ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ (Narendra Modi) ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಗುಜರಾತ್ ಎಎಪಿ (AAP) ಮುಖ್ಯಸ್ಥ ಗೋಪಾಲ್ ಇಟಾಲಿಯಾರನ್ನು (Gopal Italia) ಸುಮಾರು ಮೂರು ಗಂಟೆಗೂ ಹೆಚ್ಚು ಕಾಲ ವಶಕ್ಕೆ ಪಡೆದು ಬಿಡುಗಡೆಗೊಳಿಸಿದ್ದಾರೆ.

ರಾಷ್ಟ್ರೀಯ ಮಹಿಳಾ ಆಯೋಗ (NCW) ತನ್ನ ಮುಂದೆ ವಿಚಾರಣೆಗೆ ಹಾಜರಾಗುವಂತೆ ಗೋಪಾಲ್ ಇಟಾಲಿಯಾಗೆ ಸಮನ್ಸ್ ನೀಡಿತ್ತು. ನಿಂದನೀಯ ಮತ್ತು ಅಸಭ್ಯ ಭಾಷೆ ಬಳಸಿದ್ದಕ್ಕಾಗಿ ಇಟಾಲಿಯಾಗೆ ಸಮನ್ಸ್ ನೀಡಲಾಗಿದೆ. ಅವರ ಹೇಳಿಕೆ ಲಿಂಗ ಪಕ್ಷಪಾತ ಸ್ತ್ರೀದ್ವೇಷಕ್ಕಾಗಿ ಖಂಡನೀಯ ಎಂದು NCW ಅಧ್ಯಕ್ಷೆ ರೇಖಾ ಶರ್ಮಾ ಕಿಡಿಕಾರಿದ್ದರು. ಸಮನ್ಸ್ ವಿರೋಧಿಸಿ NCW ಕಚೇರಿ ಮುಂದೆ ಎಎಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಇಟಾಲಿಯಾ ಬೆಂಬಲಿಗರು NCW ಕಟ್ಟಡದ ಹೊರಗೆ ಗದ್ದಲವೆಬ್ಬಿಸಿದ ಆರೋಪ ಕೇಳಿ ಬಂದ ಬಳಿಕ ಪೊಲೀಸರ (Police) ತಂಡ ಸ್ಥಳಕ್ಕೆ ತೆರಳಿ ಅವರನ್ನು ವಶಕ್ಕೆ ತೆಗೆದುಕೊಂಡಿತು. ನಂತರ 3 ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿ ಇಟಾಲಿಯಾರನ್ನು ಪೊಲೀಸರು ಬಿಡುಗಡೆ ಮಾಡಿದರು. ಇದನ್ನೂ ಓದಿ: ಹರ್ಷ ಕೊಲೆ ಪ್ರಕರಣದ 10ನೇ ಆರೋಪಿಗೆ ಜಾಮೀನು ಮಂಜೂರು
https://twitter.com/raghav_chadha/status/1580492958452678656
ವಿಚಾರಣೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಇಟಾಲಿಯಾ, ಆ ವೀಡಿಯೋದಲ್ಲಿ ಹೇಳಿಕೆ ನೀಡಿರುವ ವ್ಯಕ್ತಿ ನಾನಲ್ಲ. ಈ ಬಗ್ಗೆ ಮೌಖಿಕ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದೇನೆ. ಈ ಕುರಿತು ಈಗಾಗಲೇ ಠಾಣೆಯಲ್ಲಿ ತಿಳಿಸಿದ್ದೇನೆ ಎಂದರು. ಇದನ್ನೂ ಓದಿ: ನಮಾಜ್ ಮಾಡುತ್ತಿದ್ದವರ ಮೇಲೆ ಹಲ್ಲೆ, ಮಸೀದಿ ಧ್ವಂಸ- 10ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ

Leave a Reply