ವರದಾ ನದಿಯಲ್ಲಿ ಈಜಲು ಹೋಗಿದ್ದ ಯುವಕ ಸಾವು!

ಹಾವೇರಿ: ಸಂಬಂಧಿಕರೊಬ್ಬರ ಕಾರ್ಯಕ್ರಮದ ನಿಮಿತ್ತ ದೇವಸ್ಥಾನಕ್ಕೆ ಬಂದಿದ್ದ ಯುವಕನೊಬ್ಬ ವರದಾ ನದಿಯಲ್ಲಿ ಈಜಲು ಹೋಗಿ, ಮೃತಪಟ್ಟ ಘಟನೆ ಹಾವೇರಿ ತಾಲೂಕಿನ ಕಿತ್ತೂರು ಗ್ರಾಮದ ಬಳಿ ನಡೆದಿದೆ.

ಹಾವೇರಿ ತಾಲೂಕಿನ ಯಲಗಚ್ಚ ಗ್ರಾಮದ ನಿವಾಸಿ ನಾಗರಾಜ ಮೃತ ಯುವಕ. ಇಂದು ಕಿತ್ತೂರು ಗ್ರಾಮದ ಬಳಿಯ ಸಂಗಮೇಶ್ವರ ದೇವಸ್ಥಾನದಲ್ಲಿ ನಾಗರಾಜ ಸಂಬಂಧಿಕರ ಕಾರ್ಯಕ್ರಮ ನಡೆದಿತ್ತು. ದೇವಸ್ಥಾನದ ಹಿಂಭಾಗದಲ್ಲಿ ವರದಾನದಿ ಹರಿಯುತ್ತಿದ್ದು, ನದಿಯ ನೀರು ತುಂಬಲು ಮೆಟ್ಟಿಲುಗಳನ್ನು ನಿರ್ಮಾಣ ಮಾಡಲಾಗಿದೆ.

ಎಲ್ಲರೂ ಕಾರ್ಯಕ್ರಮದಲ್ಲಿ ನಿರತರಾಗಿದ್ದರು. ಆದರೆ ನಾಗರಾಜ ಮಾತ್ರ ದೇವಸ್ಥಾನದ ಹಿಂದೆ ಇದ್ದ ಮಟ್ಟಿಲು ಇಳಿದು ವರದಾ ನದಿಗೆ ಹಾರಿದ್ದಾನೆ. ನದಿ ರಭಸವಾಗಿ ಹರಿಯುತ್ತಿದ್ದ ಪರಿಣಾಮ ನಾಗರಾಜ ಸುಳಿಗೆ ಸಿಲುಕಿ ಮೃತಪಟ್ಟಿದ್ದಾನೆ. ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕದಳ ಮತ್ತು ಪೊಲೀಸರು ಆಗಮಿಸಿ ಮೃತ ದೇಹಕ್ಕಾಗಿ ಶೋಧಕಾರ್ಯ ನಡೆಸಿದ್ದಾರೆ.

ಘಟನಾ ಸ್ಥಳದಲ್ಲಿದ್ದ ನಾಗರಾಜ ತಾಯಿ ಹಾಗೂ ಸಹೋದರಿ ಆಕ್ರಂದ ಮುಗಿಲು ಮುಟ್ಟಿದೆ. ಗುತ್ತಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *