ದೇಶ ಕಾಯೋ ಸೈನಿಕರ ಭೇಟಿಗಾಗಿ ಯುವಕನ ಏಕಾಂಗಿ ಪ್ರವಾಸ

ದಾವಣಗೆರೆ: ಹರಪ್ಪನಹಳ್ಳಿ ತಾಲೂಕಿನ ಯುವಕನೊಬ್ಬ ದೇಶ ಕಾಯೋ ಸೈನಿಕರನ್ನ ಭೇಟಿಯಾಗಬೇಕೆಂದು ಸಿಯಾಚಿನ್ ವರೆಗೂ ಏಕಾಂಗಿ ಪ್ರವಾಸ ಕೈಗೊಂಡಿದ್ದಾರೆ.

ಬೈಕ್ ಗೆ ಭಾರತದ ಧ್ವಜ ಕಟ್ಟಿಕೊಂಡು ಪ್ರವಾಸಕ್ಕೆ ಹೊರಟಿರೋ ಯುವಕನ ಹೆಸರು ರಾಹುಲ್. ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲೂಕಿನ ಎಂ.ಟೆಕ್ ಪದವೀಧರರಾಗಿದ್ದಾರೆ. ದೇಶ ಕಾಯೋ ಸೈನಿಕರಿಗೆ ನಿಮ್ಮೊಂದಿಗೆ ನಾವು ಇದ್ದೇವೆ ಎಂಬ ನೈತಿಕ ಸ್ಥೈರ್ಯ ತುಂಬುವುದಕ್ಕೆ ಈ ಯುವಕ ಓದಿನ ಬಳಿಕ ದೇಶ ಸುತ್ತೋಕೆ ಶುರು ಮಾಡಿಕೊಂಡಿದ್ದಾರೆ.

ಹರಪನಹಳ್ಳಿಯ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರವಾಸ ಕೈಗೊಂಡ ಯುವಕ ಹುಬ್ಬಳ್ಳಿ, ಮುಂಬೈ, ಅಹಮದಾಬಾದ್, ರಾಜಸ್ಥಾನ, ಗುಜರಾತ್, ಅಮೃತಸರ, ದೆಹಲಿ ಮೂಲಕ ಸಿಯಾಚಿನ್ ತಲುಪಲಿದ್ದಾರೆ. 8,200 ಕಿಲೋಮಿಟರ್ ಪ್ರವಾಸವನ್ನು 35-40 ದಿನಗಳಲ್ಲಿ ಪೂರೈಸಲಿದ್ದು, ರಾಹುಲ್ ಸೈನಿಕ ಜಾಗೃತಿ ಮೂಡಿಸಿದ್ದಾರೆ.

ರಾಹುಲ್ 2017 ರಲ್ಲೂ ಆಲ್ ಇಂಡಿಯಾ ಪ್ರವಾಸ ಕೈಗೊಂಡು 1962 ರ ಯುದ್ಧಭೂಮಿಗೆ ತೆರಳಿದ್ದರು. ಚೀನಾ-ಭಾರತದ ಗಡಿ ಪ್ರಥಮ ಬಾರಿಗೆ ತೆರಳಿ ಅಲ್ಲಿನ ಭಾರತೀಯ ಯೋಧರಿಗೆ ಧನ್ಯವಾದಗಳನ್ನ ಅರ್ಪಿಸಿದ್ದರು. ಅಲ್ಲಿಂದ ಮೇಘಾಲಯಕ್ಕೆ ತೆರಳಿ ಬಾಂಗ್ಲಾ ಗಡಿಗೆ ಭೇಟಿ ನೀಡಿ ಸೈನಿಕರ ಜೊತೆ ಒಂದು ದಿನ ಕಾಲ ಕಳೆದಿದ್ದರು.

Comments

Leave a Reply

Your email address will not be published. Required fields are marked *