ಕೆಲಸವಿಲ್ಲದಾಗ ಬಡ ಹುಡುಗಿಯ ಪ್ರೀತಿ ಬೇಕಿತ್ತು- ಸರ್ಕಾರಿ ಕೆಲ್ಸ ಸಿಕ್ಕಿದ್ಮೇಲೆ ಬೇರೆ ಹುಡ್ಗಿಯನ್ನ ಮದ್ವೆಯಾಗಿ ಪರಾರಿ

ತುಮಕೂರು: ಈ ಭೂಪನಿಗೆ ಸರ್ಕಾರಿ ನೌಕರಿ ಸಿಗೋವರೆಗೂ ಬಡ ಹೆಣ್ಣುಮಗಳ ಮೇಲೆ ಪ್ರೀತಿ ಉಕ್ಕಿ ಹರಿಯುತ್ತಿತ್ತು. ಸಿನಿಮಾ, ಪಾರ್ಕ್ ಎಂದು ಸುತ್ತಿ ಆ ಹುಡುಗಿ ಜೊತೆ ರಸ ನಿಮಿಷಗಳನ್ನು ಕಳೆದಿದ್ದ. ಆದ್ರೆ ಸರ್ಕಾರಿ ನೌಕರಿ ಸಿಕ್ಕಿದ್ದೇ ತಡ 9 ವರ್ಷ ಪ್ರೀತಿಸಿದ ಹುಡುಗಿಗೆ ಕೈ ಕೊಟ್ಟು ಶ್ರೀಮಂತ ಹುಡುಗಿ ಜೊತೆ ಪರಾರಿಯಾಗಿದ್ದಾನೆ.

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಪಂಚಾಯ್ತಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಮಂಜುನಾಥನ ಮೇಲೆ ಈ ಆರೋಪ ಕೇಳಿಬಂದಿದೆ. ಅದೇ ಜಿಲ್ಲೆಯ ಅರೆಗುಜ್ಜನಳ್ಳಿ ಗ್ರಾಮದ ಯುವತಿ ಗೌರಮ್ಮಳನ್ನು 9 ವರ್ಷಗಳ ಕಾಲ ಪ್ರೀತಿಸಿ, ಲೈಂಗಿಕವಾಗಿ ಬಳಸಿಕೊಂಡು ಈಗ ಬೇರೆ ಹುಡುಗಿ ಜೊತೆ ಮದುವೆಯಾಗಿದ್ದಾನೆ.

ಮೂರು ವರ್ಷದ ಹಿಂದೆ ಮಂಜುನಾಥನಿಗೆ ಸರ್ಕಾರಿ ನೌಕರಿ ಸಿಕ್ಕಿದೆ. ಅಲ್ಲಿಂದ ಗೌರಮ್ಮಳ ಜೊತೆ ನಿಧಾನವಾಗಿ ದೂರವಾಗುತ್ತಾ ಬಂದಿದ್ದಾನೆ. ಇದನ್ನು ಗಮನಿಸಿದ ಯುವತಿ ಹಾಗೂ ಗೌರಮ್ಮ ಪೋಷಕರು ಪೊಲೀಸರಿಗೆ ದೂರು ಕೊಟ್ಟು ದೇವಸ್ಥಾನದಲ್ಲಿ ಹಾರ ಬದಲಾಯಿಸಿ ಮದುವೆ ಮಾಡಿದ್ದರು.

ಈ ಮದುವೆ ಒಪ್ಪದ ಮಂಜುನಾಥ್ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ಮದುವೆ ಮಾಡಿಕೊಡಿ ಎಂದು ಬೇಡಿಕೆ ಇಟ್ಟಿದ್ದ. ನಂತರ ಫೆಬ್ರವರಿ 24 ಹಾಗೂ 25ರಂದು ಮದುವೆ ಡೇಟ್ ತಾನೇ ಫಿಕ್ಸ್ ಮಾಡಿದ್ದ.

ಕಳೆದ ಭಾನುವಾರ ಕಲ್ಯಾಣ ಮಂಟಪ ಬುಕ್ ಮಾಡುವ ಸಲುವಾಗಿ ಯುವತಿ ಪೋಷಕರು ಮಂಜುನಾಥ್ ಮನೆಗೆ ಹೋದಾಗ ಆತ ಮನೆಗೆ ಬೀಗ ಹಾಕಿದ್ದು, ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಅಕ್ಕ ಪಕ್ಕ ಮನೆಯವರನ್ನು ವಿಚಾರಿಸಿದಾಗ ಮಂಜುನಾಥ್ ಬೇರೆ ಹುಡುಗಿ ಜೊತೆ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.

ಮಂಜುನಾಥನ ಮೋಸದಿಂದ ಪ್ರೀತಿಸಿದ ಯುವತಿ ಗೌರಮ್ಮ ನೊಂದಿದ್ದಾರೆ. ಮಂಜುನಾಥ್ ಇಲ್ಲದೆ ನಾನು ಬದುಕಲ್ಲ ಎಂದು ಹೇಳುತ್ತಿದ್ದಾರೆ.

Comments

Leave a Reply

Your email address will not be published. Required fields are marked *