ಅಮಿರ್ ಖಾನ್ ಮುನಿಸಿಕೊಂಡಿದ್ದಕ್ಕೆ ಎರಡು ಪಟ್ಟು ಹೆಚ್ಚಾಯ್ತು ಕತ್ರಿನಾ ಕೆಲಸ!

ಮುಂಬೈ: ಧೂಮ್-3 ಚಿತ್ರದ ಬಳಿಕ ಬಾಲಿವುಡ್ ಹಾಟ್ ಬೆಡಗಿ ಕತ್ರಿನಾ ಕೈಫ್ ಮತ್ತೊಮ್ಮೆ ಅಮಿರ್ ಖಾನ್ ಜೊತೆ ‘ಥಗ್ಸ್ ಆಫ್ ಹಿಂದೋಸ್ತಾನ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆದ್ರೆ ಚಿತ್ರೀಕರಣದ ವೇಳೆಯಲ್ಲಿ ಕತ್ರಿನಾ ಮೇಲೆ ಅಮಿರ್ ಕೋಪಗೊಳ್ಳುತ್ತಿದ್ದಾರೆ ಎಂಬ ಸುದ್ದಿಯೊಂದು ‘ಥಗ್ಸ್ ಆಫ್ ಹಿಂದೋಸ್ತಾನ್’ ಚಿತ್ರದ ಅಂಗಳದಿಂದ ಹೊರ ಬಂದಿದೆ.

ಮಿಸ್ಟರ್ ಪರ್ಫೆಕ್ಟ್ ಅನ್ನಿಸಿಕೊಳ್ಳುವ ಅಮಿರ್ ಖಾನ್ ಕೆಲಸದ ವಿಷಯದಲ್ಲಿ ಸಿಕ್ಕಾಪಟ್ಟೆ ಕಟ್ಟು ನಿಟ್ಟು. ಈ ಕಾರಣಕ್ಕೆ ಕತ್ರಿನಾ ನಟನೆಯಿಂದ ತೃಪ್ತರಾಗದ ಅಮಿರಾ ಸೆಟ್ ನಲ್ಲಿ ಅಸಮಧಾನ ಹೊರ ಹಾಕಿದ್ದಾರೆ ಅಂತಾ ಹೇಳಲಾಗುತ್ತಿದೆ. ಮಲ್ಟಿ ಸ್ಟಾರ್ ಹೊಂದಿರುವ ಚಿತ್ರದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹೀಗಾಗಿ ಎಲ್ಲರ ನಟನೆ ಹೊಂದಾಣಿಕೆ ಆಗುವಂತೆ ಕತ್ರಿನಾ ಕೂಡ ಸಿನಿಮಾದಲ್ಲಿ ನಟಿಸಬೇಕಿದೆ.

ಕತ್ರಿನಾ ನಟನೆಯ ದೃಶ್ಯಗಳನ್ನು ಎರಡೆರೆಡು ಬಾರಿ ಶೂಟ್ ಮಾಡಲಾಗ್ತಿದೆ ಎನ್ನಲಾಗಿದೆ. ಹೀಗಾಗಿ ಥಗ್ಸ್ ಆಫ್ ಹಿಂದೋಸ್ತಾನ್‍ದಲ್ಲಿ ಕತ್ರಿನಾ ಕೆಲಸ ಎರಡು ಪಟ್ಟು ಹೆಚ್ಚಾಗಿದೆ. ತನ್ನ ಸೀನ್‍ಗಳು ತೆರೆಯ ಮೇಲೆ ಚೆನ್ನಾಗಿ ಕಾಣಬೇಕೆಂದು ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ‘ಜಬ್ ತಕ್ ಹೈ ಜಾನ್’ ಸಿನಿಮಾದಲ್ಲಿಯೂ ಸಹ ಕತ್ರಿನಾ ನಟನೆಗೆ ಶಾರುಖ್ ಖಾನ್ ಅಸಮಾಧಾನ ವ್ಯಕ್ತಪಡಿಸಿದ್ದರು ಎಂಬ ಸುದ್ದಿಯೊಂದು ಕೇಳಿ ಬಂದಿತ್ತು.

ಥಗ್ಸ್ ಆಫ್ ಹಿಂದೋಸ್ತಾನ್‍ದಲ್ಲಿ ಫತಿಮಾ ಸನಾ ಶೇಖ್, ಶಶಾಂಕ್ ಅರೋರಾ, ಮೊಹಮ್ಮದ್ ಝೀಶಾನ್, ಆಯುಬ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಯಶ್ ರಾಜ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದ್ದು, ಇದೇ ವರ್ಷ ನವೆಂಬರ್ 7ರಂದು ಸಿನಿಮಾ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ತಿಳಿಸಿದೆ.

https://www.instagram.com/p/BfFYCXhFKdt/?hl=en&tagged=thugsofhindustan

https://www.instagram.com/p/BfAVB6vFTHh/?hl=en&tagged=thugsofhindustan

https://www.instagram.com/p/Be9kIQWhD6R/?hl=en&tagged=thugsofhindustan

Comments

Leave a Reply

Your email address will not be published. Required fields are marked *