ನವದೆಹಲಿ: ರಾಷ್ಟ್ರ ರಾಜಧಾನಿಯನ್ನು ಬೆಚ್ಚಿ ಬೀಳಿಸಿದ್ದ ಶ್ರದ್ಧಾ ವಾಕರ್ (Shraddha Walkar) ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಅಫ್ತಾಬ್ ಪೂನಾವಾಲಾನನ್ನು (Aftab Ameen Poonawala) ಇತ್ತೀಚೆಗಷ್ಟೇ ನಾರ್ಕೋ ಅನಾಲಿಸಿಸ್ ಪರೀಕ್ಷೆ ಮತ್ತು ಪಾಲಿಗ್ರಾಫ್ ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದಾದ ಬಳಿಕ ಆತನನ್ನು ತಿಹಾರ್ ಜೈಲಿನಲ್ಲಿ ಇಡಲಾಗಿದೆ. ಈ ವೇಳೆ ಶ್ರದ್ಧಾಳ ಹತ್ಯೆಯ ಬಗ್ಗೆ ಕೆಲವು ಆಘಾತಕಾರಿ ವಿಷಯವನ್ನು ಪೊಲೀಸ್ ಮೂಲಗಳು ತಿಳಿಸಿದೆ.

ಮೇ 17 ರಂದು ಸಂಜೆ ಶ್ರದ್ಧಾ ಡೇಟಿಂಗ್ ಅಪ್ಲಿಕೇಶನ್ ಬಬಲ್‍ನಲ್ಲಿ ಸಿಕ್ಕ ವ್ಯಕ್ತಿಯೊಂದಿಗೆ ಡೇಟಿಂಗ್‍ಗೆ ಹೋಗಿದ್ದಳು. ಅದಾದ ಬಳಿಕ ಮೇ 18ರಂದು ತಡರಾತ್ರಿ ಮಹ್ರಾಲಿಯಲ್ಲಿರುವ ಫ್ಲಾಟ್‍ಗೆ ಮರಳಿದ್ದಳು. ಅದಾದ ಬಳಿಕ ನನ್ನನ್ನು ಬಿಟ್ಟು ಹೋಗುವುದಾಗಿ ಬೆದರಿಕೆ ಹಾಕಿದ್ದಳು. ಅಷ್ಟೇ ಅಲ್ಲದೇ ಆಕೆ ತಾನು ಇನ್ನೊಬ್ಬ ವ್ಯಕ್ತಿಯೊಂದಿಗೆ ಡೇಟಿಂಗ್‍ಗೆ ಹೋಗುತ್ತಿರುವುದರ ಬಗ್ಗೆ ತಿಳಿಸಿದ್ದಳು. ಇದರಿಂದ ಕೋಪಗೊಂಡು ನಾನು ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಅದಾದ ಬಳಿಕ ಆಕೆಯ ದೇಹವನ್ನು ಕತ್ತರಿಸಿದ್ದೇನೆ ಎಂದಿದ್ದಾನೆ.

ಅದಾದ ಬಳಿಕ ಅಫ್ತಾಬ್‍ನನ್ನು ವಿಚಾರಣೆ ನಡೆಸುವಾಗ ದೆಹಲಿ ಪೊಲೀಸರು ಮತ್ತು ತನಿಖಾ ಸಂಸ್ಥೆಗಳಿಗೆ ಅಫ್ತಾಬ್ ಕೊಲೆಯ ಆಯುಧ ಮತ್ತು ಶ್ರದ್ಧಾಳ ದೇಹದ ಭಾಗಗಳನ್ನು ಪತ್ತೆ ಮಾಡುವಂತೆ ಸವಾಲು ಹಾಕಿದ್ದ ಎಂಬ ವಿಷಯ ಇದೀಗ ಮೂಲಗಳಿಂದ ತಿಳಿದು ಬಂದಿದೆ.

ಪೊಲೀಸರು (Police) ಅಫ್ತಾಬ್‍ನನ್ನು ವಿಚಾರಣೆ ನಡೆಸಿದ್ದ ವೇಳೆ, ಆತ ಶ್ರದ್ಧಾಳನ್ನು ಕೊಂದಿರುವ ಬಗ್ಗೆ ಒಪ್ಪಿಕೊಂಡಿದ್ದ. ಅಷ್ಟೇ ಅಲ್ಲದೇ ಶ್ರದ್ಧಾಳ ದೇಹದ ಭಾಗಗಳು ಹಾಗೂ ಕೊಲೆ ಮಾಡಲು ಬಳಸಿದ್ದ ಆಯುಧವನ್ನು ಹುಡುಕಲು ನಾನು ನಿಮಗೆ ಚಾಲೆಂಜ್ ಮಾಡುತ್ತೇನೆ ಎಂದು ಪೊಲೀಸರಿಗೆ ತಿಳಿಸಿದ್ದ. ಅಷ್ಟೇ ಅಲ್ಲದೇ ಅಫ್ತಾಬ್ ಕೊಲೆಯ ಆಯುಧವನ್ನು ತನ್ನ ಗುರುಗ್ರಾಮ್ ಕಚೇರಿಯ ಬಳಿಯ ಪೊದೆಗೆ ಎಸೆದಿದ್ದಾಗಿಯೂ ತಿಳಿಸಿದ್ದ ಎಂಬ ವಿಷಯಗಳು ಇದೀಗ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಭೀಕರ ಅಪಘಾತ- ಸಿಪಿಐ, ಪತ್ನಿ ಸಾವು

ಶ್ರದ್ಧಾಳನ್ನು ಕೊಂದ ನಂತರ ಅಫ್ತಾಬ್ ಬೇರೊಂದು ಹುಡುಗಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದ. ಅವನ ಹೊಸ ಗೆಳತಿ (Girl friend) ಗುರುಗ್ರಾಮದವಳಾಗಿದ್ದು, ವೈದ್ಯಳಾಗಿದ್ದಳು. ಆಕೆಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾಗ ಕೊಲೆಯ ಬಗ್ಗೆ ಆಕೆ ಆಘಾತವನ್ನು ವ್ಯಕ್ತಪಡಿಸಿದ್ದಳು. ಇದನ್ನೂ ಓದಿ: ಹಾವಿನಿಂದ ಹೆದ್ದಾರಿಯಲ್ಲಿ ಸರಣಿ ಅಪಘಾತ – ಸಂಚಾರಿ ಪೊಲೀಸರ ವಿರುದ್ದ ಆಕ್ರೋಶ

Leave a Reply