ವಿಜಯಪುರ: ಆಮಂತ್ರಣ ಪತ್ರಿಕೆಯಲ್ಲಿ ತಮ್ಮ ಹೆಸರು ಪ್ರಸ್ತಾಪಿಸಿಲ್ಲ ಅಂತಾ ಕನ್ನಡ ಸಾಹಿತ್ಯ ಪದಾಧಿಕಾರಿಯೊಬ್ಬರು ಅಧ್ಯಕ್ಷ ಹಾಗೂ ಜಿಲ್ಲಾ ಪದಾಧೀಕಾರಿಯನ್ನು ತರಾಟೆಗೆ ತಗೆದುಕೊಂಡ ಘಟನೆ ನಗರದಲ್ಲಿ ನಡೆದಿದೆ.
ಇಂದು ಜಿಲ್ಲಾ ಸಾಹಿತ್ಯ ಪರಿಷತ್‍ನಿಂದ ಇದೇ 22ರಂದು ವಿಜಯಪುರ ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ತಾಲೂಕು ಕಸಾಪ ಪ್ರಧಾನ ಕಾರ್ಯದರ್ಶಿ ಸುವರ್ಣಾ ಅವರು, ಆಮಂತ್ರಣ ಪತ್ರಿಕೆಯಲ್ಲಿ ಮತ್ತು ಭಾಷಣದಲ್ಲಿ ತಮ್ಮ ಹೆಸರು ಸೇರಿಸಿಲ್ಲ ಎಂದು ಫುಲ್ ಗರಂ ಆದರು.
ಅಷ್ಟೇ ಅಲ್ಲದೆ ಕಾರ್ಯಕ್ರಮದಲ್ಲಿ ತಮ್ಮ ಹೆಸರು ಪ್ರಸ್ತಾಪಿಸಲಿಲ್ಲ ಅಂತಾ ಜಿಲ್ಲಾ ಕಸಾಪ ಪದಾಧಿಕಾರಿ ಲಕ್ಷ್ಮಿ ದೇಸಾಯಿ ವಿರುದ್ಧ ವಾಗ್ದಾಳಿ ನಡೆಸಿದರು. ಕಾರ್ಯಕ್ರಮವನ್ನು ಲೆಕ್ಕಿಸದೆ ಅಶ್ಲೀಲ ಶಬ್ದಗಳಿಂದ ಇಬ್ಬರು ಬಾಯಿಗೆ ಬಂದಂತೆ ನಿಂದಿಸಿಕೊಂಡು ಜಗಳವಾಡಿದರು.
ಕಾರ್ಯಕ್ರಮದಿಂದ ಹೊರಬಂದ ಸುವರ್ಣ ಅವರು, ಯಾರು ಹಣ ನೀಡತ್ತಾರೆ ಅವರ ಹೆಸರನ್ನು ಕಸಾಪ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಂಡಿಗೇರಿ ಆಮಂತ್ರಣ ಪತ್ರಿಕೆಯಲ್ಲಿ ಹಾಕುತ್ತಾರೆ. ನಿಷ್ಠಾವಂತರಿಗೆ ಬೆಲೆ ಕೊಡುವುದಿಲ್ಲ. ಕಸಾಪದಲ್ಲಿ ಹಣ ನೀಡದವರಿಗೆ ಕಿಮ್ಮತ್ತು ಇಲ್ಲ. ನಾನು ಒಬ್ಬ ಶಿಕ್ಷಕಿ ಎಲ್ಲಿಂದ ಹಣ ತಂದು ಕೊಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
https://youtu.be/vfmkw-7EI20

Leave a Reply