‘ಒಂದು ಫೋನ್ ಕಾಲ್ ದೂರದಲ್ಲಿ ಧೋನಿ ರೀ ಎಂಟ್ರಿ’

ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ತಂಡಕ್ಕೆ ರೀ ಎಂಟ್ರಿ ಪಡೆಯಲು ಒಂದು ಫೋನ್ ಕಾಲ್ ದೂರದಲ್ಲಿದ್ದಾರೆ ಎಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅಭಿಪ್ರಾಯ ಪಟ್ಟಿದ್ದಾರೆ.

2019ರ ಏಕದಿನ ವಿಶ್ವಕಪ್ ಟೂರ್ನಿಯ ಬಳಿಕ ಕಳೆದ 8 ತಿಂಗಳಿನಿಂದ ಧೋನಿ ಕ್ರಿಕೆಟ್‍ನಿಂದ ದೂರವಿದ್ದಾರೆ. ಪರಿಣಾಮ ಮುಂಬರುವ ಟಿ20 ವಿಶ್ವಕಪ್ ಟೂರ್ನಿಯನ್ನು ಧೋನಿ ಆಡುವುದಿಲ್ಲ ಎಂಬ ಅನುಮಾನ ಮೂಡಿದೆ. ಒಂದೊಮ್ಮೆ ಐಪಿಎಲ್ 2020 ಆವೃತ್ತಿ ನಡೆದರೆ ಧೋನಿ ಪತ್ತೆ ತಂಡಕ್ಕೆ ಕಮ್‍ಬ್ಯಾಕ್ ಮಾಡುತ್ತಾರೆ ಎಂಬ ಲೆಕ್ಕಾಚಾರವಿತ್ತು. ಆದರೆ ಕೊರೋನಾ ಕಾರಣದಿಂದ ಐಪಿಎಲ್ ಮುಂದೂಡಿರುವುದರಿಂದ ಟೂರ್ನಿ ನಡೆಯವುದೇ ಅನುಮಾನವಾಗಿದೆ. ಇದರಿಂದ ಧೋನಿ ರೀ ಎಂಟ್ರಿ ಕುರಿತು ಸಂದಿಗ್ಧತೆ ಎದುರಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಟೀಂ ಇಂಡಿಯಾ ಮಾಜಿ ಆಟಗಾರ ಆಕಾಶ್ ಚೋಪ್ರಾ, ಬಿಸಿಸಿಐನ ಮೂವರಲ್ಲಿ ಯಾರಾದರೂ ಒಬ್ಬರು ಒಂದು ಫೋನ್ ಕರೆ ಮಾಡಿದರು ಧೋನಿ ಕಮ್ ಬ್ಯಾಕ್ ಸಾಧ್ಯವಾಗಲಿದೆ. ಬಿಸಿಸಿಐ ಅಧ್ಯಕ್ಷರಾದ ಗಂಗೂಲಿ, ಕ್ಯಾಪ್ಟನ್ ಕೊಹ್ಲಿ, ಕೋಚ್ ರವಿಶಾಸ್ತ್ರಿ ಅವರು ಧೋನಿ ಕಮ್‍ಬ್ಯಾಕ್ ಮಾಡಲು ನೆರವಾಗಬಹುದು ಎಂದಿದ್ದಾರೆ.

ವಿಶ್ವಕಪ್ ಬಳಿಕ 2 ತಿಂಗಳು ಭಾರತೀಯ ಸೈನ್ಯದೊಂದಿಗೆ ಕೆಲಸ ಮಾಡಿದ್ದ ಧೋನಿ, ಬಿಸಿಸಿಐ ಅನುಮತಿಯನ್ನು ಪಡೆದುಕೊಂಡಿದ್ದರು. ಆ ಬಳಿಕ ಧೋನಿ ಯಾವುದೇ ಪಂದ್ಯವನ್ನು ಆಡಲಿಲ್ಲ. ಈ ನಡುವೆ ಹಲವು ಬಾರಿ ಟೀಂ ಇಂಡಿಯಾ ಆಯ್ಕೆ ಸಮಿತಿ ಸದಸ್ಯರು ಧೋನಿ ಅವರ ಹೆಸರನ್ನು ಪ್ರಸ್ತಾಪಿಸಿದ್ದರು. ಆದರೆ ಟೀಂ ಸೆಲೆಕ್ಷನ್ ವೇಳೆಯಲ್ಲಿ ಪರಿಗಣೆಗೆ ತೆಗೆದುಕೊಂಡಿರಲಿಲ್ಲ. ಇತ್ತ ಧೋನಿ ಕೂಡ ತಮ್ಮ ರೀ ಎಂಟ್ರಿ ಕುರಿತು ಯಾವುದೇ ಪ್ರತಿಕ್ರಿಯೆಯನ್ನು ನೀಡಿರಲಿಲ್ಲ.

