ಕುಡಿದ ಮತ್ತಿನಲ್ಲಿ ಹಾವಿನೊಂದಿಗೆ ಮಹಿಳೆ ಹುಚ್ಚಾಟ..!

ತುಮಕೂರು: ಚಿಂದಿ ಆಯುವ ಮಹಿಳೆಯೊಬ್ಬಳು ಕುಡಿದ ಮತ್ತಿನಲ್ಲಿ ಹಾವಿನೊಂದಿಗೆ ಹುಚ್ಚಾಟವಾಡಿದ ಘಟನೆ ಜಿಲ್ಲೆಯ ಕೊರಟಗೆರೆ ತಾಲೂಕಿನ ಜೆಟ್ಟಿ ಅಗ್ರಹಾರದಲ್ಲಿ ನಡೆದಿದೆ.

ಪಾಡುರಂಗಪ್ಪ ಎಂಬವರ ಮನೆಗೆ ಕೆರೆಹಾವು ನುಗ್ಗಿತ್ತು. ಈ ವೇಳೆ ಅಲ್ಲಿಗೆ ಮದ್ಯದ ಮತ್ತಿನಲ್ಲಿ ಬಂದ ಸುಶೀಲಮ್ಮ ಹಾವು ಹಿಡಿದಿದ್ದಾರೆ. ಅಲ್ಲದೇ ಅದನ್ನು ಕೊರಳಿಗೆ ಹಾಕಿಕೊಂಡಿದ್ದಾರೆ. ಮಹಿಳೆಯ ಹುಚ್ಚಾಟದಿಂದ ಭಯಗೊಂಡ ಸ್ಥಳೀಯರು ಹಾವನನು ಬಿಟ್ಟು ಬಿಡುವಂತೆ ಕೇಳಿಕೊಂಡಿದ್ದಾರೆ. ಆದ್ರೆ ನೆರೆದವರ ಮಾತನ್ನು ಲೆಕ್ಕಿಸದೇ ಸುಶೀಲಮ್ಮ ಹಾವನ್ನು ಹಿಡಿದುಕೊಂಡು ಆಟವಾಡುತ್ತಿದ್ದರು.

ಹುಚ್ಚಾಟ ಮುಂದುವರಿಸಿದ ಮಹಿಳೆಯಿಂದ ಸಿಟ್ಟುಗೊಂಡ ಸ್ಥಳೀಯರೊಬ್ಬರು ಹಾವನ್ನು ಹಿಡಿದುಕೊಂಡು ಏನು ಮಾಡುತ್ತೀಯಾ ಎಂದು ಪ್ರಶ್ನಿಸಿದ್ದಾರೆ. ಆಗ ಮಹಿಳೆ ನಾನು ಹಾವನ್ನು ತಿನ್ನಲ್ಲ. ಎಲ್ಲಾದರೂ ಬಿಟ್ಟುಬಿಡಿ ಅಂದ್ರೆ ಬಿಟ್ಟುಬಿಡುತ್ತೇನೆ. ಸುಟ್ಟುಹಾಕು ಅಂದ್ರೆ ಸುಟ್ಟು ಹಾಕುತ್ತೇನೆ. ಕೊಂದು ಬಿಡು ಅಂದ್ರೆ ಕೊಲ್ಲುತ್ತೇನೆ. ಮನೆಯಲ್ಲಿ ಹಾವು ಇದೆ ಅಂತಾ ಕರೆದರೆ ಮಾತ್ರ ಬಂದು ಹಿಡಿಯುತ್ತೇವೆ. ಬಯಲಲ್ಲಿ ಇರುವ ಹಾವುಗಳನ್ನು ಹಿಡಿಯಲ್ಲ ಎಂದು ಕುಡಿದ ಮತ್ತಿನಲ್ಲಿ ಹೇಳಿದ್ದಾಳೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Comments

Leave a Reply

Your email address will not be published. Required fields are marked *