ಸ್ನೇಹಿತನ ಜೊತೆ ಫೋಟೋಶೂಟ್‌ಗೆ ತೆರಳಿದ್ದ ಯುವಕ ನೀರಿನಲ್ಲಿ ಮುಳುಗಿ ಸಾವು!

ಹಾಸನ: ಫೋಟೋಶೂಟ್ (Photo Shoot) ಮಾಡುವಾಗ ಯುವಕನೋರ್ವ ಕಾಲು ಜಾರಿ ಕಟ್ಟೆಗೆ ಬಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಹಾಸನ (Hassan) ತಾಲ್ಲೂಕಿನ, ಹಾಲುವಾಗಿಲು ಗ್ರಾಮದಲ್ಲಿ ನಡೆದಿದೆ.

ನಾಗೇಂದ್ರ (19) ಸಾವನ್ನಪ್ಪಿದ ಯುವಕ. ಖಾಸಗಿ ಚಿನ್ನಾಭರಣ ಮಳಿಗೆಯಲ್ಲಿ ಪ್ರಮೋಟರ್ ಆಗಿ ಕೆಲಸ ಮಾಡುತ್ತಿದ್ದ ನಾಗೇಂದ್ರ ಹಾಗೂ ಮಂಜುನಾಥ್ ನಿನ್ನೆ ಕೆಲಸ ಮುಗಿಸಿ ಹಾಲುವಾಗಿಲು ಬಳಿ ಹರಿಯುವ ನೀರು ನೋಡಲು ತೆರಳಿದ್ದರು. ಇದನ್ನೂ ಓದಿ: ಜಮೀನು ವಿವಾದದಲ್ಲಿ 2 ಕುಟುಂಬಗಳ ನಡುವೆ ಗಲಾಟೆ, ಕೊಲೆ ಬೆದರಿಕೆ – 8 ಮಂದಿ ವಿರುದ್ಧ ಎಫ್‌ಐಆರ್‌

ನಾಗೇಂದ್ರ ಹರಿಯುವ ನೀರಿನಲ್ಲಿ ನಿಂತು ಫೋಟೋ ತೆಗೆಸಿಕೊಳ್ಳುವಾಗ ಕಾಲು ಜಾರಿ ಕಟ್ಟೆಗೆ ಬಿದ್ದಿದ್ದಾನೆ. ಕೂಡಲೇ ಸ್ನೇಹಿತನ ರಕ್ಷಣೆಗೆ ಮಂಜುನಾಥ್ ಮುಂದಾದರು ಸಾಧ್ಯವಾಗಿಲ್ಲ‌. ಅದೃಷ್ಟವಶಾತ್ ಮಂಜುನಾಥ್ ಅಪಾಯದಿಂದ ಪಾರಾಗಿದ್ದಾನೆ. ಇದನ್ನೂ ಓದಿ: `ಮಹಾ’ ಡಿಸಿಎಂ ʻದೇಶದ್ರೋಹಿʼ ಎಂದ ಕಾಮೆಡಿಯನ್ – ಕುನಾಲ್ ಕಮ್ರಾ ವಿರುದ್ಧ ಎಫ್‌ಐಆರ್‌

ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಪೊಲೀಸರು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿ ರಾತ್ರಿ ಆಗಿರುವುದರಿಂದ ವಾಪಾಸ್ ಆಗಿದ್ದರು. ಇಂದು ಬೆಳಿಗ್ಗೆಯಿಂದ ನಾಗೇಂದ್ರ ಮೃತದೇಹಕ್ಕಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ‌. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಹಾಸನ ಗ್ರಾಮಾಂತರ ಪೊಲೀಸ್ ಠಾಣೆ (Hassan Rural Police) ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಕಚೇರಿಯಲ್ಲೇ ಕುಳಿತು ಆನೆಗಳನ್ನು ಕಾಡಿಗಟ್ಟಲು ಪ್ಲ್ಯಾನ್‌ – `ಡಿವೈಸ್’ ಬಳಕೆಗೆ ಮುಂದಾದ ಅರಣ್ಯ ಇಲಾಖೆ!