ಅನಾರೋಗ್ಯದಿಂದ ಗಂಡ ಸಾವು – ಬಾವಿಗೆ ಹಾರಿ ಪತ್ನಿ ಆತ್ಮಹತ್ಯೆ

ಉಡುಪಿ: ಪತಿಯ ಅಗಲುವಿಕೆಯಿಂದ ಮನನೊಂದು ಪತ್ನಿ ಆತ್ಮಹತ್ಯೆ ಮಾಡಿರುವ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ನಡೆದಿದೆ.

ಇಲ್ಲಿನ ಮೀಯಾರು ಗ್ರಾಮದ ಅಂಗನವಾಡಿ ಕಾರ್ಯಕರ್ತೆಯಾಗಿರುವ ಸೌಮ್ಯ ಬಾವಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ. ಈಕೆಯ ಪತಿ ಸಂತೋಷ್ ಪೂಜಾರಿ ತಿಂಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿ ಮೃತಪಟ್ಟಿದ್ದರು.

ಪತಿಯ ಸಾವಿನಿಂದ ಮನನೊಂದು, ಆರ್ಥಿಕ ಸಂಕಷ್ಟದಿಂದ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಂದೆ ಮತ್ತು ತಾಯಿಯ ಸಾವಿನಿಂದ 16 ಮತ್ತು 12 ವರ್ಷದ ಇಬ್ಬರು ಪುತ್ರಿಯರು ಅನಾಥರಾಗಿದ್ದಾರೆ.