ಅಭಿನಂದನ್‍ಗೆ ಪಾಕ್ ಸೇನಾಧಿಕಾರಿಗಳು ಮಾನಸಿಕ ಕಿರುಕುಳ!

-ಬೆಂಗಳೂರಿನ ಎಚ್‍ಎಎಲ್ ನಲ್ಲಿ ಅಭಿನಂದನ್‍ಗೆ ಫೈಯಿಂಗ್ ಫಿಟ್ನೆಸ್ ಪರೀಕ್ಷೆ

ನವದೆಹಲಿ: ವಿಂಗ್ ಕಮಾಂಡರ್ ಅಭಿನಂದನ್‍ಗೆ ಪಾಕ್ ಸೇನಾಧಿಕಾರಿಗಳು ಮಾನಸಿಕವಾಗಿ ಕಿರುಕುಳ ನೀಡಿರುವ ಆಘಾತಕಾರಿ ಅಂಶ ಬಯಲಾಗಿದೆ.

ಇಂದು ದೆಹಲಿಯ ಸೇನಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡುವ ಸಂದರ್ಭದಲ್ಲಿ ಅಭಿನಂದನ್ ಈ ವಿಚಾರವನ್ನು ಬಯಲು ಮಾಡಿದ್ದಾರೆ. ಸೇನೆಯ ರಹಸ್ಯ ಹೇಳುವಂತೆ, ಭಾರತದ ಯೋಜನೆಗಳ ಕುರಿತಂತೆ, ವೈಯಕ್ತಿಕ ವಿಚಾರಗಳ ಬಗ್ಗೆ ಮಾಹಿತಿ ನೀಡುವಂತೆ ಪಾಕ್ ಸೇನಾಧಿಕಾರಿಗಳು ಮಾನಸಿಕವಾಗಿ ಒತ್ತಡ ಹೇರಿದ್ದರು. ಕಿರುಕುಳ ನೀಡಿದ್ರು ಎಂದು ಅಭಿನಂದನ್ ತಿಳಿಸಿದ್ದಾರೆ ಎನ್ನಲಾಗಿದೆ.

ಶುಕ್ರವಾರ ಅಭಿನಂದನ್‍ರಿಂದ ಬಲವಂತವಾಗಿ ಹೇಳಿಕೆ ಪಡೆಯೋ ವೇಳೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಖುದ್ದು ಲಾಹೋರ್‍ನಲ್ಲಿ ಹಾಜರಿದ್ರು ಎಂದು ತಿಳಿದುಬಂದಿದೆ. ಈ ನಡ್ವೆ, ಅಭಿನಂದನ್‍ರನ್ನು ಪ್ರಧಾನಿ ಹಾಡಿ ಹೊಗಳಿದ್ದಾರೆ. ಅಭಿನಂದನ್ ಪದದ ಅರ್ಥವೇ ಡಿಕ್ಷನರಿಯಲ್ಲಿ ಬದಲಾಗಲಿದೆ ಎಂದು ತಿಳಿಸಿದ್ದಾರೆ. ಇವತ್ತು ವಾಯು ಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‍ರನ್ನು ಭೇಟಿಯಾಗಿ ವಿವರಣೆ ಸಹ ನೀಡಿದ್ದಾರೆ.

ನಾಳೆ (ಭಾನುವಾರ)ಯಿಂದ ನಾಲ್ಕು ದಿನಗಳ ಕಾಲ  ಫೈಯಿಂಗ್ ಫಿಟ್ನೆಸ್ ನಡೆಯಲಿದ್ದು, ಮಿಗ್-21 ಹಾರಿಸಲು ಅಭಿನಂದನ್ ಸಮರ್ಥರಾಗಿದ್ದಾರೋ ಅಥವಾ ಇಲ್ವೋ ಅನ್ನೋದರ ಪರೀಕ್ಷೆ ಬೆಂಗಳೂರಿನ ಎಚ್‍ಎಎಲ್‍ನಲ್ಲಿ ನಡೆಯಲಿದೆ.

ಡಿ-ಬ್ರೀಫಿಂಗ್ ವೇಳೆ ಏನೆಲ್ಲಾ ನಡೆಯುತ್ತೆ..?
* ಇಂದು ವಿಶ್ರಾಂತಿ ಜೊತೆಗೆ ವೈದ್ಯಕೀಯ ಪರೀಕ್ಷೆ
* ನಾಳೆಯಿಂದ ನಾಲ್ಕು ದಿನಗಳ ಕಾಲ ಡಿ-ಬ್ರೀಫಿಂಗ್ (ವಾಯುಪಡೆಯ ಇಂಟೆಲಿಜೆನ್ಸ್ ಯೂನಿಟ್‍ನಲ್ಲಿ)
* ನಮ್ಮ ಸೈನಿಕರು ವೈರಿ ರಾಷ್ಟ್ರದಿಂದ ರಿಲೀಸ್ ಆದಾಗ ಸೇನೆ ನಡೆಸುವ ತನಿಖಾ ಪ್ರಕ್ರಿಯೆ
* ದೇಹದಲ್ಲಿ ಯಾವುದಾದರೂ ಟ್ರ್ಯಾಕಿಂಗ್ ಡಿವೈಸ್ ಇದ್ಯಾ ಎಂಬುದನ್ನು ಪತ್ತೆ ಹಚ್ಚಲು ಸ್ಕ್ಯಾನಿಂಗ್..!

* ವಿಂಗ್ ಕಮಾಂಡರ್ ಅಭಿನಂದನ್ ಮಾನಸಿಕ ಸ್ಥಿತಿಗತಿಯ ಬಗ್ಗೆಯೂ ಪರೀಕ್ಷೆ ನಡೆಸಲಾಗುತ್ತದೆ.
* ಬಂಧನದಲ್ಲಿದ್ದಾಗ ಪಾಕಿಸ್ತಾನ ಯಾವ ಮಾಹಿತಿ ಕೇಳಿತ್ತು ಎಂಬ ಬಗ್ಗೆ ಅಧಿಕಾರಿಗಳಿಂದ ವಿಚಾರಣೆ
* ವೈರಿ ರಾಷ್ಟ್ರ ತನ್ನನ್ನು ಸ್ಪೈ ಆಗಿ ನೇಮಕ ಮಾಡಿಕೊಂಡಿಲ್ಲ ಎಂಬುದನ್ನು ಖಚಿತಪಡಿಸಬೇಕು
* ಈ ಎಲ್ಲಾ ಸೇನಾ ಪ್ರಕ್ರಿಯೆ ಬಳಿಕ ಬೆಂಗಳೂರಿನ ಹೆಚ್‍ಎಎಲ್‍ನಲ್ಲಿ ಪೈಲಟ್ ಫಿಟ್ನೆಸ್ ಟೆಸ್ಟ್
* ಕುಟುಂಬದ ಜೊತೆ ಸಮಯ ಕಳೆಯಲು ಒಂದು ತಿಂಗಳ ರಜೆ ಆಫರ್..!
* ಮೆಡಿಕಲ್ ಫಿಟ್‍ನೆಸ್ ಸರ್ಟಿಫಿಕೇಟ್, ಪ್ಲೈಯಿಂಗ್ ಸರ್ಟಿಫಿಕೇಟ್ ಸಿಕ್ಕ ತಕ್ಷಣ ಕರ್ತವ್ಯಕ್ಕೆ ಹಾಜರಾಗಬಹುದು.

https://www.youtube.com/watch?v=aLXUOT6ZlZg

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *