ದರ್ಶನ್‌ ವಿಶೇಷ ಆತಿಥ್ಯಕ್ಕೆ ಪ್ರಭಾವಿ ಸಚಿವರ ಆದೇಶ?

ಬೆಂಗಳೂರು: ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿ ದರ್ಶನ್‌ಗೆ (Darshan) ರಾಜಾತಿಥ್ಯ ನೀಡಿದ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ ಸಿಕ್ಕಿದೆ. ವಿಶೇಷ ಅತಿಥ್ಯ ಸಿಗಲು ಪ್ರಭಾವಿ ಸಚಿವರ‌ ಮೌಖಿಕ ಆದೇಶ ಕಾರಣ ಮೂಲಗಳಿಂದ ತಿಳಿದು ಬಂದಿದೆ.

ಪ್ರಭಾವಿ ಸಚಿವರೊಬ್ಬರು ದರ್ಶನ್‌ಗೆ ವಿಶೇಷ ಸೌಲಭ್ಯ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಜೈಲು ಸಿಬ್ಬಂದಿ ಸಹ ದರ್ಶನ್‌ ಖ್ಯಾತ ನಟನಾಗಿರುವ ಕಾರಣ ಜೈಲಿನ ನಿಯಮಗಳನ್ನು ಪಾಲಿಸಿರಲಿಲ್ಲ. ಇದನ್ನೂ ಓದಿ: ರಾಜಾತಿಥ್ಯ ಪ್ರಕರಣ; ದರ್ಶನ್ ಶಿಫ್ಟ್ ಆಗ್ತಿರೋ ಬಳ್ಳಾರಿ ಜೈಲು ಹೇಗಿದೆ ಗೊತ್ತಾ?

 

ಜೈಲಿನ ಒಳಗಡೆ ಚಯರ್‌ ನೀಡಬೇಕಾದರೂ ಅಧಿಕಾರಿಗಳ ಅನುಮತಿ ಬೇಕು. ಅನಾರೋಗ್ಯ ಇತ್ಯಾದಿ ಕಾರಣ ಸಂಬಂಧ ಜೈಲು ವೈದ್ಯರು ಸೂಚಿಸಿದರೆ ಮಾತ್ರ ಚಯರ್‌ ಮೇಲೆ ಕುಳಿತುಕೊಳ್ಳಲು ಅನುಮತಿ ನೀಡಲಾಗುತ್ತದೆ. ಆದರೆ ಪ್ರಭಾವಿ ಸಚಿವರ ಮೌಖಿಕ ಆದೇಶದಿಂದ ಅಧಿಕಾರಿಗಳು ದರ್ಶನ್‌ಗೆ ವಿಐಪಿ ಸೌಲಭ್ಯ ನೀಡಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: 2014ರ ನಂತರ ಮೊದಲ ಬಾರಿಗೆ ರಾಜ್ಯಸಭೆಯಲ್ಲಿ ಎನ್‌ಡಿಎಗೆ ಸ್ಪಷ್ಟ ಬಹುಮತ