ಬೆಂಗ್ಳೂರು ಕುದುರೆಗಳಿಗೆ ಗ್ಲಾಂಡರ್ಸ್‌ ರೋಗ ಕಂಟಕ; ಚಿತಾಗಾರದಲ್ಲಿ ರೋಗ ಪೀಡಿತ ಕುದುರೆ ಬರ್ನಿಂಗ್‌

ಬೆಂಗಳೂರು: ರಾಜಧಾನಿಯ ಕುದುರೆಗಳಿಗೆ ಗ್ಲಾಂಡರ್ಸ್‌ ರೋಗದ (Glanders Disease) ಕಂಟಕ ಎದುರಾಗಿದೆ. ಡಿಜೆ ಹಳ್ಳಿ ಕುದುರೆಯಲ್ಲಿ ಗ್ಲಾಂಡರ್ಸ್‌ ರೋಗ ಪತ್ತೆಯಾಗಿದೆ.

ರೋಗ ಪತ್ತೆಯಾದ ಕುದುರೆಯನ್ನು ಸುಮ್ಮನಹಳ್ಳಿಯ ಚಿತಾಗಾರದಲ್ಲಿ ಬರ್ನಿಂಗ್‌ ಮಾಡಲಾಗಿದೆ. ಬರ್ನಿಂಗ್ ಮಾಡಿ ಕುದುರೆ ಇದ್ದ ಪ್ರದೇಶದಲ್ಲಿ ಬಿಬಿಎಂಪಿ ಅಧಿಕಾರಿಗಳು ರೋಗ ನಿರೋಧಕ ಪೌಡರ್ ಹಾಕಿದ್ದಾರೆ. ಇದನ್ನೂ ಓದಿ: ಹಬ್ಬಗಳನ್ನೂ ಪೊಲೀಸ್ ಬಂದೋಬಸ್ತ್‌ನಲ್ಲಿ ಆಚರಿಸಬೇಕಿರೋದು ದುರ್ದೈವ: ಪ್ರಿಯಾಂಕ್ ಖರ್ಗೆ ವಿಷಾದ

ರೋಗ ಪೀಡಿತ ಕುದುರೆ ಇದ್ದ ಜಾಗವನ್ನು ನಿಷೇಧಿತ ಪ್ರದೇಶ ಎಂದು ಘೋಷಿಸಿ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಕಂಟೈನ್ ಮಾಡಿದ್ದಾರೆ.