ಕುಡಿದ ಮತ್ತಿನಲ್ಲಿ ಸಿಗರೇಟ್‌ನಿಂದ ಮರ್ಮಾಂಗ ಸುಟ್ಟು ಸ್ನೇಹಿತನ ಹತ್ಯೆ!

ಬೆಂಗಳೂರು: ಕುಡಿದ ಮತ್ತಿನಲ್ಲಿ ಸಿಗರೇಟ್‌ನಿಂದ ಮರ್ಮಾಂಗ ಸುಟ್ಟು ಭೀಕರ ಹತ್ಯೆಗೈದಿರುವ ಘಟನೆ ಬೆಂಗಳೂರು (Bengaluru) ಉತ್ತರ ತಾಲ್ಲೂಕಿನ ಭೋವಿತಿಮ್ಮನಪಾಳ್ಯದಲ್ಲಿ (Bhovi Timmana Palya) ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮೃತ ವ್ಯಕ್ತಿಯನ್ನು ಪ್ರದೀಪ್ (41) ಹಾಗೂ ಆರೋಪಿಯನ್ನು ಚೇತನ್ (30) ಎಂದು ಗುರುತಿಸಲಾಗಿದೆ.ಇದನ್ನೂ ಓದಿ: 4 ರನ್‌ ಗಳಿಸಿ ವೈಭವ್‌ ವಿಶೇಷ ಸಾಧನೆ – 13ರ ಬಾಲಕನಿಗೆ ಹಿರಿಯ ಕ್ರಿಕೆಟಿಗರಿಂದ ಮೆಚ್ಚುಗೆ

ಡಿ.19 ರಂದು ಈ ಘಟನೆ ನಡೆದಿದೆ. ಮೃತ ಪ್ರದೀಪ್ ಹೆಂಡತಿಯೊಂದಿಗೆ ಜಗಳವಾಡಿಕೊಂಡಿದ್ದ, ಇದರಿಂದ ಇಬ್ಬರು ಬೇರೆಯಾಗಿದ್ದರು. ಆಕೆಯನ್ನ ಆರೋಪಿ ಚೇತನ್ ತನ್ನ ಮನೆಯಲ್ಲಿ ಇರಿಸಿಕೊಂಡಿದ್ದ. ಇದರಿಂದ ಕುಡಿದ ಮತ್ತಿನಲ್ಲಿ ಬಂದ ಪ್ರದೀಪ್ ಅವನ ಮನೆಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದ. ಇದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆಯಾಗಿದೆ. ಪ್ರದೀಪ್ ತಲೆಯನ್ನು ಗೋಡೆಗೆ ಗುದ್ದಿಸಿ, ಸಿಗರೇಟ್‌ನಿಂದ ಮರ್ಮಾಂಗವನ್ನು ಸುಟ್ಟು ಹತ್ಯೆ ಮಾಡಿದ್ದಾನೆ.

ಘಟನೆ ಸಂಬಂಧ ಆರೋಪಿ ಚೇತನ್‌ನನ್ನು ಪೊಲೀಸರು ಬಂಧಿಸಿದ್ದು, ಸಲಿಂಗಕಾಮಕ್ಕೆ ಸ್ನೇಹಿತನನ್ನು ಹತ್ಯೆ ಮಾಡಿರಬಹುದು ಎಂಬ ಶಂಕೆಯಲ್ಲಿ ಶಂಕಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡು ಮಾದನಾಯನಹಳ್ಳಿ (Madanayanahalli) ಪೊಲೀಸರು ತನಿಖೆ ಮುಂದುವರೆಸಿದ್ದಾರೆ.ಇದನ್ನೂ ಓದಿ: ಬೆಂಗಳೂರು – ಪುಣೆ ದಶಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅತಿ ಶೀಘ್ರ: ಟಿ.ಬಿ ಜಯಚಂದ್ರ