ಚಿಕ್ಕಬಳ್ಳಾಪುರ: ಬಸ್ಸಿನ ಕಿಟಕಿ ಮೂಲಕ ಸೀಟಿಗೆ ಬ್ಯಾಗ್ ಹಾಕಿ, ಸೀಟ್ ಕಾಯ್ದಿರಿಸಲು ಯತ್ನಿಸಿದ್ದ ವಿದ್ಯಾರ್ಥಿಯೊಬ್ಬ ಆಯತಪ್ಪಿ ಕೆಎಸ್‌ಆರ್‌ಟಿಸಿ ಬಸ್ ಅಡಿ ಸಿಲುಕಿ ಮೃತಪಟ್ಟ ಘಟನೆ ನಗರದ ಬಸ್ ನಿಲ್ದಾಣದಲ್ಲಿ ನಡೆದಿದೆ.
ಗೌರಿಬಿದನೂರು ತಾಲೂಕಿನ ಬಿ.ಬೊಮ್ಮಸಂದ್ರ ನಿವಾಸಿ ಚರಣ್ ಕುಮಾರ್ (18) ಮೃತ ವಿದ್ಯಾರ್ಥಿ. ಚರಣ್ ಕುಮಾರ್ ಚಿಕ್ಕಬಳ್ಳಾಪುರ ಬಿಜೆಎಎಸ್ ಪಾಲಿಟೆಕ್ನಿಕ್ ಕಾಲೇಜಿನ ವ್ಯಾಸಾಂಗ ಮಾಡುತ್ತಿದ್ದ. ಇಂದು ಕಾಲೇಜಿನಿಂದ ಬಂದ ಆತನು ತನ್ನ ಗ್ರಾಮಕ್ಕೆ ಹೋಗುವ ಬಸ್ಸಿಗಾಗಿ ಕಾಯುತ್ತಿದ್ದ.
ನಿಲ್ದಾಣಕ್ಕೆ ಕೆಎ 40 ಎಫ್ 712 ಕೆಎಸ್‌ಆರ್‌ಟಿಸಿ ಬಸ್ ಬರುತ್ತಿದ್ದಂತೆ, ಸೀಟ್ ಕಾಯ್ದಿರಿಸಲು ಕಿಟಕಿಯ ಮೂಲಕ ಬ್ಯಾಗ್ ಹಾಕಲು ಯತ್ನಿಸಿದ್ದಾನೆ. ಆಗ ಆಯತಪ್ಪಿ ಬಿದ್ದ ಚರಣ್ ಕುಮಾರ್ ಕತ್ತಿನ ಮೇಲೆ ಬಸ್ ಹರಿದುಹೋಗಿದೆ. ಪರಿಣಾಮ ಅತಿಯಾದ ರಕ್ತಸ್ರಾವದಿಂದ ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಮೃತದೇಹವನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply