ದ್ರೌಪದಿ ಮುರ್ಮು ಗೌರವಿಸುತ್ತೇವೆ, ಸಿನ್ಹಾರನ್ನು ಬೆಂಬಲಿಸುತ್ತೇವೆ: ಎಎಪಿ

ನವದೆಹಲಿ: ರಾಷ್ಟ್ರಪತಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳು ತಮ್ಮ ಬೆಂಬಲವನ್ನು ಬಹಿರಂಗಪಡಿಸುತ್ತಿವೆ. ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಹಾಗೂ ಪ್ರತಿಪಕ್ಷಗಳ ಆಯ್ಕೆ ಯಶವಂತ್ ಸಿನ್ಹಾ ಆಗಿದ್ದು, ಈ ಪೈಕಿ ದೇಶಾದ್ಯಂತ ಪಕ್ಷಗಳು ತಮ್ಮ ಬೆಂಬಲ ಯಾರಿಗೆ ಎಂಬುದನ್ನು ಘೋಷಿಸುತ್ತಿವೆ.

ಇದೀಗ ಅರವಿಂದ್ ಕೇಜ್ರಿವಾಲ್ ಅವರ ಆಮ್‌ಆದ್ಮಿ ಪಕ್ಷ ತಮ್ಮ ಬೆಂಬಲ ಯಾರಿಗೆ ಎಂಬುದನ್ನು ತಿಳಿಸಿದೆ. ನಾವು ದ್ರೌಪದಿ ಮುರ್ಮು ಅವರನ್ನು ಗೌರವಿಸುತ್ತೇವೆ. ಆದರೆ ನಮ್ಮ ಬೆಂಬಲ ಯಶವಂತ್ ಸಿನ್ಹಾ ಅವರ ಪರವಾಗಿದೆ ಎಂದು ಆಪ್ ಸಂಸದ ಸಂಜಯ್ ಸಿಂಗ್ ಹೇಳಿದ್ದಾರೆ.

ಬುಡಕಟ್ಟು ನಾಯಕಿ, ಗವರ್ನರ್ ಆಗಿರುವ ದ್ರೌಪದಿ ಮುರ್ಮು ಅವರನ್ನು ಎನ್‌ಡಿಎ ಪಕ್ಷ ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯಾಗಿ ನಾಮನಿರ್ದೇಶನಗೊಳಿಸಿತು. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಆಶ್ಚರ್ಯ ಹಾಗೂ ಸಂತೋಷವನ್ನು ವ್ಯಕ್ತಪಡಿಸಿದ್ದರು. ಬಡತನ ಹಾಗೂ ಕಷ್ಟಗಳನ್ನು ಎದುರಿಸಿರುವ ದ್ರೌಪದಿ ಮುರ್ಮು ರಾಷ್ಟ್ರಪತಿ ಹುದ್ದೆಗೆ ಸಮರ್ಥರಾದವರು. ಅವರು ದೇಶದ ಮಹಾನ್ ರಾಷ್ಟ್ರಪತಿಯಾಗುತ್ತಾರೆ ಎಂದು ಮೋದಿ ತಿಳಿಸಿದ್ದರು. ಇದನ್ನೂ ಓದಿ: ಪಂಜಾಬ್ ವಿಧಾನಸಭೆಯ ಮಾಜಿ ಸ್ಪೀಕರ್ ನಿರ್ಮಲ್ ಸಿಂಗ್ ಕಹ್ಲೋನ್ ನಿಧನ

ವಿರೋಧಪಕ್ಷದ ಅಭ್ಯರ್ಥಿಯಾಗಿ ಟಿಎಂಸಿಯ ಹಿರಿಯ ನಾಯಕ ಯಶವಂತ್ ಸಿನ್ಹಾ ಅವರ ನಾಮನಿರ್ದೇಶನ ಮಾಡಲಾಗಿದೆ. ವಿರೋಧಪಕ್ಷದ ಅಭ್ಯರ್ಥಿಯಾಗಲು ಶರದ್ ಪವಾರ್, ಗೋಪಾಲಕೃಷ್ಣ ಗಾಂಧಿ ಹಾಗೂ ಫಾರೂಕ್ ಅಬ್ದುಲ್ಲಾ ನಿರಾಕರಿಸಿದ ಬಳಿಕ ಯಶವಂತ್ ಸಿನ್ಹಾ ಕೊನೆಯದಾಗಿ ರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿಯಾದರು.

ಈ ನಡುವೆ ದ್ರೌಪದಿ ಮುರ್ಮು ಅವರಿಗೆ ಶಿವಸೇನೆಯೂ ಬೆಂಬಲ ವ್ಯಕ್ತಪಡಿಸಿದ್ದು, ಸಿನ್ಹಾ ಅವರು ಶನಿವಾರ ಮಾಹಾರಾಷ್ಟ್ರದ ಭೇಟಿಯನ್ನು ರದ್ದುಗೊಳಿಸಿದ್ದಾರೆ. ಸಿನ್ಹಾ ಅವರು ಎಂವಿಎ ಶಾಸಕರನ್ನು ಭೇಟಿಯಾಗಲು ಇಂದು ಮಹಾರಾಷ್ಟ್ರಕ್ಕೆ ತೆರಳಬೇಕಿತ್ತು. ಆದರೆ ಈ ಭೇಟಿ ಇದೀಗ ರದ್ದಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಪ.ಬಂಗಾಳದ 11 ಜಿಲ್ಲೆಗಳಲ್ಲಿ ಕಾಡುತ್ತಿದೆ ಕಪ್ಪು ಜ್ವರ ಅಥವಾ ‘ಕಾಲಾ-ಅಜರ್’ – ಲಕ್ಷಣವೇನು?

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *