ದೂರು ಕೊಟ್ಟ ಮಹಿಳೆಗೆ ಕೋರ್ಟ್ ಆವರಣದಲ್ಲೇ ಚಾಕು ಇರಿದ ದುಷ್ಕರ್ಮಿ

ಬೆಂಗಳೂರು: ದೂರು ಕೊಟ್ಟ ಮಹಿಳೆಗೆ ನ್ಯಾಯಾಲಯದ ಆವರಣದಲ್ಲೇ ಚಾಕು ಇರಿದಿರುವುದು ನಗರದ ಮ್ಯಾಜಿಸ್ಟ್ರೇಟ್ ಕೋರ್ಟ್‍ನಲ್ಲಿ  (Court)ನಡೆದಿದೆ.

ಚಾಕು ಇರಿತಕ್ಕೊಳಗಾದ ಮಹಿಳೆಯನ್ನು ವಿಮಲಾ ಎಂದು ಗುರುತಿಸಲಾಗಿದೆ. ಚಾಕು ಇರಿದ ಆರೋಪಿಯನ್ನು ಜಯರಾಮ್ ರೆಡ್ಡಿ ಎಂದು ಗುರುತಿಸಲಾಗಿದೆ. ಆರೋಪಿ ವಿರುದ್ಧ ಮಹಿಳೆ ಶೇಷಾದ್ರಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇಂದು ವಿಚಾರಣೆಗೆ ನ್ಯಾಯಾಲಯಕ್ಕೆ ಬಂದಿದ್ದ ವೇಳೆ ಮಹಿಳೆಗೆ ಆರೋಪಿ ಕೋರ್ಟ್ ಹಾಲ್ 1 ರಲ್ಲಿ ಚಾಕು ಇರಿದಿದ್ದಾನೆ.

ಚಾಕು ಇರಿತಕ್ಕೊಳಗಾದ ಮಹಿಳೆಯ ಸ್ಥಿತಿ ಗಂಭೀರವಾಗಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.