು ಹೇಳಿದ ನಿರೂಪಕಿಗೆ, ಅದು ನಿಮ್ಮಿಂದ ಹೇಗೆ ಸಾಧ್ಯ ಎಂದು ಮರು ಪ್ರಶ್ನಿಸುವ ಮೂಲಕ ಖಡಕ್ ಉತ್ತರ ನೀಡಿದ್ದರು.

Leave a Reply