ಆಸೀಸ್ ಟೂರ್ನಿ- ಟೀಂ ಇಂಡಿಯಾ ಬೆನ್ನಿಗೆ ನಿಂತ ಎಬಿಡಿ

ಮುಂಬೈ: ಆಸೀಸ್ ಪ್ರವಾಸ ಕೈಗೊಳ್ಳಲಿರುವ ಟೀಂ ಇಂಡಿಯಾ ತಂಡ ಉತ್ತಮವಾಗಿದ್ದು, ಆಸ್ಟ್ರೇಲಿಯಾಗೆ ತನ್ನದೇ ನೆಲದಲ್ಲಿ ಸೋಲುಣಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ದಕ್ಷಿಣ ಆಫ್ರಿಕಾ ಮಾಜಿ ಆಟಗಾರ ಎಬಿಡಿ ವಿಲಿಯರ್ಸ್ ಅಭಿಪ್ರಾಯ ಪಟ್ಟಿದ್ದಾರೆ.

ಈ ಹಿಂದಿನ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡಿದ್ದು, ಸದ್ಯ ತಂಡ ಮತ್ತೊಂದು ಉತ್ತಮ ಅವಕಾಶ ಹೊಂದಿದೆ. ಆದರೆ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಸೋಲುಂಡರೂ ದಿಟ್ಟ ಪ್ರದರ್ಶನವನ್ನೇ ಟೀಂ ಇಂಡಿಯಾ ನೀಡಿದೆ. ಅದರಲ್ಲೂ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ರೋಚಕ ಸೋಲುಂಡಿತ್ತು. ಒಂದೊಮ್ಮೆ ಆ ಪಂದ್ಯವನ್ನು ಗೆದ್ದಿದ್ದರೆ, ಟೂರ್ನಿಯ ಫಲಿತಾಂಶವೇ ಬೇರೆಯಾಗುತಿತ್ತು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಬುಮ್ರಾ ಹಾಗೂ ಭುನೇಶ್ವರ್ ಕುಮಾರ್ ಇಂಗ್ಲೆಂಡ್ ಟೂರ್ನಿಗೆ ಸಿದ್ಧರಾಗಿರಲಿಲ್ಲ. ಆದರೆ ಅವರು ಸದ್ಯ ಉತ್ತಮ ಫಾರ್ಮ್ ನಲ್ಲಿದ್ದು, ವಿಶ್ವ ಕ್ರಿಕೆಟ್ ಬೆಸ್ಟ್ ಬೌಲಿಂಗ್ ಪಡೆಯನ್ನು ತಂಡ ಹೊಂದಿದೆ. ಅಲ್ಲದೇ ಬ್ಯಾಟಿಂಗ್ ಕ್ರಮಾಂಕವೂ ಉತ್ತಮವಾಗುತ್ತಿದ್ದು, ಆಸೀಸ್ ವಿರುದ್ಧದ ಗೆಲ್ಲುವ ಅವಕಾಶವನ್ನು ಕೈಚೆಲ್ಲುವುದಿಲ್ಲ ಎಂಬ ವಿಶ್ವಾಸವಿದೆ ಎಂದರು.

ನಮ್ಮಿಬ್ಬರ ಯೋಚನಾ ಶೈಲಿ ಒಂದೇ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಎಬಿಡಿ ವಿಲಿಯರ್ಸ್ ಮಧ್ಯೆ ಉತ್ತಮ ಸ್ನೇಹ ಹೊಂದಿರುವುದು ಎಲ್ಲರಿಗೂ ತಿಳಿದ ಸಂಗತಿ. ತಮ್ಮ ಸಂದರ್ಶನದಲ್ಲಿ ಕೊಹ್ಲಿ ಕುರಿತು ಮಾತನಾಡಿರುವ ಎಬಿಡಿ, ಇಬ್ಬರು ಒಂದೇ ರೀತಿಯ ಯೋಚನಾ ದಾಟಿಯನ್ನು ಹೊಂದಿದ್ದು, ಮೈದಾನದಲ್ಲೂ ಹಾಗೆಯೇ ಆಟವನ್ನು ಎಂಜಯ್ ಮಾಡುತ್ತೇವೆ. ಅಭಿಮಾನಿಗಳು ನಮ್ಮನ್ನು ಫುಟ್ಬಾಲ್ ದಿಗ್ಗಜರಾದ ಮೆಸ್ಸಿ, ರೋನಾಲ್ಡೋ ಅವರಿಗೆ ಹೋಲಿಕೆ ಮಾಡುತ್ತಾರೆ. ಅದನ್ನು ಕೇಳಲು ಇಷ್ಟವಾಗುತ್ತದೆ ಎಂದು ಪ್ರತಿಕ್ರಿಯಿಸಿದರು

ಇದೇ ವೇಳೆ ಕೊಹ್ಲಿಯನ್ನು ಹಾಡಿ ಹೊಗಳಿದ ಎಬಿಡಿ, ಕೊಹ್ಲಿ ತಂಡದ ನಾಯಕರಾಗಿ ತಮ್ಮ ತಪ್ಪುಗಳಿಂದಲೇ ಎಲ್ಲವನ್ನು ಕಲಿಯುತ್ತಾರೆ. ಕೊಹ್ಲಿ ಒಬ್ಬ ಅತ್ಯುತ್ತಮ ನಾಯಕ ಹಾಗೂ ಬ್ಯಾಟ್ಸ್‍ಮನ್ ಆಗಿರುವುದು ಎದುರಾಳಿಗಳಿಗೆ ಭಯ ಹುಟ್ಟಿಸುವ ಅಂಶವಾಗಿದೆ ಎಂದು ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *