Bigg Boss- ಅಭಿಮಾನಿಗಳಿಗೆ ಆಘಾತ; ವರ್ತೂರು ಔಟ್

ಬಿಗ್ ಬಾಸ್ ಮನೆಯ ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಿದ್ದ ವರ್ತೂರು ಸಂತೋಷ್ (Varthur Santhosh) ಬಿಗ್ ಬಾಸ್ (Bigg Boss) ಮನೆಯಿಂದ ಹೊರ ಬಂದಿದ್ದಾರೆ. ಸಹಜವಾಗಿಯೇ ಅಭಿಮಾನಿಗಳಿಗೆ ಆಘಾತ ಆಗಿದೆ. ಫಿನಾಲೆವರೆಗೂ ದೊಡ್ಮನೆಯಲ್ಲಿ ಇರ್ತಾರೆ ಎಂದು ಹೇಳಲಾಗಿತ್ತು. ಹಾಗಾಗಿ ಸಹಜವಾಗಿಯೇ ಅಭಿಮಾನಿಗಳಿಗೆ ಆಘಾತ ಆಗಿದೆ.

ಬಿಗ್ ಬಾಸ್ ಮನೆಯಲ್ಲಿ ಸಂತು ಪಂತು ಎಂದೇ ಗುರುತಿಸಿಕೊಂಡಿದ್ದ, ಅಭಿಮಾನಿಗಳಿಗೆ ಮೆಚ್ಚಿನ ಆಟಗಾರ ಆಗಿದ್ದ ಸಂತು, ಈಗ ಮನೆಯಿಂದ ಔಟ್ ಆಗಿದ್ದಾರೆ. ಹಾಗಾಗಿ ಮನೆಯಲ್ಲಿ ನೂರಾರು ಪ್ರಶ್ನೆಗಳು ಮೂಡಿವೆ. ಅವರು ಎಲಿಮಿನೇಷನ್ ಆಗಿದ್ದಕ್ಕೆ ಅವರ ಅಭಿಮಾನಿಗಳು ಕಾರಣ ಕೇಳೋದು ತಪ್ಪಿಲ್ಲ ಅನಿಸುತ್ತಿದೆ. ಇದನ್ನೂ ಓದಿ: ‘ಬಿಗ್ ಬಾಸ್’ ಮೇಲೆ ಭಯಂಕರ ಆರೋಪ: ಸುದೀಪ್ ಕೂಡ ಪ್ರತಿಕ್ರಿಯೆ

ಬಿಗ್ ಬಾಸ್ ಕಾರಣದಿಂದಾಗಿಯೇ ವರ್ತೂರು, ಖಾಸಗಿ ಬದುಕನ್ನು ಹರಾಜಿಗೆ ಇಟ್ಟಿದ್ದರು. ಜೈಲಿಗೂ ಹೋಗಿ ಬಂದಿದ್ದರು. ಮನೆಯಲ್ಲಿ ಸಖತ್ ಮನರಂಜನೆ ನೀಡುತ್ತಿದ್ದರು. ಈ ಎಲ್ಲ ಕಾರಣದಿಂದಾಗಿ ಕೊನೆಯವರೆಗೂ ಮನೆಯಲ್ಲಿ ಉಳಿತಾರೆ ಎಂದು ಹೇಳಲಾಗಿತ್ತು. ಅದು ಸುಳ್ಳಾಗಿದೆ. ವರ್ತೂರು ಮನೆಯಿಂದ ಹೊರ ಬಂದಿದ್ದಾರೆ. ಸಹಜವಾಗಿ ಅಭಿಮಾನಿಗಳಿಗೆ ಬೇಸರವಾಗಿದೆ. ಇದನ್ನೂ ಓದಿ: ರಾಜವರ್ಧನ್ ನಟನೆಯ ‘ಗಜರಾಮ’ ಚಿತ್ರದ ಟೀಸರ್ ರಿಲೀಸ್

ಈ ಸಲ ಎಲಿಮಿನೇಷನ್ (Elimination) ಕುರಿತು ಟಫ್ ಕಾಂಪಿಟೇಷನ್ ಇತ್ತು. ಯಾರೆಲ್ಲ ಬರಬಹುದು ಎನ್ನುವ ಕುತೂಹಲ ಇತ್ತು. ಅದಕ್ಕೆ ತೆರೆ ಬಿದ್ದಿದೆ. ವರ್ತೂರು ಮನೆಯಿಂದ ಬರುವ ಮೂಲಕ ಕುತೂಹಲಕ್ಕೆ ತೆರೆ ಬಿದ್ದಿದೆ. ಎಲಿಮಿನೇಷನ್ ಕುರಿತು ಸಂತೋಷ್ ಏನ್ ಹೇಳ್ತಾರೆ ಅನ್ನುವ ಕುತೂಹಲ ಹೆಚ್ಚಾಗಿದೆ. ಇದನ್ನೂ ಓದಿ: ಬಿಡುಗಡೆಗೆ ಸಜ್ಜಾಗಿ ನಿಂತಿದೆ ವಿಶಿಷ್ಟ ಕಥಾ `ಸಾರಾಂಶ’