ಯುವಕನನ್ನು ಪ್ರೀತಿಸಿ ಹಿಂದೂ ಧರ್ಮಕ್ಕೆ ಮತಾಂತರಗೊಂಡು ಮದುವೆಯಾದ ಮುಸ್ಲಿಂ ಯುವತಿ

ಲಕ್ನೋ: ಹಿಂದೂ ಯುವತಿಯರನ್ನು ಪ್ರೀತಿಸಿ ಇತರೆ ಧರ್ಮೀಯರು ಮತಾಂತರ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ ಕಡಿವಾಣ ಹಾಕಬೇಕು ಎನ್ನುವ ಉದ್ದೇಶದಿಂದ ಅನೇಕ ರಾಜ್ಯಗಳಲ್ಲಿ ಮತಾಂತರ ನಿಷೇಧ ಕಾಯ್ದೆಗಳನ್ನು ಜಾರಿಗೊಳಿಸಲಾಗಿದೆ. ಆದರೆ ಉತ್ತರ ಪ್ರದೇಶದಲ್ಲಿ ಇದಕ್ಕೆ ತದ್ವಿರುದ್ಧವಾದ ಪ್ರಕರಣವೊಂದು ವರದಿಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಮುಸ್ಲಿಂ ಯುವತಿಯೊಬ್ಬಳು ಹಿಂದೂ ಯುವಕನನ್ನು ಪ್ರೀತಿಸಿ ಬಳಿಕ ಹಿಂದೂ ಧರ್ಮಕ್ಕೆ ಮತಾಂತರಗೊಂಡು ಮದುವೆ ಆಗಿರುವ ಬಗ್ಗೆ ಉತ್ತರ ಪ್ರದೇಶದ ಅಜಂಗಢ ನಗರದಲ್ಲಿ ವರದಿಯಾಗಿದೆ. ಇದೀಗ ಈ ಜೋಡಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ರೇವಡಿ ಹಂಚಿ ಮತ ಗಳಿಸುವ ಸಂಸ್ಕೃತಿಯನ್ನು ತೊಡೆದುಹಾಕಬೇಕು: ಮೋದಿ

ಉತ್ತರ ಪ್ರದೇಶದ ಅಜಂಗಢದ ಅಟ್ರೌಲಿಯಾ ಪ್ರದೇಶದ ಖಾನ್‍ಪುರ್ ಫತೇಹ್ ಗ್ರಾಮದ ಹಿಂದೂ ಯುವಕ ಸೂರಜ್, ಹೈದರ್‍ಪುರ ಖಾಸ್ ಗ್ರಾಮದ ಮುಸ್ಲಿಂ ಯುವತಿ ಮೋಮಿನ್ ಖಾತೂನ್ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಈ ಪ್ರೀತಿಗೆ ಧರ್ಮ ಅಡ್ಡಿಯಾಗಿತ್ತು. ಇವರಿಬ್ಬರ ಪ್ರೀತಿಯನ್ನು ಮೊದಲು ಎರಡು ಕುಟುಂಬಸ್ಥರು ಒಪ್ಪಿರಲಿಲ್ಲ. ಆದರೂ ಇವರಿಬ್ಬರೂ ಮಾತ್ರ ತಮ್ಮ ಪ್ರೀತಿಯನ್ನು ಮುಂದುವರಿಸಿದ್ದರು.

ಆರಂಭದಲ್ಲಿ ಮನೆಯವರ ವಿರೋಧದ ನಡುವೆಯೂ ಈ ಜೋಡಿ ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳಲು ಮತ್ತು ಮನೆಯವರನ್ನು ಒಪ್ಪಿಸಲು ಪ್ರಯತ್ನಿಸಿ ಕೊನೆಗೆ ಮೋಮಿನ್ ಖಾತೂನ್ ಹಿಂದೂ ಧರ್ಮವನ್ನು ಸ್ವೀಕರಿಸಿ ಸೂರಜ್‍ನನ್ನು ವರಿಸಿದ್ದಾಳೆ. ಜುಲೈ 13 ರಂದು ಅಟ್ರೌಲಿಯಾ ಸಮ್ಮೋ ಮಾತಾ ದೇವಾಲಯದ ಸಂಕೀರ್ಣದಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆ ನಡೆದಿದೆ. ಹಿಂದೂ ಧರ್ಮವನ್ನು ಸ್ವೀಕರಿಸಿದ ಮೋಮಿನ್ ಖಾತೂನ್ ಹಿಂದೂ ಸಂಪ್ರದಾಯದಂತೆ ಸೂರಜ್ ಕೊರಳಿಗೆ ಹಾರ ಹಾಕಿ ಮದುವೆ ಆಗಿದ್ದಾಳೆ. ಸೂರಜ್ ಮನೆಯಲ್ಲಿ ಮದುವೆಗೆ ಒಪ್ಪಿಗೆ ಸಿಕ್ಕರೂ ಮೋಯಿನ್ ಖಾತೂನ್ ಮನೆಯವರು ಧರ್ಮದ ಕಾರಣಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಅವರ ಮಾತು ಕೇಳದ ಮೋಯಿನ್ ಖಾತೂನ್ ಇದೀಗ ಸೂರಜ್‍ನನ್ನು ಮದುವೆ ಆಗಿದ್ದಾಳೆ. ಸಂಭ್ರಮದಿಂದ ನಡೆದ ಮದುವೆ ಸಮಾರಂಭದಲ್ಲಿ ಕುಟುಂಬ ಸದಸ್ಯರು ಮತ್ತು ಗಣ್ಯರು ಈ ಯುವ ಜೋಡಿಗೆ ಆಶೀರ್ವದಿಸಿದ್ದರು. ಇದನ್ನೂ ಓದಿ: ಹಿಂದಿ ಪ್ರೇಮದ ಉತ್ತುಂಗದಲ್ಲಿ ಕನ್ನಡದ ಕೊಲೆ ನಿಲ್ಲಿಸಿ – ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿ

ಮದುವೆಯ ಬಳಿಕ ಇದೀಗ ಈ ಜೋಡಿಗೆ ಸಮುದಾಯದ ಸಂಘಟನೆಗಳಿಂದ ಬೆದರಿಕೆ ಕರೆ ಬರಲಾರಂಭಿಸಿದೆ. ಇದೀಗ ಈ ಜೋಡಿಯನ್ನು ರಕ್ಷಿಸುವ ಜವಾಬ್ದಾರಿಯನ್ನು ವಿಶ್ವ ಹಿಂದೂ ಪರಿಷತ್‌ ವಹಿಸಿಕೊಂಡಿದೆ. ಧರ್ಮದ ಎಲ್ಲೆ ಮೀರಿ ಮದುವೆಯಾದ ಈ ಜೋಡಿಗೆ ಆಘಾತ ಎದುರಾಗಿದೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *