ಏಕದಿನ ರ‌್ಯಾಂಕಿಂಗ್ ಪಟ್ಟಿಯಲ್ಲಿ ಕೊಹ್ಲಿಯನ್ನು ಹಿಂದಿಕ್ಕಿದ ಎಬಿಡಿ

ನವದೆಹಲಿ: ಅಂತರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ(ಐಸಿಸಿ)ಯ ನೂತನ ಏಕದಿನ ರ‌್ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿರನ್ನು ಹಿಂದಿಕ್ಕಿ ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ ಎಬಿ ಡಿವಿಲಿಯರ್ಸ್ ನಂ.1 ಸ್ಥಾನವನ್ನು ಪಡೆದಿದ್ದಾರೆ.

ಪ್ರಸ್ತುತ 877 ಪಾಯಿಂಟ್‍ಗಳೊಂದಿಗೆ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಬಾಂಗ್ಲಾದೇಶದ ಸರಣಿಯ ಎರಡನೇ ಪಂದ್ಯದಲ್ಲಿ 176 ರನ್‍ಗಳನ್ನ ಸಿಡಿಸುವ ಮೂಲಕ ಡಿವಿಲಿಯರ್ಸ್ 876 ಪಾಯಿಂಟ್‍ಗಳನ್ನು ಪಡೆದು ಮೊದಲ ಸ್ಥಾನದಲ್ಲಿದ್ದಾರೆ. ಇನ್ನುಳಿದಂತೆ ಭಾರತದ ರೋಹಿತ್ ಶರ್ಮಾ ಕೂಡ ಶ್ರೇಯಾಂಕದಲ್ಲಿ 2 ಸ್ಥಾನ ಕೆಳಗಿಳಿದಿದ್ದು, 5ನೇ ಸ್ಥಾನದಲ್ಲಿದ್ದವರು ಈಗ 7ನೇ ಸ್ಥಾನದಿದ್ದಾರೆ.

ಬೌಲಿಂಗ್ ವಿಭಾಗದಲ್ಲಿ ಪಾಕಿಸ್ತಾನದ ಹಸನ್ ಅಲಿ ನಂ.1 ಸ್ಥಾನವನ್ನು ಪಡೆದಿದ್ದರೆ. ಭಾರತ ತಂಡದ ವೇಗದ ಬೌಲರ್ ಜಸ್‍ಪ್ರೀತ್ ಬುಮ್ರಾ 617 ಪಾಯಿಂಟ್‍ಗಳೊಂದಿಗೆ ಒಂದು ಸ್ಥಾನ ಕುಸಿತಗೊಂಡು 6ನೇ ಸ್ಥಾನದಲ್ಲಿದ್ದಾರೆ. ಎಡಗೈ ಸ್ಪಿನ್ನರ್ ಅಕ್ಷರ್ ಪಾಟೇಲ್ ಒಂದು ಸ್ಥಾನ ಕುಸಿದು 8ನೇ ಸ್ಥಾನಕ್ಕಿಳಿದಿದ್ದಾರೆ.

ಇದನ್ನೂ ಓದಿ: ಡಿವಿಲಿಯರ್ಸ್ ಭರ್ಜರಿ ಬ್ಯಾಟಿಂಗ್ – 104 ಬಾಲಲ್ಲಿ 176 ರನ್ ಬಾರಿಸಿದ ಎಬಿ!

ಆಲ್ ರೌಂಡರ್ ವಿಭಾಗದಲ್ಲಿ ಪಾಕಿಸ್ತಾನದ ಮೊಹಮ್ಮದ್ ಹಫೀಜ್ ನಂ.1 ಸ್ಥಾನವನ್ನು ಪಡೆದಿದ್ದರೆ. ನಂತರದ ಸ್ಥಾನವನ್ನು ಬಾಂಗ್ಲಾ ತಂಡದ ಶಕೀಬ್ ಹಲ್ ಹಸನ್ ಪಡೆದಿದ್ದಾರೆ. ಭಾರತದ ಹಾರ್ದಿಕ್ ಪಾಂಡ್ಯ 15 ಮತ್ತು ರವೀಂದ್ರ ಜಡೇಜ 19 ನೇ ಸ್ಥಾನವನ್ನು ಪಡೆದಿದ್ದು, ಟಾಪ್ 20ರಲ್ಲಿನ ಭಾರತೀಯ ಆಟಗಾರರಾಗಿದ್ದಾರೆ.

ಮೊನ್ನೆಯಷ್ಟೇ ಭಾರತ ತಂಡ ಏಕದಿನ ರ‌್ಯಾಂಕಿಂಗ್ ನಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದ್ದು. ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯನ್ನು 4-1 ಅಂತರಲ್ಲಿ ಗೆದ್ದರೂ ಏಕದಿನ ರ‌್ಯಾಂಕಿಂಗ್ ನಲ್ಲಿ ಎರಡನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ದಕ್ಷಿಣ ಆಫ್ರಿಕಾ ಹಾಗೂ ಭಾರತ ತಂಡಗಳು ಸಾಮಾನವಾಗಿ 120 ಪಾಯಿಂಟ್‍ಗಳನ್ನು ಪಡೆದಿದ್ದರೂ ದಶಮಾಂಶದ ಆಧಾರದ ಮೇಲೆ ಆಫ್ರಿಕಾ ನಂ.1 ಸ್ಥಾನದಲ್ಲಿದೆ.

ಅಕ್ಟೋಬರ್ 22ರಿಂದ ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಸರಣಿ ಆರಂಭವಾಗಲಿದ್ದು, ಭಾರತಕ್ಕೆ ಮತ್ತೆ ನಂ.1 ಸ್ಥಾನಕ್ಕೇರುವ ಅವಕಾಶವಿದೆ.

Comments

Leave a Reply

Your email address will not be published. Required fields are marked *