ಪ್ಯಾಂಟ್‌ ಜಿಪ್‌ನಲ್ಲಿ ಚಿನ್ನ ಕಳ್ಳಸಾಗಣೆ – ಬೆಂಗ್ಳೂರು ಏರ್‌ಪೋರ್ಟ್‌ನಲ್ಲಿ ತಗ್ಲಾಕ್ಕೊಂಡ ಪ್ರಯಾಣಿಕ

ಬೆಂಗಳೂರು: ಪ್ಯಾಂಟ್‌ ಜಿಪ್‌ ಲೈನ್‌ನಲ್ಲಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಪ್ರಯಾಣಿಕ ಬೆಂಗಳೂರು ಏರ್‌ಪೋರ್ಟ್‌ನಲ್ಲಿ (Bengaluru Airport) ಸಿಕ್ಕಿಬಿದ್ದಿದ್ದಾನೆ. ಪ್ರಯಾಣಿಕನನ್ನು ಏರ್‌ ಕಸ್ಟಮ್ಸ್‌ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಪ್ರಯಾಣಿಕ ಶಾರ್ಜಾದಿಂದ ಬಂದಿದ್ದ. ಪೇಸ್ಟ್‌ ರೂಪದಲ್ಲಿ ಚಿನ್ನ ಕಳ್ಳಸಾಗಣೆ (Gold Smuggling) ಮಾಡುತ್ತಿದ್ದ. ಈತನನ್ನು ಏರ್‌ಪೋರ್ಟ್‌ನಲ್ಲಿ ಏರ್‌ ಕಸ್ಟಮ್ಸ್‌ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಪ್ಯಾಂಟ್‌ ಜಿಪ್‌ನಲ್ಲಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದುದು ಪತ್ತೆಯಾಗಿದೆ. ಇದನ್ನೂ ಓದಿ: ಮುರುಘಾಶ್ರೀಗೆ ಜೈಲಾ? ಬೇಲಾ? ಇಂದು ಹೈಕೋರ್ಟ್ ನಿರ್ಧಾರ

ಸುಮಾರು 18.57 ಲಕ್ಷ ರೂ. ಮೌಲ್ಯದ 284 ಗ್ರಾಂ ಚಿನ್ನವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಪ್ರಯಾಣಿಕನನ್ನ ವಶಕ್ಕೆ ಪಡೆದು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ಚಿನ್ನದ ಜೊತೆ ಪ್ರಯಾಣಿಕ ಸಿಗರೇಟ್ ಸ್ಟಿಕ್ ಹಾಗೂ ಸೌಂದರ್ಯವರ್ಧಕ ಪಾಕೇಟ್ ಸಾಗಾಟ ಮಾಡುತ್ತಿದ್ದ. 3,300 ಸಿಗರೇಟ್ ಸ್ಟಿಕ್ ಮತ್ತು 324 ಸೌಂದರ್ಯವರ್ಧಕ ಪಾಕೇಟ್‌ಗಳನ್ನೂ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮುಂದಿನ 3 ದಿನ ಭಾರೀ ಮಳೆ