ರೈಲ್ವೆ ತತ್ಕಾಲ್ ಟಿಕೆಟ್ ಬುಕ್ಕಿಂಗ್‌ಗೆ ಆಧಾರ್‌ ಕಡ್ಡಾಯ – ಜುಲೈ 1ರಿಂದ ಹೊಸ ನಿಯಮ ಜಾರಿ

ನವದೆಹಲಿ: ತತ್ಕಾಲ್ ಟಿಕೆಟ್ (Tatkal Ticket) ಬುಕ್ಕಿಂಗ್‌ನಲ್ಲಾಗುತ್ತಿರುವ ದುರ್ಬಳಕೆ ತಡೆಯಲು ಭಾರತೀಯ ರೈಲ್ವೆ ಇಲಾಖೆ (Indian Railways) ಹೊಸ ನಿಯಮ ತರುತ್ತಿದ್ದು, ಇದೇ ಜುಲೈ 1ರಿಂದ ಜಾರಿಯಾಗಲಿದೆ.

ಈ ಕುರಿತು ರೈಲ್ವೆ ಇಲಾಖೆ ಹೊರಡಿಸಿದ ಸೂತ್ತೋಲೆ ಪ್ರಕಾರ, ತತ್ಕಾಲ್ ಟಿಕೆಟ್ ಬುಕ್ಕಿಂಗ್ ಏಜೆಂಟ್‌ಗಳು ಮಾಡುವ ದುರ್ಬಳಕೆ ತಡೆಯಲು ಹಾಗೂ ಜನರು ತತ್ಕಾಲ್ ಟಿಕೆಟ್‌ನ ಲಾಭವನ್ನು ಸರಿಯಾದ ರೀತಿಯಲ್ಲಿ ಪಡೆದುಕೊಳ್ಳುವ ಸಲುವಾಗಿ ಈ ಹೊಸ ನಿಯಮಗಳನ್ನು ತರಲಾಗಿದೆ ಎಂದು ತಿಳಿಸಿದೆ.ಇದನ್ನೂ ಓದಿ: ಏರ್‌ ಇಂಡಿಯಾ ವಿಮಾನ ಪತನ – ಪೈಲಟ್‌ಗೆ ಇತ್ತು 8,200 ಗಂಟೆಗಳ ಹಾರಾಟದ ಅನುಭವ

ಜುಲೈ 1ರಿಂದ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಮಾಡಲು ಆಧಾರ್ ಕಾರ್ಡ್ ಕಡ್ಡಾಯ ಹಾಗೂ ಜುಲೈ 15ರಿಂದ ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಓಟಿಪಿ ಕಡ್ಡಾಯವಾಗಿರಲಿದೆ. ತತ್ಕಾಲ್ ಟಿಕೆಟ್ ಬುಕ್ ಮಾಡಲು ಐಆರ್‌ಸಿಟಿಸಿ ವೆಬ್‌ಸೈಟ್ ಮತ್ತು ಆಪ್‌ಗಳಲ್ಲಿ ಮಾತ್ರ ಅವಕಾಶವಿರಲಿದೆ. ಈ ನಿಯಮಗಳು ಆನ್‌ಲೈನ್ ಹಾಗೂ ಆಫ್‌ಲೈನ್ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಎರಡಕ್ಕೂ ಅನ್ವಯಿಸಲಿದೆ. ರೈಲು ಹೊರಡುವ 24 ಗಂಟೆಗಳ ಮುನ್ನವೇ ಫೈನಲ್ ಬರ್ತ್ ಚಾರ್ಟ್ ಅನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಹೊಸ ನಿಯಮಗಳೇನು?
– ತತ್ಕಾಲ್ ಟಿಕೆಟ್ ಬುಕ್ಕಿಂಗ್‌ಗೆ ಆಧಾರ್ ದೃಢೀಕರಣ ಅಗತ್ಯ.
– ಕೇವಲ ಐಆರ್‌ಸಿಟಿಸಿ ವೆಬ್‌ಸೈಟ್ ಮತ್ತು ಆಪ್‌ಗಳಲ್ಲಿ ಮಾತ್ರ ತತ್ಕಾಲ್ ಟಿಕೆಟ್ ಬುಕ್ ಮಾಡಲು ಅವಕಾಶ
– ತತ್ಕಾಲ್ ಟಿಕೆಟ್ ಬುಕ್ಕಿಂಗ್‌ನಲ್ಲಾಗುತ್ತಿದ್ದ ದುರ್ಬಳಕೆ ತಡೆಯಲು ಹೊಸ ನಿಯಮ ಜಾರಿ
– ರೈಲು ಹೊರಡುವ 24 ಗಂಟೆಗಳ ಮುನ್ನವೇ ಫೈನಲ್ ಬರ್ತ್ ಚಾರ್ಟ್ ಅನ್ನು ಬಿಡುಗಡೆ ಮಾಡಲು ನಿರ್ಧಾರ.ಇದನ್ನೂ ಓದಿ: ಅಹಮದಾಬಾದ್‌ನಲ್ಲಿ ವಿಮಾನ ದುರಂತ – ನಿಖಿಲ್ ಕುಮಾರಸ್ವಾಮಿ ಸಂತಾಪ