ಸದ್ದಿಲ್ಲದೇ ಬಸ್‌ ಹತ್ತಿ, ಮೊಬೈಲ್‌ ಎಗರಿಸಿಕೊಂಡು ಹೋಗ್ತಿದ್ರು; 120 ಮೊಬೈಲ್‌ಗಳೊಂದಿಗೆ ಕಳ್ಳಿಯರ ಗ್ಯಾಂಗ್‌ ಸಿಕ್ಕಿಬಿದ್ದಿದ್ದು ಹೇಗೆ?

– ರಶ್‌ ಆಗಿರೋ ಬಸ್‌ಗಳಿಗೆ ಮಾತ್ರ ಹತ್ತುತ್ತಿದ್ದ ಕಳ್ಳಿಯರು

ಬೆಂಗಳೂರು: ನಗರದ ಹೊರವಲಯದಲ್ಲಿ ಟೆಂಟ್ ಹಾಕಿಕೊಂಡು ವಾಸ ಮಾಡ್ತಿದ್ದವರ ಬಳಿ ಸಿಕ್ಕಿದ್ವು ನೂರಾರು ಮೊಬೈಲ್‌ಗಳು, ಐಟಿ ಬಿಟಿ ಏರಿಯಾಗಳಲ್ಲಿ ಬಿಎಂಟಿಸಿ ಬಸ್‌ಗಳಲ್ಲಿ (BMTC Bus) ಓಡಾಡುತ್ತಿದ್ದ ಮಹಿಳೆಯರ ಮೊಬೈಲ್‌ಗಳನ್ನೇ ಟಾರ್ಗೆಟ್ ಮಾಡ್ತಾ ಇದ್ದ ಕಳ್ಳಿಯರ ಗ್ಯಾಂಗ್ ರಾಜಧಾನಿಯಲ್ಲಿ ಸಿಕ್ಕಿ ಬಿದ್ದಿರೊ ಸ್ಟೋರಿ ಇದೆ ನೋಡಿ.

ಹೊಂಚು ಹಾಕಿ ಬಿಎಂಟಿಸಿ ಬಸ್ ಹತ್ತೋ ಮಹಿಳೆಯರನ್ನ (Women) ನೋಡಿ. ಏನೋ ಕೆಲಸದ ಅರ್ಜೆಂಟ್‌ನಲ್ಲಿ ಬಸ್‌ಗೆ ಹತ್ತುತ್ತಿದ್ದಾರೆ ಅಂದುಕೊಂಡ್ರೆ ಖಂಡಿತಾ ನಿಮ್ಮ ಊಹೆ ತಪ್ಪು. ಇಷ್ಟಕ್ಕೂ ಇವರು ಹೀಗೆ ಬಸ್ ಹತ್ತುತ್ತಿರೋದು ಕೆಲಸಕ್ಕೆ ಹೋಗೋಕಲ್ಲ, ಮೊಬೈಲ್ ಕದಿಯೋಕೆ. ರಾಜಧಾನಿ ಬೆಂಗಳೂರಲ್ಲಿ ತುಂಬಾ ರಶ್ ಇರುವ ಐಟಿ-ಬಿಟಿ ಏರಿಯಾಗಳ ಬಿಎಂಟಿಸಿ ಬಸ್ ಹತ್ತೋ ಇವ್ರು ಮಹಿಳೆಯರ ಮೊಬೈಲ್‌ಗಳನ್ನ (Mobile) ಕದಿಯೋದೇ ಟಾರ್ಗೇಟ್ ಮಾಡಿಕೊಂಡಿದ್ದರು. ಇಂತಹ ಕಳ್ಳಿಯರ ಗ್ಯಾಂಗನ್ನ ಬೆಂಗಳೂರಿನ ಮಹದೇವಪುರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಎನ್.ವಿ ಅಂಜಾರಿಯಾ ನೇಮಕ

ಹೀಗೆ ಪೊಲೀಸರಿಗೆ ಸಿಕ್ಕಿಬಿದ್ದವರ ಹೆಸರು ರಾಧಾ, ನಂದಿನಿ, ಸುಜಾತ, ಶಂಕರಮ್ಮ ಅಂತಾ. ಬಹುತೇಕರು ದೂರದ ಅನಂತಪುರದವರು. ಆದರೆ ಇಲ್ಲಿಗೆ ಬಂದು ರಾಜಧಾನಿಯ ಹೊರವಲಯದ ಹೊಸಕೋಟೆ ಬಳಿಯ ಚೊಕ್ಕನಹಳ್ಳಿಯಲ್ಲಿ ಮನೆ ಮಾಡಿಕೊಂಡು ರಾಜಧಾನಿಗೆ ಮೊಬೈಲ್ ಕದಿಯೋಕೆ ಅಂತಲೇ ಬರ್ತಿದ್ದರು. ಬಸ್ ಗಳು ತುಂಬಾ ರಶ್ ಇರುವ ಸಮಯದಲ್ಲಿ ಬಸ್ ಹತ್ತಿ ನೂಕಾಟದಲ್ಲಿ ಮಹಿಳೆಯರ ಮೊಬೈಲ್ ಎಗರಿಸಿ ಪುನಃ ವಾಪಸ್‌ ಮನೆಗೆ ಹೋಗ್ತಿದ್ರು. ಹೀಗೆ ಒಂದಷ್ಟು ಮೊಬೈಲ್ ಸಂಗ್ರಹಿಸಿ ಅನಂತಪುರದ ವ್ಯಕ್ತಿಯೊಬ್ಬನ ಕರೆಸಿ ಸೇಲ್ ಮಾಡಿದ್ದರು. ಇದನ್ನೂ ಓದಿ: ಶಾಲಾ-ಕಾಲೇಜುಗಳ ಅಭಿವೃದ್ಧಿಗೆ 850 ಕೋಟಿ ರೂ. ಅನುದಾನ; ಸಿಎಂಗೆ ಮಧು ಬಂಗಾರಪ್ಪ ಅಭಿನಂದನೆ

ಸದ್ಯ ಆರೋಪಿ ಮಹಿಳೆಯರಿಂದ ಮಹದೇವಪುರ ಠಾಣಾ ಪೊಲೀಸ್ರು ಬರೋಬ್ಬರಿ 30 ಲಕ್ಷ ಮೌಲ್ಯದ 120 ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಅಲ್ಲದೇ ಇವರಿಂದ ಮೊಬೈಲ್‌ಗಳನ್ನ ಕೊಂಡುಕೊಳ್ಳುತ್ತಿದ್ದ ವ್ಯಕ್ತಿಗೂ ಬಲೆ ಬೀಸಿದ್ದು, ತನಿಖೆ ಮುಂದುವರಿದಿದೆ. ಇದನ್ನೂ ಓದಿ: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ʻಚಿನ್ನʼ ಗೆದ್ದವರಿಗೆ 6 ಕೋಟಿ ರೂ. ಗಿಫ್ಟ್‌ – – ಬೆಂಗ್ಳೂರಿಗೇ ಬರಲಿದೆ ʻಕ್ರೀಡಾ ನಗರʼ