ನಾಗರಹೊಳೆ | ಬ್ಯಾರಿಕೇಡ್‌ಗೆ ಸಿಲುಕಿದ್ದ ಕಾಡಾನೆ ರಕ್ಷಣೆ!

– ಬಂಡೀಪುರ ಸಫಾರಿಯಲ್ಲಿ `ಭೀಮ’ನ ದರ್ಶನ!

ಮೈಸೂರು: ನಾಗರಹೊಳೆ ಅರಣ್ಯದ (Nagarahole Forest) ಅಂಚಿನ ವೀರನಹೊಸಹಳ್ಳಿ ವ್ಯಾಪ್ತಿಯ ಅರಸುಹೊಸಕಟ್ಟೆಯ ಕೆರೆಯಲ್ಲಿ ಸಿಮೆಂಟ್ ಕಂಬದ ಬ್ಯಾರಿಕೇಡ್ ದಾಟಲಾರದೆ ಆನೆ ಸಿಲುಕಿತ್ತು.

ಶನಿವಾರ ರಾತ್ರಿ ಕಾಡಿನಿಂದ ಹೊರಬಂದಿದ್ದ ಕಾಡಾನೆ, ಇಂದು ಮುಂಜಾನೆ ವಾಪಸ್ ಕಾಡಿಗೆ ಹೋಗುವಾಗ ಕಂಬಕ್ಕೆ ಸಿಲುಕಿ ಪರದಾಡಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ಸುಮಾರು 3 ಗಂಟೆಗಳಿಂದ ನರಳುತ್ತಿದ್ದ ಆನೆಯನ್ನು ಜೆಸಿಬಿ ಮೂಲಕ ರಕ್ಷಿಸಿದ್ದಾರೆ.

ಮತ್ತೊಂದು ಕಡೆ, ಸಕಲೇಶಪುರದ ವಳಲಹಳ್ಳಿ ಗ್ರಾಮದಲ್ಲಿ ಹೆಣ್ಣಾನೆ, ಮರಿಗಳು ಹೆಚ್ಚಿರುವ ಕಾಡಾನೆಗಳು ಬೀಡು ಬಿಟ್ಟಿದ್ದು, ಕಾಡಾನೆಗಳನ್ನು ಅರಣ್ಯಕ್ಕೆ ಹಿಮ್ಮೆಟ್ಟಿಸಲು ಅರಣ್ಯ ಇಲಾಖೆ ಹರಸಾಹಸ ಮಾಡಿದೆ.

ಅತ್ತ, ಬಂಡೀಪುರದಲ್ಲಿ ಸಫಾರಿಗೆ ಹೋದವರಿಗೆ `ಬಂಡೀಪುರದ ಭೀಮಾ’ ಅಂತ ಪ್ರಸಿದ್ಧಿ ಪಡೆದಿರುವ ದೈತ್ಯಗಾತ್ರದ ಗಂಡು ಹುಲಿ ಪ್ರತ್ಯಕ್ಷವಾಗಿದೆ.