ಮೊದಲ ಅವಾರ್ಡ್ ಅಪ್ಪನ ಫೋಟೋ ಮುಂದೆ ಇರಿಸಿದ ಅಭಿಷೇಕ್ ಅಂಬರೀಷ್

ಬೆಂಗಳೂರು: ಅಮರ್ ಚಿತ್ರದಲ್ಲಿನ ಅಭಿನಯಕ್ಕಾಗಿ ಅಭಿಷೇಕ್ ಅಂಬರೀಷ್ ಅವರಿಗೆ ಸೈಮಾ ಸಮಾರಂಭದಲ್ಲಿ ಅತ್ಯುತ್ತಮ ಉದಯೋನ್ಮಕ ನಟ ಪ್ರಶಸ್ತಿ ಸಿಕ್ಕಿದೆ. ಈ ಅವಾರ್ಡ್‍ನ್ನು ಅಭಿಷೇಕ್ ಅಂಬರೀಷ್ ತಂದೆಯ ಫೋಟೋ ಎದುರು ಇಟ್ಟಿದ್ದಾರೆ.

ಹೈದರಾಬಾದ್‍ನಲ್ಲಿ ನಡೆದ ಅದ್ದೂರಿ ಸೈಮಾ ಸಮಾರಂಭದಲ್ಲಿ ಅತ್ಯುತ್ತಮ ಉದಯೋನ್ಮಕ ನಟ ಪ್ರಶಸ್ತಿಯನ್ನು ಅಭಿಷೇಕ್ ಪಡೆದಿದ್ದಾರೆ. ಈ ಪ್ರಶಸ್ತಿಯನ್ನು ಅಪ್ಪ ಅಂಬರೀಷ್ ಅವರ ಫೋಟೋದ ಮುಂದಿರಿಸಿ ಖುಷಿಪಟ್ಟಿದ್ದಾರೆ. ಈ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.

ಮಗನಿಗೆ ಮೊದಲ ಅವಾರ್ಡ್ ಸಿಕ್ಕಿದ್ದಕ್ಕೆ ಹೆಮ್ಮೆ ಮತ್ತು ಸಂತಸ ಆಗುತ್ತಿದೆ. ಅಂಬರೀಷ್ ಇನ್ನೂ ಹೆಚ್ಚು ಹೆಮ್ಮೆ ಪಡುತ್ತಿದ್ದರು ಎಂದು ಬರೆದುಕೊಂಡು ಮಗನಿಗೆ ಅವಾರ್ಡ್ ಸಿಕ್ಕಿರುವ ಅಂಭ್ರಮದ ಕ್ಷಣದ ಫೋಟೋವನ್ನು, ಸೈಮಾ ಸಮಾರಂಭದಲ್ಲಿ ಸುಮಲತಾ ಸೆಲ್ಫೀ ಕ್ಲಿಕ್ಕಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.  ಇದನ್ನೂ ಓದಿ:  ಬೆಂಗಳೂರಿನಲ್ಲಿ ಪಾಕಿಸ್ತಾನ ಗೂಢಾಚಾರಿಯ ಬಂಧನ

ಮಗನಿಗೆ ಸಿಕ್ಕ ಮೊದಲ ಅವಾರ್ಡ್ ಬಗ್ಗೆ ಸುಮಲತಾ ಅಂಬರೀಷ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಭಿಷೇಕ್ ಜೊತೆ ಸುಮಲತಾ ಕೂಡ ಭಾಗವಹಿಸಿದ್ದರು. ಈ ಸಂಭ್ರಮದ ಕ್ಷಣಕ್ಕೆ ಅವರೂ ಸಾಕ್ಷಿಯಾದರು.

ನಾಗಶೇಖರ್ ನಿರ್ದೇಶನದ ಅಮರ್ ಸಿನಿಮಾ ಮೂಲಕ ಅಭಿಷೇಕ್ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟರು. ಆ ಸಿನಿಮಾ ಬಿಡುಗಡೆ ಆಗುವುದಕ್ಕೂ ಮುನ್ನವೇ ಅಂಬರೀಷ್ ಇಹಲೋಕ ತ್ಯಜಿಸಿದ್ದು, ನೋವಿನ ಸಂಗತಿಯಾಗಿದೆ.

Comments

Leave a Reply

Your email address will not be published. Required fields are marked *