ಧೋನಿ ಸಹ ಟೀಂ ಇಂಡಿಯಾಗೆ ಕಮ್‍ಬ್ಯಾಕ್ ಮಾಡಲು ಜಾರ್ಖಂಡ್ ತಂಡದ ಪರ ಆಡುವ ಅವಕಾಶವಿದ್ದರೂ ಆಡಲಿಲ್ಲ. ಪರಿಣಾಮ ಧೋನಿ ಅವರನ್ನು ಬಿಸಿಸಿಐ ತನ್ನ ಕಾಂಟ್ರಾಕ್ಟ್ ನಿಂದ ದೂರವಿಟ್ಟಿತ್ತು. ಧೋನಿ ಕ್ರಿಕೆಟ್ ವೃತ್ತಿಜೀವನಕ್ಕೆ ಪಾದಾರ್ಪಣೆ ಮಾಡಿದ ಬಳಿಕ ಮೊದಲ ಬಾರಿಗೆ ಬಿಸಿಸಿಐ ಕಾಂಟ್ರಾಕ್ಟ್ ಕಳೆದುಕೊಂಡಿದ್ದರು. ಸದ್ಯ ಅವರ ರೀ ಎಂಟ್ರಿ ಕುರಿತು ಅಭಿಮಾನಿಗಳು ತೀವ್ರ ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

ಟೀಂ ಇಂಡಿಯಾದಿಂದ ದೂರವೇ ಉಳಿದಿದ್ದರು ಕೋಚ್ ರವಿಶಾಸ್ತ್ರಿ, ಧೋನಿ ಅವರು ಕಮ್ ಬ್ಯಾಕ್ ಕುರಿತು ಪ್ರತಿಕ್ರಿಯೆ ನೀಡಿದ್ದರು. ಐಪಿಎಲ್‍ನಲ್ಲಿ ಧೋನಿ ಉತ್ತಮ ಪ್ರದರ್ಶನ ನೀಡಿದರೆ ಮತ್ತೆ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆ ಇದೆ ಎಂದಿದ್ದರು. ಇತ್ತ ತಮ್ಮ ಕಮ್‍ಬ್ಯಾಕ್ ಐಪಿಎಲ್ ಟೂರ್ನಿಯನ್ನೇ ಟಾರ್ಗೆಟ್ ಮಾಡಿಕೊಂಡಿದ್ದ ಧೋನಿ, ಮಾರ್ಚ್ ಮೊದಲ ವಾರದಲ್ಲೇ ಚೆನ್ನೈ ತಂಡದ ತರಬೇತಿ ಶಿಬಿರಕ್ಕೆ ಹಾಜರಾಗಿದ್ದರು. ಸದ್ಯ ಐಪಿಎಲ್ ಟೂರ್ನಿ ಮುಂದೂಡಲಾಗಿರುವುದರಿಂದ ಧೋನಿ ಕೆರಿಯರ್ ಕುರಿತು ಬಹುದೊಡ್ಡ ಪ್ರಶ್ನೆ ಮೂಡಿದೆ. ಐಪಿಎಲ್ ರದ್ದಾದರೆ ಧೋನಿ ಕಮ್‍ಬ್ಯಾಕ್ ಮಾಡೋ ಮಾರ್ಗಗಳು ಬಹುತೇಕ ಮುಚ್ಚಿ ಹೋಗಲಿದೆ ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *