ಕೈಕುಲುಕಿ ರಾಹುಲ್ ಗಾಂಧಿಗೆ ಯುವಕ ಕಿಸ್- ವಿಡಿಯೋ

ತಿರುವನಂತಪುರಂ: ಸಂಸದ ರಾಹುಲ್ ಗಾಂಧಿಯವರು ಇಂದು ತಮ್ಮ ಕ್ಷೇತ್ರ ವಯನಾಡಿಗೆ ಭೇಟಿ ನೀಡಿದ್ದು, ಈ ವೇಳೆ ಅಲ್ಲಿ ಯುವಕನೊಬ್ಬ ಕೈಕುಲುಕಿ ಮುತ್ತು ಕೊಟ್ಟ ಪ್ರಸಂಗ ನಡೆದಿದೆ.

ಹೌದು. ಕೇರಳದ ವಯನಾಡು ಸಂಸದರಾಗಿರುವ ರಾಹುಲ್ ಗಾಂಧಿಯವರು ಇತ್ತೀಚೆಗೆ ಪ್ರವಾಹಕ್ಕೀಡಾದ ಪ್ರದೇಶಗಳಿಗೆ ಭೇಟಿ ನೀಡಲು ತೆರಳಿದ್ದಾರೆ. ತಮ್ಮ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಯುವಕನೊಬ್ಬ ಕಿಸ್ ಮಾಡಿದ್ದಾನೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ವಿಡಿಯೋದಲ್ಲೇನಿದೆ?
ಪ್ರವಾಹಕ್ಕೀಡಾದ ಪ್ರದೇಶಗಳ ವೀಕ್ಷಣೆಗೆಂದು ರಾಹುಲ್ ಗಾಂಧಿಯವರು ತಮ್ಮ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ರಸ್ತೆ ಬದಿಯಲ್ಲಿದ್ದವರು ರಾಹುಲ್ ಗಾಂಧಿಯವರ ಕೈಕುಲುಕಿ ಸ್ವಾಗತ ಮಾಡುತ್ತಿದ್ದರು. ಇದೇ ವೇಳೆ ಬಂದ ಯುವಕ ಕೈ ಕುಲುಕಿ, ಕೂಡಲೇ ಕಾರೊಳಗಿದ್ದ ರಾಹುಲ್ ಅವರನ್ನು ಎಳೆದುಕೊಂಡು ಕೆನ್ನೆಗೆ ಕಿಸ್ ಮಾಡಿದ್ದಾನೆ. ಆದರೆ ಈ ವೇಳೆ ರಾಹುಲ್ ಗಾಂಧಿಯವರು ಯುವಕನನ್ನು ದೂರ ತಳ್ಳದೆ ನಕ್ಕಿರುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದಾಗಿದೆ.

ಅತೀ ಹೆಚ್ಚು ಭದ್ರತೆಯನ್ನು ಹೊಂದಿರುವ ದೇಶದ ರಾಜಕಾರಣಿಗಳ ಪೈಕಿ ರಾಹುಲ್ ಗಾಂಧಿ ಕೂಡ ಒಬ್ಬರಾಗಿದ್ದಾರೆ. ರಾಹುಲ್ ಗಾಂಧಿ ಜೊತೆ ಯಾವತ್ತೂ ಎಸ್‍ಪಿಜಿ(ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್) ಕಮಾಂಡೋಗಳು ಇದ್ದೇ ಇರುತ್ತಾರೆ. ರಾಹುಲ್ ಗಾಂಧಿಯವರು ತಮ್ಮ ಕ್ಷೇತ್ರಕ್ಕೆ ಭೇಟಿ ನೀಡುವಾಗ ಹಾಗೂ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಜನಗಳ ಮಧ್ಯೆಯೇ ಇರುತ್ತಿದ್ದರು. ಇದರಿಂದ ಕಮಾಂಡೋಗಳಿಗೆ ರಾಹುಲ್ ಗೆ ರಕ್ಷಣೆ ಕೊಡಲು ಕಷ್ಟವಾಗುತಿತ್ತು.

ಕಳೆದ ಫೆಬ್ರವರಿ ತಿಂಗಳಲ್ಲಿ ಗುಜರಾತಿನನ ವಲ್ಸದ್ ನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಹಿಳೆಯೊಬ್ಬರು ವೇದಿಕೆಯಲ್ಲೇ ರಾಹುಲ್ ಗಾಂಧಿಗೆ ಕಿಸ್ ಕೊಟ್ಟಿದ್ದರು. ಏಕಾಏಕಿ ವೇದಿಕೆ ಏರಿದ ಮಹಿಳೆ ರಾಹುಲ್ ಅವರಿಗೆ ಮುತ್ತಿಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.

Comments

Leave a Reply

Your email address will not be published. Required fields are marked *